Mitchell Starc: ಸೆಮಿಫೈನಲ್ಗೂ ಮುನ್ನವೇ ಮ್ಯಾಚ್ ವಿನ್ನರ್ ದೊಡ್ಡ ಘೋಷಣೆ, ಮುಂದಿನ ವಿಶ್ವಕಪ್ ಆಡಲ್ವಂತೆ ಈ ಆಟಗಾರ
Mitchell Starc: ವಿಶ್ವಕಪ್ 2023ರ ಮಧ್ಯೆ ಸೆಮಿಫೈನಲ್ ತಲುಪಿದ ತಂಡದ ಆಟಗಾರರೊಬ್ಬರು ತಮ್ಮ ನಿವೃತ್ತಿ ಕುರಿತಂತೆ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ.
Mitchell Starc: 2023ರ ವಿಶ್ವಕಪ್ ಪಂದ್ಯವು ಸೆಮಿ ಫೈನಲ್ ಹಂತವನ್ನು ತಲುಪಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಎರಡನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಈ ಮಧ್ಯೆ ಆಸ್ಟ್ರೇಲಿಯದ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಮಹತ್ವದ ಘೋಷಣೆ ಮಾಡಿದ್ದಾರೆ.
ಈ ಕುರಿತಂತೆ ಸೋಮವಾರ (13 ನವೆಂಬರ್, 2023) ಮಾತನಾಡಿರುವ ಆಸ್ಟ್ರೇಲಿಯದ ಅನುಭವಿ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್, ತಾವು ಮುಂದಿನ ವಿಶ್ವಕಪ್ ಆಡುವುದಿಲ್ಲ. ಆದರೆ, ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ- ಭಾರತ vs ನ್ಯೂಜಿಲೆಂಡ್ ಸೆಮಿಫೈನಲ್’ನಲ್ಲಿ ಗೆಲ್ಲೋದು ಇದೇ ತಂಡ: ಮುಲಾಜಿಲ್ಲದೆ ಕಾರಣ ಸಮೇತ ಭವಿಷ್ಯ ನುಡಿದ ಭಜ್ಜಿ
ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್ ಪಂದ್ಯದವರೆಗೆ ಮಿಚೆಲ್ ಸ್ಟಾರ್ಕ್ ಅವರಿಗೆ 37 ವರ್ಷ ವಯಸ್ಸಾಗಿರುತ್ತದೆ. 2015 ರಲ್ಲಿ ಏಕದಿನ ವಿಶ್ವಕಪ್ ಮತ್ತು 2021ರಲ್ಲಿ ಟಿ20 ವಿಶ್ವಕಪ್ ಭಾಗವಾಗಿದ್ದ ಮಿಚೆಲ್ ಸ್ಟಾರ್ಕ್ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡುತ್ತ, 'ಈ ವಿಶ್ವಕಪ್ ನಂತರ ನಾನು ಆಡುವುದನ್ನು ಮುಂದುವರಿಸುತ್ತೇನೆ, ಆದರೆ ಮುಂದಿನ ವಿಶ್ವಕಪ್‌ನಲ್ಲಿ ನಾನು ಆಡುವುದಿಲ್ಲ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ' ಎಂದು ಹೇಳಿದರು.
ಇದನ್ನೂ ಓದಿ- ಸತತ ಗೆಲುವುಗಳ ಮಧ್ಯೆ ಶ್ರೇಷ್ಠ ದಾಖಲೆ ಬರೆದ ರೋಹಿತ್! ವಿಶ್ವಕಪ್ ಇತಿಹಾಸದಲ್ಲಿ ಯಾವೊಬ್ಬ ನಾಯಕನೂ ಮಾಡಿರದ ಸಾಧನೆ ಇದು
ಈ ವಿಶ್ವಕಪ್‌ನಲ್ಲಿ ತನ್ನ ಕೆಳಮಟ್ಟದ ಪ್ರದರ್ಶನಕ್ಕಾಗಿ "ಫ್ಲಾಟ್ ವಿಕೆಟ್‌ಗಳನ್ನು" ದೂಷಿಸಿದ ಸ್ಟಾರ್ಕ್, "ನಾನು ಖಂಡಿತವಾಗಿಯೂ ನಾನು ಇಷ್ಟಪಡುವ ಮಟ್ಟದಲ್ಲಿ ಇರಲಿಲ್ಲ... ಅಥವಾ ಕಳೆದ ಎರಡು ವಿಶ್ವಕಪ್‌ಗಳಂತೆಯೇ ಆಡಲಿಲ್ಲ. ಆದಾಗ್ಯೂ, ನನಗೆ ಮತ್ತೊಂದು ಅವಕಾಶವಿದೆ ಎಂದು," ಅವರು ತಿಳಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.