“ಈ ಆಟಗಾರ ಶ್ರೀಲಂಕಾಗೆ ಬಂದ್ರೆ ಕಲ್ಲಲ್ಲಿ ಹೊಡಿತೀವೆ”- ಸ್ಟಾರ್ ಕ್ರಿಕೆಟಿಗನ ಸಹೋದರ ವಾರ್ನ್ ಮಾಡಿದ್ದು ಯಾರಿಗೆ?

Angelo Mathews brother Trevin Matthews: ಈ ಬೆನ್ನಲ್ಲೇ ಶ್ರೀಲಂಕಾದ ಹಲವು ಮಾಜಿ ಕ್ರಿಕೆಟಿಗರು ಈ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಕೀಬ್ ಮತ್ತು ಬಾಂಗ್ಲಾದೇಶ ಕ್ರಿಕೆಟ್‌’ನ ಈ ಕ್ರಮವು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಮ್ಯಾಥ್ಯೂಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

Written by - Bhavishya Shetty | Last Updated : Nov 8, 2023, 09:57 PM IST
    • ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್
    • ಶ್ರೀಲಂಕಾ ಮತ್ತು ಬಾಂಗ್ಲಾದೇಶ (SL vs BAN) ಕ್ರಿಕೆಟ್ ನಡುವೆ ವಿವಾದ
    • ಮಾಜಿ ಕ್ರಿಕೆಟಿಗರು ಈ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ
“ಈ ಆಟಗಾರ ಶ್ರೀಲಂಕಾಗೆ ಬಂದ್ರೆ ಕಲ್ಲಲ್ಲಿ ಹೊಡಿತೀವೆ”- ಸ್ಟಾರ್ ಕ್ರಿಕೆಟಿಗನ ಸಹೋದರ ವಾರ್ನ್ ಮಾಡಿದ್ದು ಯಾರಿಗೆ? title=
Angelo Mathews Timed Out Controversy

Angelo Mathews brother Trevin Matthews: ಏಂಜೆಲೊ ಮ್ಯಾಥ್ಯೂಸ್ ವಿರುದ್ಧ ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಅವರ ಟೈಮ್ ಔಟ್ ಮೇಲ್ಮನವಿ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ. ಸಮಯ ಮೀರಿದ ಹಿನ್ನೆಲೆಯಲ್ಲಿ, 146 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ರಿಕೆಟಿಗನೊಬ್ಬ ಮೈದಾನಕ್ಕೆ ಬರದೆಯೇ, ಒಂದೇ ಒಂದು ಚೆಂಡನ್ನು ಎದುರಿಸದೆ ಔಟ್ ಆಗಿದ್ದ.

ಇದನ್ನೂ ಓದಿ: ಗಂಡನೇ ಬೇಡ ಅಂದಿದ್ದ ಶಮಿ ಪತ್ನಿ ಆತನ ಸಂಪಾದನೆ ಬಗ್ಗೆ ಹೇಳಿದ್ದು ಹೀಗೆ..

ಮ್ಯಾಥ್ಯೂಸ್ ಅವರ ಟೈಮ್ಡ್ ಔಟ್ ವಿಚಾರವು ಶ್ರೀಲಂಕಾ ಮತ್ತು ಬಾಂಗ್ಲಾದೇಶ (SL vs BAN) ಕ್ರಿಕೆಟ್ ನಡುವೆ ವಿವಾದವನ್ನು ಸೃಷ್ಟಿಸಿದೆ.

ಈ ಬೆನ್ನಲ್ಲೇ ಶ್ರೀಲಂಕಾದ ಹಲವು ಮಾಜಿ ಕ್ರಿಕೆಟಿಗರು ಈ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಕೀಬ್ ಮತ್ತು ಬಾಂಗ್ಲಾದೇಶ ಕ್ರಿಕೆಟ್‌’ನ ಈ ಕ್ರಮವು ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಮ್ಯಾಥ್ಯೂಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಏಂಜೆಲೊ ಮ್ಯಾಥ್ಯೂಸ್ ಸಹೋದರ ಶಕೀಬ್’ಗೆ ಎಚ್ಚರಿಕೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಬಾಂಗ್ಲಾದೇಶದ ನಾಯಕ ಶ್ರೀಲಂಕಾಕ್ಕೆ ಯಾವುದೇ ಪಂದ್ಯವನ್ನಾಡಲು ಬಂದರೆ ಕಲ್ಲಲ್ಲಿ ಹೊಡೆಯುತ್ತೇವೆ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

ಇದನ್ನೂ ಓದಿ: ಈ ರಾಶಿಯ ಜನರ ಬಾಳಲ್ಲಿ ದೀಪಾವಳಿ ತರಲಿದೆ ಸಂತೋಷ-ಸಮೃದ್ಧಿ: ಲಕ್ಷ್ಮೀದೇವಿ ಅನುಗ್ರಹದಿಂದ ಸಿರಿಸಂಪತ್ತಿನ ಸುಧೆಯೇ ಹರಿದುಬರಲಿದೆ

ಮ್ಯಾಥ್ಯೂಸ್ ಸಹೋದರ ಟ್ರೆವಿನ್ ಮ್ಯಾಥ್ಯೂಸ್ ಮಾತನಾಡಿ, “ನಾವು ತುಂಬಾ ನಿರಾಶೆಗೊಂಡಿದ್ದೇವೆ. ಬಾಂಗ್ಲಾದೇಶದ ನಾಯಕನಿಗೆ ಯಾವುದೇ ಕ್ರೀಡಾ ಮನೋಭಾವವಿಲ್ಲ. ಈ ಸಜ್ಜನರ ಆಟದಲ್ಲಿ ಮಾನವೀಯತೆಯನ್ನು ತೋರಿಸಿಲ್ಲ. ಮುಂದಿನ ದಿನಗಳಲ್ಲಿ ಆತ ಶ್ರೀಲಂಕಾಗೆ ಅಂತರರಾಷ್ಟ್ರೀಯ ಅಥವಾ ಎಲ್‌’ಪಿಎಲ್ ಪಂದ್ಯವನ್ನು ಆಡಲು ಬಂದರೆ, ಕಲ್ಲಲ್ಲಿ ಹೊಡಿತೇವೆ” ಎಂದು ಹೇಳಿದ್ದಾರೆ.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News