South Africa Cricket: ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯಿಂದ ಮಹತ್ವದ ಘೋಷಣೆ ಹೊರಬಿದ್ದಿದ್ದು, 24 ವರ್ಷದ ಆಟಗಾರ್ತಿಗೆ ಮೂರು ಮಾದರಿಯ ಕ್ರಿಕೆಟ್ ತಂಡದ ನಾಯಕತ್ವವನ್ನು ನೀಡಲಾಗಿದೆ. ಈ ಬದಲಾವಣೆ ಆಗಿರುವುದು ಮಹಿಳಾ ಕ್ರಿಕೆಟ್ ತಂಡದಲ್ಲಿ. ಇದರೊಂದಿಗೆ ಮುಂಬರುವ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೆ ತಂಡವನ್ನೂ ಪ್ರಕಟಿಸಲಾಗಿದೆ. ಈ ಮಾಹಿತಿಯನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ಇದನ್ನೂ ಓದಿ: ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಈ ಪ್ಲೇಯರ್ಸ್ ಔಟ್! ಭಾರತದ ಪ್ಲೇಯಿಂಗ್ 11 ಹೀಗಿರಲಿದೆ
ದಕ್ಷಿಣ ಆಫ್ರಿಕಾದ ಮಹಿಳಾ ತಂಡದ 24 ವರ್ಷದ ಬ್ಯಾಟ್ಸ್’ಮನ್ ಲಾರಾ ವೊಲ್ವಾರ್ಡ್ ಅವರು ಎಲ್ಲಾ ಮೂರು ಸ್ವರೂಪಗಳಿಗೆ ತಂಡದ ನಾಯಕಿಯಾಗಿದ್ದಾರೆ. ಮಂಡಳಿಯು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “CSA ಇಂದು ಅಧಿಕೃತವಾಗಿ ಲಾರಾ ವೊಲ್ವಾರ್ಡ್ಟ್ ಅವರನ್ನು ಎಲ್ಲಾ 3 ಸ್ವರೂಪಗಳಿಗೆ ಪ್ರೋಟೀಸ್ ಮಹಿಳೆಯರ ನಾಯಕಿಯಾಗಿ ನೇಮಿಸಿದೆ. ಜೊತೆಗೆ 15 ಆಟಗಾರರ T20I ತಂಡವು ಬಾಂಗ್ಲಾದೇಶವನ್ನು ಎದುರಿಸಲಿದೆ” ಎಂದು ಬರೆದುಕೊಂಡಿದೆ.
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಇತ್ತೀಚಿನ ಪ್ರವಾಸಗಳಲ್ಲಿ ವೊಲ್ವಾರ್ಟ್ ಹಂಗಾಮಿ ನಾಯಕಿಯಾಗಿ ಯಶಸ್ವಿ ಅವಧಿಯನ್ನು ಪೂರ್ಣಗೊಳಿಸಿದ್ದಾರೆ. ಬ್ಯಾಟಿಂಗ್’ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದು, ಸತತ ಎರಡು ಏಕದಿನ ಸರಣಿಯನ್ನು 2-1 ರಿಂದ ಗೆದ್ದಿದ್ದಾರೆ. ಕೇವಲ 24 ನೇ ವಯಸ್ಸಿನಲ್ಲಿ, ವೊಲ್ವಾರ್ಡ್ 86 ODI ಮತ್ತು 59 T20I ಗಳನ್ನು ಆಡಿದ್ದಾರೆ.
ಏಕದಿನದಲ್ಲಿ ಅವರು 30 ಅರ್ಧಶತಕ ಮತ್ತು 4 ಶತಕಗಳೊಂದಿಗೆ 3,421 ರನ್ ಗಳಿಸಿದ್ದಾರೆ. ಟಿ20 ಯಲ್ಲಿ 32.82 ರ ಸರಾಸರಿಯೊಂದಿಗೆ 1,313 ರನ್ ಗಳಿಸಿದ್ದಾರೆ. ಈ ಮಾದರಿಯಲ್ಲಿ 9 ಅರ್ಧಶತಕಗಳನ್ನು ಗಳಿಸಿದ್ದಾರೆ.
ಟಿ20 ತಂಡ ಪ್ರಕಟ:
ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡವು ಡಿಸೆಂಬರ್ 3 ರಿಂದ 23 ರವರೆಗೆ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ಟಿ20 ಸರಣಿಯನ್ನು ಆಡಲಿದೆ. ಇದಕ್ಕಾಗಿ ತಂಡವನ್ನೂ ಪ್ರಕಟಿಸಲಾಗಿದೆ. ಈ ತಂಡದಲ್ಲಿ 15 ಆಟಗಾರರನ್ನು ಸೇರಿಸಲಾಗಿದೆ. ಈ ಸರಣಿಯಲ್ಲಿ ಲಾರಾ ವೊಲ್ವಾರ್ಡ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
🟢 Wolfie To Lead Proteas Women 🟡
CSA has today officially appointed Laura Wolvaardt as captain of the Proteas Women for all 3 formats along with the 15-player T20I squad set to face Banglades (3 - 23 Dec)🇿🇦🇧🇩
🔗 https://t.co/6vG6Pceq05#AlwaysRising #BePartOfIt pic.twitter.com/kZjX9OIIYg
— Proteas Women (@ProteasWomenCSA) November 24, 2023
ಇದನ್ನೂ ಓದಿ: ಇತಿಹಾಸ ಸೃಷ್ಟಿಗೆ ಒಂದೇ ಹೆಜ್ಜೆ: 2ನೇ ಟಿ20 ಗೆದ್ದರೆ ಈ ಸಾಧನೆ ಮಾಡಿದ ಮೊದಲ ತಂಡವಾಗುತ್ತೆ ಭಾರತ
ಲಾರಾ ವೊಲ್ವಾರ್ಟ್ (ನಾಯಕ), ಅನ್ನೆಕೆ ಬಾಷ್, ತಾಜ್ಮಿನ್ ಬ್ರಿಟ್ಸ್, ಆನ್ನೆ ಡೆರ್ಕ್ಸೆನ್, ಮೈಕೆ ಡಿ ರಿಡ್ಡರ್, ಲಾರಾ ಗುಡಾಲ್, ಅಯಾಂಡಾ ಹ್ಲುಬಿ, ಸಿನಾಲೋವಾ ಜಫ್ತಾ, ಮಸಾಬಟಾ ಕ್ಲಾಸ್, ಸುನೆ ಲೂಸ್, ಎಲಿಸ್-ಮೇರಿ ಮಾರ್ಕ್ಸ್, ನೊನ್ಕುಲುಲೆಕೊ ಮ್ಲಾಬಾ, ತುಮಿ ಸೆಖುಖುನೆ, ನೊಂಡುಮಿಸೊ ಶಾಂಗಸೆ, ಡೆಲ್ಮಿ ಟಕರ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/-l9UZYUp33o?si=_K0khSS1BDeQ7ypt
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ