India vs Australia, ODI World Cup: ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವಕಪ್ ಅಭಿಯಾನವನ್ನು ಗೆಲುವಿನೊಂದಿಗೆ ಪ್ರಾರಂಭಿಸಿದೆ. ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ (ಚೆಪಾಕ್) ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ಆಸ್ಟ್ರೇಲಿಯಾ ತಂಡವನ್ನು ಕೇವಲ 199 ರನ್‌’ಗಳಿಗೆ ಕಟ್ಟಿಹಾಕಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: World Cup 2023: ಕೊಹ್ಲಿ, ರಾಹುಲ್ ಅದ್ಭುತ ಜೊತೆಯಾಟ-ಜಡೇಜಾ ಸ್ಪಿನ್ ಮೋಡಿ: ವಿಶ್ವಕಪ್’ನಲ್ಲಿ ಭಾರತಕ್ಕೆ ಗೆಲುವಿನ ಶುಭಾರಂಭ


ಚೆನ್ನೈನಲ್ಲಿ ಜಡೇಜಾ ಸ್ಫೋಟಕ ಬೌಲಿಂಗ್:


ಟಾಸ್ ಗೆದ್ದ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ, ತಂಡ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗದೆ 49.3 ಓವರ್’ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 199 ರನ್’ಗಳಿಗೆ ಆಲೌಟ್ ಆಯಿತು. ಸ್ಟೀವ್ ಸ್ಮಿತ್ ಗರಿಷ್ಠ 46 ರನ್ ಗಳಿಸಿದರೆ, ಡೇವಿಡ್ ವಾರ್ನರ್ 41 ರನ್ ಕೊಡುಗೆ ನೀಡಿದರು. ಟೀಂ ಇಂಡಿಯಾ ಪರ ರವೀಂದ್ರ ಜಡೇಜಾ ಅತ್ಯಂತ ಯಶಸ್ವಿ ಬೌಲರ್ ಆಗಿ, ಗರಿಷ್ಠ 3 ವಿಕೆಟ್ ಪಡೆದರು. ಇನ್ನು ಕುಲ್ದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಒಂದು ವಿಕೆಟ್ ಕಬಳಿಸಿದರು.


ಗೆದ್ದರೂ ಕಳಪೆ ದಾಖಲೆ ಬರೆದ ಟೀಂ ಇಂಡಿಯಾ:


200 ರನ್‌’ಗಳ ಗುರಿಯನ್ನು ಬೆನ್ನಟ್ಟಿದ ಭಾರತವು ಅತ್ಯಂತ ಕಳಪೆ ಆರಂಭವನ್ನು ಹೊಂದಿತ್ತು. ರೋಹಿತ್ ಮತ್ತು ಇಶಾನ್ ಕಿಶನ್ ಇನ್ನಿಂಗ್ಸ್ ಆರಂಭಿಸಿದರಾದರೂ ಖಾತೆ ತೆರೆಯದೆ ಇಬ್ಬರೂ ಔಟಾದರು. ಮಿಚೆಲ್ ಸ್ಟಾರ್ಕ್ ಇನಿಂಗ್ಸ್’ನ ಮೊದಲ ಓವರ್’ನ ನಾಲ್ಕನೇ ಎಸೆತದಲ್ಲಿ ಕಿಶನ್ ಅವರನ್ನು ಪೆವಿಲಿಯನ್’ಗೆ ಕಳುಹಿಸಿದರು. ನಂತರ ವೇಗಿ ಜೋಶ್ ಹ್ಯಾಜಲ್‌ವುಡ್ ತಮ್ಮ ಮೊದಲ (ಎರಡನೇ ಇನಿಂಗ್ಸ್) ಓವರ್‌’ನಲ್ಲಿ 2 ವಿಕೆಟ್ ಪಡೆದರು. ಮೂರನೇ ಎಸೆತದಲ್ಲಿ ನಾಯಕ ರೋಹಿತ್ ಅವರನ್ನು ಔಟ್ ಮಾಡಿದ ಅವರು ಕೊನೆಯ ಎಸೆತದಲ್ಲಿ ಶ್ರೇಯಸ್ ಅಯ್ಯರ್ (0)ಗೆ ಪೆವಿಲಿಯನ್ ಹಾದಿ ತೋರಿಸಿದರು.


ಇದನ್ನೂ ಓದಿ: ವಿಶ್ವಕಪ್ ಮಧ್ಯೆ ಈ ತಂಡಕ್ಕೆ ಬಿತ್ತು ಭಾರೀ ಮೊತ್ತದ ದಂಡ! ICCಯಿಂದ ಕಠಿಣ ಕ್ರಮ


ಟೀಂ ಇಂಡಿಯಾದ ಟಾಪ್-4 ಬ್ಯಾಟ್ಸ್‌’ಮನ್‌’ಗಳ ಪೈಕಿ 3 ಮಂದಿ ಖಾತೆ ತೆರೆಯದೆಯೇ ಅಂದರೆ '0'ನಲ್ಲಿ ಔಟಾದರು. ಇದರೊಂದಿಗೆ ಭಾರತದ ಸ್ಕೋರ್ 3 ವಿಕೆಟ್‌’ಗೆ 2 ರನ್ ಆಗಿತ್ತು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ 3 ಅಗ್ರ-4 ಬ್ಯಾಟ್ಸ್‌’ಮನ್‌’ಗಳು ತಮ್ಮ ಖಾತೆ ತೆರೆಯದೆ ಪೆವಿಲಿಯನ್‌’ಗೆ ಮರಳಿದರು. ಅಷ್ಟೇ ಅಲ್ಲ, 1983ರ ನಂತರ ವಿಶ್ವಕಪ್‌ನಲ್ಲಿ ಭಾರತದ ಆರಂಭಿಕರಿಬ್ಬರೂ ಯಾವುದೇ ಸ್ಕೋರ್ ಗಳಿಸಲಾಗದೆ ಪೆವಿಲಿಯನ್‌’ಗೆ ಮರಳಿದ್ದು ಇದೇ ಮೊದಲು. 1983ರ ವಿಶ್ವಕಪ್‌’ನಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಇದು ಸಂಭವಿಸಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.