ವಿಶ್ವಕಪ ನಲ್ಲಿ ಪಾಕ್ ವೈಫಲ್ಯ : ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ರಾಜೀನಾಮೆ

World Cup 2023 :ಪಾಕ್ ತಂಡ  ಟೂರ್ನಿಯಿಂದ ಹೊರ ಬೀಳುತ್ತಿದ್ದಂತೆಯೇ  ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

Written by - Ranjitha R K | Last Updated : Nov 14, 2023, 10:51 AM IST
  • ವಿಶ್ವಕಪ್‌ ಟೂರ್ನಿಯಿಂದ ಹೊರಬಿದ್ದ ಪಾಕಿಸ್ತಾನ ತಂಡ
  • ಪಾಕಿಸ್ತಾನ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ರಾಜೀನಾಮೆ
  • ಆಸ್ಟ್ರೇಲಿಯಾ ಟೆಸ್ಟ್ ಸರಣಿಗೂ ಮುನ್ನ ಹೊಸ ಕೋಚ್
ವಿಶ್ವಕಪ ನಲ್ಲಿ ಪಾಕ್ ವೈಫಲ್ಯ : ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ರಾಜೀನಾಮೆ title=

World Cup 2023 : ವಿಶ್ವಕಪ್‌ ಟೂರ್ನಿಯಿಂದ ಪಾಕಿಸ್ತಾನ ತಂಡ ಹೊರಬಿದ್ದಿದೆ. ಪಾಕ್ ತಂಡ  ಟೂರ್ನಿಯಿಂದ ಹೊರ ಬೀಳುತ್ತಿದ್ದಂತೆಯೇ  ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾರ್ನೆ ಮಾರ್ಕೆಲ್ ರಾಜೀನಾಮೆಯನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಖಚಿತಪಡಿಸಿದೆ. ಅಲ್ಲದೆ,  ಮುಂದಿನ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೂ ಮುನ್ನ ಹೊಸ ಕೋಚ್ ಅನ್ನು ನೇಮಿಸುವುದಾಗಿ ಪಿಸಿಬಿ ಸ್ಪಷ್ಟಪಡಿಸಿದೆ. 

ಪಾಕಿಸ್ತಾನ ತಂಡ ವಿಶ್ವಕಪ್ ಟೂರ್ನಿಯಿಂದ ಹೊರ ಬಿದ್ದ ಬಳಿಕ ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ನವೆಂಬರ್‌ 13 ಅಂದರೆ ನಿನ್ನೆ  ತಮ್ಮ ರಾಜೀನಾಮೆ  ಪ್ರಕಟಿಸಿದ್ದಾರೆ. ಮಾರ್ಕೆಲ್  2023ರ ಜೂನ್‌ ತಿಂಗಳಲ್ಲಿ ಅವರಿಗೆ ಆರು ತಿಂಗಳ ಗುತ್ತಿಗೆ ಪಡೆದಿದ್ದರು.  ಅಂದರೆ 2024 ಜನವರಿ ವರೆಗೆ ರವರೆಗೆ ಮಾರ್ಕೆಲ್ ಕಾಂಟ್ರಾಕ್ಟ್ ಅವಧಿ ಇತ್ತು. ಆದರೆ ಅದಕ್ಕೂ ಮುನ್ನವೇ ಮಾರ್ಕೆಲ್  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಇದನ್ನೂ ಓದಿ : ಭಾರತ vs ನ್ಯೂಜಿಲೆಂಡ್ ಸೆಮಿಫೈನಲ್’ನಲ್ಲಿ ಗೆಲ್ಲೋದು ಇದೇ ತಂಡ: ಮುಲಾಜಿಲ್ಲದೆ ಕಾರಣ ಸಮೇತ ಭವಿಷ್ಯ ನುಡಿದ ಭಜ್ಜಿ

ಮಾರ್ಕೆಲ್ ಅವಧಿಗೆ ಮುನ್ನವೇ ತಂಡದಿಂದ ನಿರ್ಗಮಿಸುತ್ತಿದ್ದಾರೆ. ಇತರ ಲೀಗ್‌ಗಳಲ್ಲಿ ಭಾಗಿಯಾಗಬೇಕಾಗಿರುವುದರಿಂದ ಹೆಚ್ಚು ಸಮಯ ಅವರು ನಮ್ಮೊಂದಿಗೆ ಇರಲು  ಸಾಧ್ಯವಾಗುವುದಿಲ್ಲ ಎಂದು ಪಾಕಿಸ್ತಾನದ ತಂಡದ ನಿರ್ದೇಶಕ ಮಿಕ್ಕಿ ಆರ್ಥರ್ ಹೇಳಿದ್ದಾರೆ. ಆದರೆ ಅಲ್ಪಾವಧಿಯ ಅವರ ಕಾರ್ಯ ವೈಖರಿ ಸಂತಸ ನೀಡಿದೆ ಎಂದಿದ್ದಾರೆ. 

ಕೋಲ್ಕತ್ತಾದಲ್ಲಿ ನಡೆದ ತನ್ನ ಅಂತಿಮ ಲೀಗ್‌ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 93 ರನ್‌ಗಳಿಂದ ಸೋತ ಪಾಕಿಸ್ತಾನ ಅಧಿಕೃತವಾಗಿ ವಿಶ್ವಕಪ್‌ನಿಂದ ಹೊರಬಿತ್ತು. ಇಡೀ ಟೂರ್ನಿಯಲ್ಲಿ ಐದು ಪಂದ್ಯಗಳಲ್ಲಿ ಸೋಲು ಕಂಡ  ಪಾಕ್  ಸೆಮಿ ಫೈನಲ್ ತಲುಪುವಲ್ಲಿ ವಿಫಲವಾಯಿತು.‌ ವಿಶ್ವಕಪ್ ಪಂದ್ಯಾವಳಿಯ ಉದ್ದಕ್ಕೂ ಕಳಪೆ ಪ್ರದರ್ಶನ ನೀಡಿರುವ ಕಾರಣ ನಾಯಕ ಬಾಬರ್ ಅಜಾಮ್ ಮತ್ತು ನಿರ್ದೇಶಕ ಮಿಕ್ಕಿ ಆರ್ಥರ್  ಟೀಕೆಗೆ ಗುರಿಯಾಗಿದ್ದರು. 

ಇದನ್ನೂ ಓದಿ : ಸತತ ಗೆಲುವುಗಳ ಮಧ್ಯೆ ಶ್ರೇಷ್ಠ ದಾಖಲೆ ಬರೆದ ರೋಹಿತ್! ವಿಶ್ವಕಪ್ ಇತಿಹಾಸದಲ್ಲಿ ಯಾವೊಬ್ಬ ನಾಯಕನೂ ಮಾಡಿರದ ಸಾಧನೆ ಇದು

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News