ಪಾಕ್ ವಿರುದ್ಧದ ಅಜೇಯ ಗೆಲುವಿನ ಮಧ್ಯೆ ವಿಶಿಷ್ಟ ದಾಖಲೆ ಬರೆದ ಭಾರತ! ವಿಶ್ವಕಪ್ ಇತಿಹಾಸದಲ್ಲಿ ಯಾರೂ ಮಾಡದ ರೆಕಾರ್ಡ್ ಇದು
Team India All Out Record: ಅಹಮದಾಬಾದ್’ನ ಪ್ರತಿಷ್ಠಿತ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ಅದ್ಭುತ ಪ್ರದರ್ಶನದ ಕಾರಣದಿಂದ ಮತ್ತೊಂದು ದಾಖಲೆ ನಿರ್ಮಾಣವಾಗಿದೆ, ಈ ದಾಖಲೆಯನ್ನು ವಿಶ್ವಕಪ್ ಇತಿಹಾಸದಲ್ಲೇ ಯಾವೊಂದು ತಂಡವು ಮಾಡಿಲ್ಲ ಎಂಬುದು ಉಲ್ಲೇಖನೀಯ.
Team India All Out Record: ಕಳೆದ ದಿನ ನಡೆದ ODI ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿದೆ. ಸಂಘಟಿತ ದಾಳಿ ನಡೆಸಿ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಸಾಧಿಸಿದೆ ಭಾರತ. ಈ ಮೂಲಕ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅಜೇಯ ದಾಖಲೆ ಹೊಂದಿದ್ದ ಭಾರತ, ಗೆಲುವಿನ ನಾಗಾಲೋಟ ಮುಂದುವರೆಸಿದೆ.
ಇದನ್ನೂ ಓದಿ: IND vs PAK: ರೋಹಿತ್ ಶರ್ಮಾರ ಈ ‘ಟ್ರಿಕ್’ಗೆ ಪೆವಿಲಿಯನ್ ಸೇರಿದ ಪಾಕ್‍ನ ಸ್ಫೋಟಕ ಬ್ಯಾಟ್ಸ್‌ಮನ್!
ಅಹಮದಾಬಾದ್’ನ ಪ್ರತಿಷ್ಠಿತ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ಅದ್ಭುತ ಪ್ರದರ್ಶನದ ಕಾರಣದಿಂದ ಮತ್ತೊಂದು ದಾಖಲೆ ನಿರ್ಮಾಣವಾಗಿದೆ, ಈ ದಾಖಲೆಯನ್ನು ವಿಶ್ವಕಪ್ ಇತಿಹಾಸದಲ್ಲೇ ಯಾವೊಂದು ತಂಡವು ಮಾಡಿಲ್ಲ ಎಂಬುದು ಉಲ್ಲೇಖನೀಯ.
ಸಂಘಟಿತ ದಾಳಿ ನಡೆಸಿದ ಟೀಂ ಇಂಡಿಯಾ, ಬಾಬರ್ ಅಜಮ್ ನೇತೃತ್ವದ ಪಾಕ್ ತಂಡವನ್ನು ಕೇವಲ 191 ರನ್’ಗಳಿಗೆ ಅಲೌಟ್ ಮಾಡಿತ್ತು. ಇನ್ನು 2023ರ ವಿಶ್ವಕಪ್’ನಲ್ಲಿ ಟೀಂ ಇಂಡಿಯಾ ಬೌಲರ್’ಗಳು ಅದ್ಭುತವಾಗಿಯೇ ಪ್ರದರ್ಶನ ನೀಡುತ್ತಿದ್ದಾರೆ.
ಸತತ ಗೆಲುವಿನ ಸಂತಸದಲ್ಲಿರುವ ಟೀಂ ಇಂಡಿಯಾ ಇದೀಗ ಪಾಯಿಂಟ್ ಟೇಬಲ್’ನಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಮೂಲಕ ಇತರ ತಂಡಗಳಿಗೂ ಎಚ್ಚರಿಕೆಯ ಕರೆಗಂಟೆಯನ್ನು ರವಾನಿಸಿದೆ.
ಇನ್ನು ಈ ವಿಶ್ವಕಪ್’ನಲ್ಲಿ ಎರಡು ಬಾರಿ ಎದುರಾಳಿ ತಂಡವನ್ನು 200 ರನ್ ಒಳಗೆ ಅಲೌಟ್ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಭಾರತ ತಂಡ ಪಾತ್ರವಾಗಿದೆ. ಮೊದಲ ಬಾರಿ ಆಸ್ಟ್ರೇಲಿಯಾವನ್ನು ಸದೆಬಡಿದಿದ್ದರೆ, ಎರಡನೇ ಬಾರಿ ಪಾಕ್ ವಿರುದ್ಧ ಭಾರತ ತನ್ನ ಪರಾಕ್ರಮವನ್ನು ಪ್ರದರ್ಶಿಸಿದೆ.
ಇದನ್ನೂ ಓದಿ: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್’ನಲ್ಲಿ 300 ಸಿಕ್ಸರ್ ಬಾರಿಸಿ ಇತಿಹಾಸ ನಿರ್ಮಿಸಿದ ರೋಹಿತ್ ಶರ್ಮಾ
ಇದಷ್ಟೇ ಅಲ್ಲ, ಐಸಿಸಿ ವಿಶ್ವಕಪ್ ಇತಿಹಾಸದಲ್ಲೇ ಒಟ್ಟಾರೆ ಟೀಂ ಇಂಡಿಯಾ ಎದುರಾಳಿ ತಂಡವನ್ನು 26 ಬಾರಿ 200 ರನ್ ಒಳಗೆ ಅಲೌಟ್ ಮಾಡಿದ ವಿಶ್ವ ದಾಖಲೆಯನ್ನು ಹೊಂದಿದೆ. ವಿಶ್ವಕಪ್ ಇತಿಹಾಸದಲ್ಲಿ ಬೇರೆ ಯಾವೊಂದು ತಂಡವೂ ಈ ದಾಖಲೆ ನಿರ್ಮಿಸಿಲ್ಲ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್