“ನನ್ನನ್ನು ಕರೆದಿಲ್ಲ… ವಿಶ್ವಕಪ್ ಫೈನಲ್ ಪಂದ್ಯ ನಾನು ನೋಡಲ್ಲ”- ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಹೀಗಂದಿದ್ದೇಕೆ?

Kapil Dev not invited in World Cup 2023 Final: ಸಂದರ್ಶನವೊಂದರಲ್ಲಿ ಮಾತನಾಡಿದ ಕಪಿಲ್ ದೇವ್ "ನನಗೆ ಆಹ್ವಾನವಿಲ್ಲ. ಹಾಗಾಗಿ ನಾನು ಹೋಗಲಿಲ್ಲ. ಜನರು ಜವಾಬ್ದಾರಿಗಳಲ್ಲಿ ತುಂಬಾ ನಿರತರಾಗಿದ್ದಾರೆ" ಎಂದಿದ್ದಾರೆ.

Written by - Bhavishya Shetty | Last Updated : Nov 19, 2023, 07:20 PM IST
    • ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ODI ವಿಶ್ವಕಪ್ 2023ರ ಫೈನಲ್
    • 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಇಲ್ಲಿ ಕಾಣಿಸಿಕೊಂಡಿರಲಿಲ್ಲ
    • ಕಪಿಲ್ ಅವರಿಗೆ ಆಹ್ವಾನ ಕಳುಹಿಸಿಲ್ಲವೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.
“ನನ್ನನ್ನು ಕರೆದಿಲ್ಲ… ವಿಶ್ವಕಪ್ ಫೈನಲ್ ಪಂದ್ಯ ನಾನು ನೋಡಲ್ಲ”- ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಹೀಗಂದಿದ್ದೇಕೆ? title=
Kapil Dev

Kapil Dev not invited in World Cup 2023 Final: ಅಹಮದಾಬಾದ್‌ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ODI ವಿಶ್ವಕಪ್ 2023ರ ಫೈನಲ್ ವೀಕ್ಷಿಸಲು ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಸಚಿನ್ ತೆಂಡೂಲ್ಕರ್, ಶಾರುಖ್ ಖಾನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಈ ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಆದರೆ, 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಇಲ್ಲಿ ಕಾಣಿಸಿಕೊಂಡಿರಲಿಲ್ಲ. ಇದಾದ ಬಳಿಕ ಕಪಿಲ್ ಅವರಿಗೆ ಆಹ್ವಾನ ಕಳುಹಿಸಿಲ್ಲವೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.

ಇದನ್ನೂ ಓದಿ: ಮೊಹಮ್ಮದ್ ಶಮಿ ತಾಯಿಗೆ ಅನಾರೋಗ್ಯ- ವಿಶ್ವಕಪ್ ಫೈನಲ್ ಆರಂಭದ ಬೆನ್ನಲ್ಲೇ ಆಸ್ಪತ್ರೆಗೆ ದಾಖಲು!

ಈ ಬಗ್ಗೆ ಸ್ವತಃ ಕಪಿಲ್ ದೇವ್ ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಕಪಿಲ್ ದೇವ್ "ನನಗೆ ಆಹ್ವಾನವಿಲ್ಲ. ಹಾಗಾಗಿ ನಾನು ಹೋಗಲಿಲ್ಲ. 83ರ ಇಡೀ ತಂಡವು ನನ್ನೊಂದಿಗೆ ಇರಬೇಕೆಂದು ನಾನು ಬಯಸುತ್ತೇನೆ, ಆದರೆ ಇದು ತುಂಬಾ ದೊಡ್ಡ ಘಟನೆ. ಮತ್ತು ಜನರು ಜವಾಬ್ದಾರಿಗಳಲ್ಲಿ ತುಂಬಾ ನಿರತರಾಗಿದ್ದಾರೆ, ಕೆಲವೊಮ್ಮೆ ಅವರು ಮರೆತುಬಿಡುತ್ತಾರೆ” ಎಂದಿದ್ದಾರೆ.

ವಿಶ್ವಕಪ್ ವಿಜೇತ ನಾಯಕನ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತವು ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಆದರೆ ಆ ಸಮಯದಲ್ಲಿ ODIಗಳನ್ನು 60 ಓವರ್‌’ಗಳಿಗೆ ಆಡಲಾಗಿತ್ತು. ಆ ಸಂದರ್ಭದಲ್ಲಿ ಟೀಂ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು 40 ರನ್ ಗಳಿಂದ ಸೋಲಿಸಿ ಕಪ್ ಗೆದ್ದಿತ್ತು.

ಇದನ್ನೂ ಓದಿ: ಮೈದಾನಕ್ಕೆ ನುಗ್ಗಿ ವಿರಾಟ್ ಕೊಹ್ಲಿಯನ್ನು ಅಪ್ಪಿಕೊಂಡ ಪ್ಯಾಲಿಸ್ತೀನ್ ಬೆಂಬಲಿಗ

ವಿಶ್ವಕಪ್ ಫೈನಲ್‌’ನಲ್ಲಿ ಎಲ್ಲಾ ಮಾಜಿ ವಿಶ್ವಕಪ್ ವಿಜೇತ ನಾಯಕರನ್ನು ಆಹ್ವಾನಿಸಿ ಗೌರವಿಸಲಾಗುವುದು ಎಂದು ಈ ಹಿಂದೆ ವರದಿಗಳು ಬಂದಿದ್ದವು. ಆದರೆ ಹಾಗಾಗಿರಲಿಲ್ಲ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News