World Cup 2023: ಭಾನುವಾರ ನಡೆಯಲಿರುವ ನೆದರ್‌ಲ್ಯಾಂಡ್ ವಿರುದ್ಧದ ಅಂತಿಮ ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟಿಗರು ಇಂದು ನೆಟ್ ಸೆಷನ್‌’ನಲ್ಲಿ ಭಾಗವಹಿಸಿದ್ದರು. ಜಸ್ಪ್ರೀತ್ ಬುಮ್ರಾ ಅವರ ಶಾರ್ಟ್ ಪಿಚ್ ಬಾಲ್ ಇಶಾನ್ ಕಿಶನ್ ಅವರ ಹೊಟ್ಟೆಗೆ ಬಡಿದಿದ್ದು, ಅಲ್ಲಿಯೇ ಕುಸಿದುಬಿದ್ದಿದ್ದಾರೆ. ಬಳಿಕ ಚೇತರಿಸಿಕೊಂಡು ಮತ್ತೆ ಅಭ್ಯಾಸ ಆರಂಭಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಗಂಡನೇ ಬೇಡ ಅಂದಿದ್ದ ಶಮಿ ಪತ್ನಿ ಆತನ ಸಂಪಾದನೆ ಬಗ್ಗೆ ಹೇಳಿದ್ದು ಹೀಗೆ..


ಜಸ್ಪ್ರೀತ್ ಬುಮ್ರಾ ಬೌಲಿಂಗ್:


ಶುಭ್ಮನ್ ಗಿಲ್ ಅವರು ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಪ್ರಸಿದ್ಧ್ ಕೃಷ್ಣ ಎಸೆದ ಬಾಲ್’ಗೆ ಸಖತ್ ಬ್ಯಾಟಿಂಗ್ ಮಾಡಿದ್ದಾರೆ. ಇನ್ನು ಬುಮ್ರಾ ಎಸೆತವನ್ನು ಎದುರಿಸಿದಾಗ ಮತ್ತೆ ರಕ್ಷಣಾತ್ಮಕವಾಗಿ ಬ್ಯಾಟ್ ಮಾಡಿದ್ದಾರೆ.


ಐಚ್ಛಿಕ ನೆಟ್ ಸೆಷನ್‌’ನ ಕಾರಣ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಮೊಹಮ್ಮದ್ ಶಮಿ ಮತ್ತು ಕುಲದೀಪ್ ಯಾದವ್ ಇದರಲ್ಲಿ ಭಾಗವಹಿಸಲಿಲ್ಲ, ಆದರೆ ಇತರ ಆಟಗಾರರು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನೆಟ್ಸ್‌’ನಲ್ಲಿ ಸಮಯ ಕಳೆದಿದ್ದಾರೆ.


ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 243 ​​ರನ್‌’ಗಳ ಅಂತರದ ಬೃಹತ್ ಗೆಲುವು ದಾಖಲಿಸಿದ ಭಾರತ ತಂಡ ಮಂಗಳವಾರ ಬೆಂಗಳೂರಿಗೆ ತಲುಪಿದೆ. ಅಂದಹಾಗೆ ರೋಹಿತ್ ಶರ್ಮಾ ನೇತೃತ್ವದ ತಂಡ ವಿಶ್ವಕಪ್‌’ನಲ್ಲಿ ಸೆಮಿಫೈನಲ್‌’ಗೆ ಪ್ರವೇಶಿಸಿದ ಮೊದಲ ತಂಡವಾಗಿದೆ.


ಇದನ್ನೂ ಓದಿ: “ಈ ಆಟಗಾರ ಶ್ರೀಲಂಕಾಗೆ ಬಂದ್ರೆ ಕಲ್ಲಲ್ಲಿ ಹೊಡಿತೀವೆ”- ಸ್ಟಾರ್ ಕ್ರಿಕೆಟಿಗನ ಸಹೋದರ ವಾರ್ನ್


ಇಲ್ಲಿಯವರೆಗೆ 2023ರ ವಿಶ್ವಕಪ್‌’ನಲ್ಲಿ ಭಾರತವನ್ನು ಸೋಲಿಸಲು ಯಾವುದೇ ತಂಡಕ್ಕೆ ಸಾಧ್ಯವಾಗಿಲ್ಲ. ಭಾರತ ಇದುವರೆಗೆ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ನ್ಯೂಜಿಲೆಂಡ್, ಇಂಗ್ಲೆಂಡ್, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾವನ್ನು ಸೋಲಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ