ICC Cricket World Cup 2023: ಪಾಕ್ ವಿರುದ್ಧ ಆಸ್ಟ್ರೇಲಿಯಾಗೆ 62 ರನ್ ಗಳ ಗೆಲುವು
ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಪಾಕ್ ವಿರುದ್ಧ 62 ರನ್ ಗಳ ಗೆಲುವು ಸಾಧಿಸಿದೆ.
ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಪಾಕ್ ವಿರುದ್ಧ 62 ರನ್ ಗಳ ಗೆಲುವು ಸಾಧಿಸಿದೆ.
ಮೊದಲು ಟಾಸ್ ಗೆದ್ದ ಪಾಕಿಸ್ತಾನ ತಂಡವು ಫೀಲ್ಡಿಂಗ್ ಆಯ್ದುಕೊಂಡಿತು. ಇದೆ ವೇಳೆ ಮೊದಲ ಇನಿಂಗ್ಸ್ ಬ್ಯಾಟಿಂಗ್ ಲಾಭ ಪಡೆದ ಆಸೀಸ್ ತಂಡವು ಭರ್ಜರಿ ಶುಭಾರಂಭವನ್ನೇ ಮಾಡಿತು.ಆಸೀಸ್ ತಂಡದ ಪರವಾಗಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಡೇವಿಡ್ ವಾರ್ನರ್ 9 ಸಿಕ್ಸರ್ ಹಾಗೂ 14 ಬೌಂಡರಿಗಳ ನೆರವಿನೊಂದಿಗೆ 124 ಎಸೆತಗಳಲ್ಲಿ 163 ರನ್ ಗಳಿಸಿದರೆ, ಇನ್ನೊಂದೆಡೆಗೆ ವಾರ್ನರ್ ಗೆ ಸಾಥ್ ನೀಡಿದ ಮಿಚಲ್ ಮಾರ್ಷ್ ಕೂಡ 9 ಸಿಕ್ಸರ್ ಹಾಗೂ 10 ಬೌಂಡರಿಗಳ ನೆರವಿನೊಂದಿಗೆ 121 ರನ್ ಗಳಿಸಿದರು.
ಇದನ್ನೂ ಓದಿ: Nayanathara: ಸಿನಿಮಾಗೆ ಪಡೆಯುವ ಸಂಭಾವನೆ ಹೆಚ್ಚಿಸಿಕೊಂಡ ಲೇಡಿ ಸೂಪರ್ ಸ್ಟಾರ್..! ಎಷ್ಟು ಕೋಟಿ ಗೊತ್ತಾ?
ಆ ಮೂಲಕ ಆಸ್ಟ್ರೇಲಿಯಾ ತಂಡವು ಅಂತಿಮವಾಗಿ 9 ವಿಕೆಟ್ ನಷ್ಟಕ್ಕೆ 50 ಓವರ್ ಗಳಲ್ಲಿ 367 ರನ್ ಗಳನ್ನು ಗಳಿಸಿತು.ಆಸ್ಟ್ರೇಲಿಯಾ ನೀಡಿದ 368 ರನ್ ಗಳ ಬೃಹತ್ ಗೆಲುವಿನ ಗುರಿಯನ್ನು ಬೆನ್ನತ್ತಿದ ಪಾಕ್ ತಂಡವು ಉತ್ತಮ ಶುಭಾರಂಭವನ್ನೇ ಮಾಡಿತು, ಆರಂಭಿಕ ಆಟಗಾರರಾದ ಅಬ್ದುಲಾ ಶಫಿಕ್ 64 ಹಾಗೂ ಇಮಾಂ ಉಲ್ ಹಕ್ 70 ರನ್ ಗಳನ್ನು ಗಳಿಸುವ ಮೂಲಕ ಮೊದಲ ವಿಕೆಟ್ ಗೆ 134 ರನ್ ಗಳ ಜೊತೆಯಾಟವಾಡುವ ಮೂಲಕ ಪಾಕ್ ಗೆ ಗೆಲುವಿನ ಆಸೆಯನ್ನು ಹುಟ್ಟಿಸಿದ್ದರು.ಆ ಆದರೆ ನಂತರ ಬಂದಂತಹ ಆಟಗಾರರಲ್ಲಿ ಮೊಹಮ್ಮದ್ ರಿಜವಾನ್ 46 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರೂ ನಂತರ ಬಂದಂತಹ ಆಟಗಾರರು ಸ್ಥಿರವಾಗಿ ನಿಲ್ಲುವಲ್ಲಿ ವಿಫಲರಾದರು.ಇದರಿಂದಾಗಿ ಅಂತಿಮವಾಗಿ ಪಾಕಿಸ್ತಾನವು 45.5 ಓವರ್ ಗಳಲ್ಲಿ 305 ರನ್ ಗಳಿಗೆ ಆಲೌಟ್ ಆಗುವ ಮೂಲಕ 62 ರನ್ ಗಳ ಅಂತರದಲ್ಲಿ ಸೋಲನ್ನು ಅನುಭವಿಸಿತು.
ಇದನ್ನೂ ಓದಿ: ಮಜ್ಜಿಗೆ ಜೊತೆ ಈ ಪುಡಿಯನ್ನು ಬೆರೆಸಿ ಕುಡಿದರೆ ಸೊಂಟದ ಸುತ್ತಲಿನ ಬೊಜ್ಜು ಸಲೀಸಾಗಿ ಕರಗುತ್ತೆ
ಆಸೀಸ್ ತಂಡದ ಪರವಾಗಿ ಆಡಂ ಜಂಪಾ ನಾಲ್ಕು, ಕಮಿನ್ಸ್ ಎರಡು ಹಾಗೂ ಸ್ಟೋನಿಸ್ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಪಾಕ್ ತಂಡದ ರನ್ ವೇಗಕ್ಕೆ ಕಡಿವಾಣ ಹಾಕಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.