Gujarat Titans New Captain: ಬಲಿಷ್ಠ ಆಲ್‌’ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್-2024ರಲ್ಲಿ ಗುಜರಾತ್ ಟೈಟಾನ್ಸ್ ಬದಲಿಗೆ ಮುಂಬೈ ಇಂಡಿಯನ್ಸ್ ಪರ ಆಡಲಿದ್ದಾರೆ ಎಂಬ ಗುಸುಗುಸು ಸುದ್ದಿ ಕೇಳಿಬರುತ್ತಿದೆ. ಈ ಸುದ್ದಿ ಸತ್ಯವಾದಲ್ಲಿ ಹಾರ್ದಿಕ್ ಬದಲಿಗೆ ಗುಜರಾತ್ ತಂಡದ ನಾಯಕತ್ವ ಯಾರಿಗೆ ಸೇರಲಿದೆ ಎಂಬ ಪ್ರಶ್ನೆ ಮೂಡುವುದು ಸಹಜ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಇತಿಹಾಸ ಸೃಷ್ಟಿಗೆ ಒಂದೇ ಹೆಜ್ಜೆ: 2ನೇ ಟಿ20 ಗೆದ್ದರೆ ಈ ಸಾಧನೆ ಮಾಡಿದ ಮೊದಲ ತಂಡವಾಗುತ್ತೆ ಭಾರತ


ಭಾರತದ ಟಿ20 ನಾಯಕ ಹಾರ್ದಿಕ್ ಪಾಂಡ್ಯ ಈ ವರ್ಷದ ಐಪಿಎಲ್ ಹರಾಜಿಗೂ ಮುನ್ನವೇ ಗುಜರಾತ್ ಟೈಟಾನ್ಸ್ ತಂಡವನ್ನು ತೊರೆಯುವ ಸಾಧ್ಯತೆ ಇದೆ. ಮತ್ತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರಬಹುದು ಎಂದು ಹೇಳಲಾಗುತ್ತಿದೆ. ಅಂದಹಾಗೆ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


ಹಾರ್ದಿಕ್ ಪಾಂಡ್ಯ ಐಪಿಎಲ್‌’ನಲ್ಲಿ 7 ಸೀಸನ್‌’ಗಳಲ್ಲಿ ಮುಂಬೈ ಇಂಡಿಯನ್ಸ್‌’ನ ಭಾಗವಾಗಿದ್ದರು. 2022ರ ಸೀಸನ್’ನಲ್ಲಿ ರಿಲೀಸ್ ಆದ ಹಿನ್ನೆಲೆಯಲ್ಲಿ ಗುಜರಾತ್ ತಂಡ ಸೇರಿದ ಅವರು ನಾಯಕತ್ವ ವಹಿಸಿಕೊಂಡರು. ಇದಾದ ಬಳಿಕ ಅದ್ಭುತವಾಗಿ ನಾಯಕತ್ವ ವಹಿಸಿದ್ದು, ತನ್ನ ಚೊಚ್ಚಲ ಋತುವಿನಲ್ಲಿ ಗುಜರಾತ್ ತಂಡವನ್ನು ಚಾಂಪಿಯನ್ ಮಾಡಿದರು. ಅಷ್ಟೇ ಅಲ್ಲದೆ, ತಮ್ಮ ತಂಡವನ್ನು ಸತತ ಎರಡು ಬಾರಿ ಲೀಗ್‌’ನ ಫೈನಲ್‌’ಗೆ ಕರೆದೊಯ್ದಿದ್ದರು.


ಒಂದು ವೇಳೆ ಹಾರ್ದಿಕ್ ಈ ತಂಡದಿಂದ ನಿರ್ಗಮಿಸಿದರೆ, ಕೇನ್ ವಿಲಿಯಮ್ಸನ್ ಅವರನ್ನು ನಾಯಕರನ್ನಾಗಿ ಮಾಡುವ ಸಾಧ್ಯತೆ ಇದೆ. ಕೇನ್ ವಿಲಿಯಮ್ಸನ್ ಹೊರತಾಗಿ ಸ್ಪಿನ್ನರ್ ರಶೀದ್ ಖಾನ್ ಕೂಡ ಈ ರೇಸ್’ನಲ್ಲಿದ್ದಾರೆ. ಈ ಹಿಂದೆ ಹಾರ್ದಿಕ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವವನ್ನು ವಹಿಸಿದ್ದರು. ಇವರಿಬ್ಬರ ಹೊರತಾಗಿ ತಂಡದಲ್ಲಿ ಶುಭ್‌ಮನ್ ಗಿಲ್ ಅವರಂತಹ ಸ್ಟಾರ್ ಆಟಗಾರರಿದ್ದು, ಅವಕಾಶ ಸಿಕ್ಕರೆ ನಾಯಕತ್ವದ ಜವಾಬ್ದಾರಿಯನ್ನು ಅವರೂ ಹೊರಬಹುದು.


ಇದನ್ನೂ ಓದಿ: ಏಕದಿನ, ಟಿ20, ಟೆಸ್ಟ್… ಮೂರು ಸ್ವರೂಪಕ್ಕೂ ಇನ್ಮುಂದೆ 24 ವರ್ಷದ ಈ ಪ್ಲೇಯರ್ ಕ್ಯಾಪ್ಟನ್


ಈಗಾಗಲೇ ಹಾರ್ದಿಕ್ ಪಾಂಡ್ಯರನ್ನು ಮತ್ತೆ ಮುಂಬೈ ತಂಡಕ್ಕೆ ಸೇರ್ಪಡೆಗೊಳಿಸಬೇಕು ಎಂದು ಫ್ರಾಂಚೈಸಿಗಳು ಮಾತುಕತೆ ನಡೆಸಿವೆ ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಈ ಬಾರಿ ಹಾರ್ದಿಕ್ ಟೈಟಾನ್ಸ್ ತೊರೆಯುವುದು ಖಚಿತವೇನೋ ಎಂದೆನಿಸುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/-l9UZYUp33o?si=_K0khSS1BDeQ7ypt
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ