India vs Australia, World Cup 2023 Final: ಅಹಮದಾಬಾದ್‌’ನ ಪ್ರತಿಷ್ಠಿತ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ 2023ರ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಗೆಲುವು ಸಾಧಿಸುವ ಮೂಲಕ 6ನೇ ಬಾರಿ ಟ್ರೋಫಿ ಎತ್ತಿಹಿಡಿದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿಯನ್ನು ಅಪ್ಪಿಕೊಂಡ ಪ್ಯಾಲಿಸ್ತೀನ್ ಬೆಂಬಲಿಗ


ಮಹಾ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್, ಟೀಂ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 240 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು.


ಟೀಂ ಇಂಡಿಯಾದಲ್ಲಿ ಈ ಬಾರಿ ವೈಫಲ್ಯ ಕಂಡುಬಂದಿದ್ದು ಸುಳ್ಳಲ್ಲ. ಇದುವರೆಗೆ ಮಿಂಚಿದ್ದ ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಅವರಂತಹ ಆಟಗಾರರು ಮಂಕಾಗಿದ್ದು ವೈಫಲ್ಯವೇ ಎನ್ನಬಹುದು. ಇನ್ನೊಂದೆಡೆ ಸೂರ್ಯಕುಮಾರ್ ಯಾದವ್ ಕೂಡ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸುವಲ್ಲಿ ವಿಫಲರಾದರು.


ಇದನ್ನೂ ಓದಿ: “ನನ್ನನ್ನು ಕರೆದಿಲ್ಲ… ವಿಶ್ವಕಪ್ ಫೈನಲ್ ಪಂದ್ಯ ನಾನು ನೋಡಲ್ಲ”- ಕ್ರಿಕೆಟ್ ದಿಗ್ಗಜ ಕಪಿಲ್ ದೇವ್


ಭಾರತ ಪರ ಬ್ಯಾಟ್ ಬೀಸಿದ ಆರಂಭಿಕ ಮತ್ತು ನಾಯಕ ರೋಹಿತ್ ಶರ್ಮಾ 31 ಎಸೆತಕ್ಕೆ 47 ರನ್ ಸಿಡಿಸಿ ಉತ್ತಮ ಆರಂಭ ನೀಡಿದ್ದರು. ಇನ್ನು ಶುಭ್ಮನ್ ಗಿಲ್ 7 ಎಸೆತಕ್ಕೆ 4 ರನ್, ವಿರಾಟ್ ಕೊಹ್ಲಿ 63 ಎಸೆತಕ್ಕೆ 54 ರನ್, ಕೆ ಎಲ್ ರಾಹುಲ್ 107 ಎಸೆತಕ್ಕೆ 66 ರನ್, ರವೀಂದ್ರ ಜಡೇಜಾ 22 ಎಸೆತಕ್ಕೆ 9 ರನ್, ಸೂರ್ಯಕುಮಾರ್ 28 ಎಸೆತಕ್ಕೆ 18 ರನ್, ಮೊಹಮ್ಮದ್ ಶಮಿ 10 ಎಸೆತಕ್ಕೆ 6 ರನ್, ಜಸ್ಪ್ರೀತ್ ಬುಮ್ರ 3 ಎಸೆತಕ್ಕೆ 1 ರನ್, ಕುಲ್ದೀಪ್ ಯಾದವ್ 10 ಎಸೆತಕ್ಕೆ 10 ರನ್, ಮೊಹಮ್ಮದ್ ಸಿರಾಜ್ 8 ಎಸೆತದಲ್ಲಿ 9 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.