5 ODI World Cup Records That Are Very Hard To Break: ODI ವಿಶ್ವಕಪ್ 2023 ಇನ್ನೇನು ಕೊನೆಯ ಹಂತದಲ್ಲಿದೆ. ಈಗಾಗಲೇ 8 ಪಂದ್ಯಗಳಲ್ಲಿ ಗೆಲುವು ಕಂಡಿರುವ ಭಾರತ ಸೆಮಿಫೈನಲ್ ಪ್ರವೇಶ ಮಾಡಿದೆ. ಈ ಸಂದರ್ಭದಲ್ಲಿ ವಿಶ್ವಕ್ರಿಕೆಟ್ ಇತಿಹಾಸದಲ್ಲಿ ಮುರಿಯಲು ಸಾಧ್ಯವಾಗದ ಮತ್ತು ಕಷ್ಟಸಾಧ್ಯವಾದ ಟಾಪ್ 5 ದಾಖಲೆಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸಚಿನ್-ವಿರಾಟ್ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ ಅಪ್ಘನ್ ಆಟಗಾರ!


ಸಚಿನ್ ತೆಂಡೂಲ್ಕರ್ ಅತಿ ಹೆಚ್ಚು ರನ್:


‘ಕ್ರಿಕೆಟ್ ದೇವರು’ ಸಚಿನ್ ತೆಂಡೂಲ್ಕರ್ ಅವರ ಈ ದಾಖಲೆಯನ್ನು ಮುರಿಯುವುದು ತುಂಬಾ ಕಷ್ಟ. ಮಾಸ್ಟರ್ ಬ್ಲಾಸ್ಟರ್ 45 ಪಂದ್ಯಗಳಲ್ಲಿ 2,278 ರನ್ ಗಳಿಸಿದ್ದಾರೆ.


ಲಸಿತ್ ಮಾಲಿಂಗ ಡಬಲ್ ಹ್ಯಾಟ್ರಿಕ್:


ಶ್ರೀಲಂಕಾದ ಲೆಜೆಂಡರಿ ಬೌಲರ್ ಲಸಿತ್ ಮಾಲಿಂಗ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ಬ್ಯಾಟರ್‌’ಗಳನ್ನು ಔಟ್ ಮಾಡಿದ ಏಕೈಕ ಬೌಲರ್. ಈ ದಾಖಲೆಯನ್ನು ಮುರಿಯುವುದು ಬಹುತೇಕ ಅಸಾಧ್ಯವೆಂದು ತೋರುತ್ತದೆ.


ವಿಶ್ವಕಪ್ ಗೆದ್ದ ಕಿರಿಯ ನಾಯಕ:


1983ರ ಐತಿಹಾಸಿಕ ವಿಶ್ವಕಪ್ ಪ್ರಶಸ್ತಿಗೆ ಭಾರತೀಯ ಕ್ರಿಕೆಟ್ ತಂಡವನ್ನು ಮುನ್ನಡೆಸಿದಾಗ ದಂತಕಥೆ ಕಪಿಲ್ ದೇವ್ ಕೇವಲ 24 ವರ್ಷ ವಯಸ್ಸಿನವರಾಗಿದ್ದರು. ಅವರು ಈಗಲೂ ಪ್ರತಿಷ್ಠಿತ ಟ್ರೋಫಿಯನ್ನು ಎತ್ತಿಹಿಡಿದ ಅತ್ಯಂತ ಕಿರಿಯ ನಾಯಕರಾಗಿ ಮುಂದುವರಿದಿದ್ದಾರೆ.


ಆಸ್ಟ್ರೇಲಿಯನ್ ಕ್ರಿಕೆಟ್ ತಂಡದ ಅಜೇಯ ಸರಣಿ:


ಆಸ್ಟ್ರೇಲಿಯಾ 1999-2011ರ ನಡುವೆ 34 ಪಂದ್ಯಗಳಲ್ಲಿ ಅಜೇಯ ಸರಣಿಯನ್ನು ಹೊಂದಿತ್ತು. 32 ಪಂದ್ಯಗಳನ್ನು ಗೆದ್ದಿದ್ದರೆ, ಒಂದು ಟೈ ಆಗಿತ್ತು. ಮತ್ತೊಂದು ಪಂದ್ಯವನ್ನು ಕೈಬಿಡಲಾಯಿತು.


ಇದನ್ನೂ ಓದಿ: “ಟೀಂ ಇಂಡಿಯಾ DRSನ್ನು ತನಗೆ ಬೇಕಾದಂತೆ ಬಳಸುತ್ತಿದೆ”- ಪಾಕ್ ಕ್ರಿಕೆಟಿಗನ ಶಾಕಿಂಗ್ ಹೇಳಿಕೆ ವೈರಲ್


ಕುಮಾರ ಸಂಗಕ್ಕಾರ ಸತತ ಶತಕಗಳು:


2015ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಏಕದಿನ ವಿಶ್ವಕಪ್‌’ನಲ್ಲಿ ಶ್ರೀಲಂಕಾದ ಆಟಗಾರ ಕುಮಾರ ಸಂಗಕ್ಕಾರ ಸತತ ನಾಲ್ಕು ಶತಕಗಳನ್ನು ಸಿಡಿಸಿದ್ದರು. ಇದು ಏಕದಿನ ಕ್ರಿಕೆಟ್‌’ನ ಇತಿಹಾಸದಲ್ಲಿ ಕೇವಲ ಇಬ್ಬರು ಬ್ಯಾಟರ್‌’ಗಳು ಸಾಧಿಸಿದ ಅಪರೂಪದ ದಾಖಲೆಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ