IND VS NZ, Harbhajan Singh Prediction: ವಿಶ್ವಕಪ್ 2023ರ ಮೊದಲ ಸೆಮಿಫೈನಲ್ ಪಂದ್ಯವು ಬುಧವಾರ ಅಂದರೆ ಅಕ್ಟೋಬರ್ 15 ರಂದು ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯ ಭಾರತದ ದೃಷ್ಟಿಯಿಂದ ವಿಶೇಷವಾಗಲಿದೆ.
ಇದುವರೆಗೆ ನಡೆದ ಪಂದ್ಯಗಳಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ ನಾಕೌಟ್’ನಲ್ಲಿ ಸೋಲನ್ನು ಎದುರಿಸಿದೆ, ಆದರೆ ಈ ಬಾರಿ ಪರಿಸ್ಥಿತಿ ವಿಭಿನ್ನವಾಗಿದೆ. ಟೀಂ ಇಂಡಿಯಾ ಉತ್ತಮ ಲಯದಲ್ಲಿದ್ದು, ತಂಡದ ಅಗ್ರ ಕ್ರಮಾಂಕವು ಅತ್ಯುತ್ತಮ ಫಾರ್ಮ್ನಲ್ಲಿದೆ. ಅಷ್ಟೇ ಅಲ್ಲದೆ, ಬೌಲರ್’ಗಳು ಕೂಡ ಅಮೋಘ ಫಾರ್ಮ್ ಕಾಯ್ದುಕೊಂಡಿದ್ದಾರೆ. ಈ ನಡುವೆ ಭಾರತ-ನ್ಯೂಜಿಲೆಂಡ್ ಪಂದ್ಯಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಹರ್ಭಜನ್ ಸಿಂಗ್ ಭವಿಷ್ಯ ನುಡಿದಿದ್ದಾರೆ.
“ಈ ಬಾರಿಯ ವಿಶ್ವಕಪ್ ಪ್ರಶಸ್ತಿ ಭಾರತದ ಖಾತೆಗೆ ಸೇರಲಿದೆ. ಇದು ದೀಪಾವಳಿಯ ಅತ್ಯುತ್ತಮ ಉಡುಗೊರೆಯಾಗಲಿದೆ” ಎಂದು ಹರ್ಭಜನ್ ಸಿಂಗ್ ಭವಿಷ್ಯ ಹೇಳಿದ್ದಾರೆ.
“ಪಂದ್ಯದಲ್ಲಿ ತಂಡವು ಮೊದಲು ಬ್ಯಾಟ್ ಮಾಡಿದಾಗ, ಅದು 400 ರನ್ ಗಳಿಸಲು ಪ್ರಯತ್ನಿಸುತ್ತದೆ. ಅದೇ ರೀತಿ ಮೊದಲು ಬೌಲಿಂಗ್ ಮಾಡಿದರೆ ತಂಡದ ಬೌಲರ್ಗಳು ಎದುರಾಳಿ ತಂಡವನ್ನು ಕನಿಷ್ಠ ರನ್ ಗಳಿಸುವಂತೆ ಮಾಡುತ್ತದೆ. ಈ ಟೂರ್ನಿಯಲ್ಲಿ ತಂಡದ ಪ್ರತಿಯೊಂದು ವಿಭಾಗವೂ ಅದ್ಭುತ ಪ್ರದರ್ಶನ ನೀಡುತ್ತಿದೆ. ಹೀಗಾಗಿ ನ್ಯೂಜಿಲೆಂಡ್ ಭಾರತವನ್ನು ಸೋಲಿಸಲು ಸಾಧ್ಯವಾಗುತ್ತದೆ ಎಂದು ನನಗನಿಸುತ್ತಿಲ್ಲ. ಕಳೆದ ಬಾರಿ ನ್ಯೂಜಿಲೆಂಡ್ ವಿರುದ್ಧ ಸೋತಿದ್ದೆವು ಆದರೆ ಈ ಬಾರಿ ಹಾಗಾಗುವುದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸತತ ಗೆಲುವುಗಳ ಮಧ್ಯೆ ಶ್ರೇಷ್ಠ ದಾಖಲೆ ಬರೆದ ರೋಹಿತ್! ಯಾವೊಬ್ಬ ನಾಯಕನೂ ಮಾಡಿರದ ಸಾಧನೆ ಇದು
“ಭಾರತ ತಂಡ ಚಾಂಪಿಯನ್ ಆಗಲು ಇನ್ನೆರಡು ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಇದಾದ ನಂತರ ನಾವು ಟೂರ್ನಿಯ ಪ್ರಶಸ್ತಿಯನ್ನು ಪಡೆಯುತ್ತೇವೆ. ಇಲ್ಲಿಯವರೆಗೂ ತಂಡವು ಟೂರ್ನಿಯಲ್ಲಿ ಆಡಿದ ರೀತಿಯಲ್ಲಿಯೇ ಆಟ ಮುಂದುವರಿಸಿದರೆ ನಾವು ಚಾಂಪಿಯನ್ ಆಗುವುದು ಖಚಿತ. ಒಂದು ಸಣ್ಣ ತಪ್ಪು ಕೂಡ ಸಮಸ್ಯೆಯನ್ನು ತರಬಲ್ಲದು. ಆದರೆ ಟೀಂ ಇಂಡಿಯಾ ಈ ಬಾರಿ ಯಾವುದೇ ತಪ್ಪುಗಳನ್ನು ಮಾಡುವುದಿಲ್ಲ ಎಂದು ನಾನು ಭರವಸೆ. ಈ ಬಾರಿ ನ್ಯೂಜಿಲೆಂಡ್ ಭಾರತದ ಕೈಯಲ್ಲಿ ಹೀನಾಯ ಸೋಲನ್ನು ಅನುಭವಿಸುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ