Mitchell Starc Records: ಆಸ್ಟ್ರೇಲಿಯ ಕ್ರಿಕೆಟ್ ತಂಡದಲ್ಲಿ ವೇಗದ ಬೌಲಿಂಗ್ ದಾಳಿಗೆ ಹೆಸರುವಾಸಿ ಆಗಿರುವ ಮಿಚೆಲ್ ಸ್ಟಾರ್ಕ್ ಭಾನುವಾರ (ಅಕ್ಟೋಬರ್ 08, 2023)  ಭಾರತದ ವಿರುದ್ಧ ನಡೆದ ಪಂದ್ಯದಲ್ಲಿ ಶ್ರೀಲಂಕಾದ ಲಸಿತ್ ಮಾಲಿಂಗ ಅವರ ವಿಶ್ವ ದಾಖಲೆಯನ್ನು ಮುರಿದು ಸಾಧನೆ ಗೈದಿದ್ದಾರೆ. 


COMMERCIAL BREAK
SCROLL TO CONTINUE READING

ಅಕ್ಟೋಬರ್ 8 ರಂದು ಚೆನ್ನೈನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಇನಿಂಗ್ಸ್‌ನ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಭಾರತದ ಬ್ಯಾಟ್ಸ್‌ಮನ್ ಇಶಾನ್ ಕಿಶನ್ (0) ಅವರನ್ನು ಔಟ್ ಮಾಡುವ ಮೂಲಕ ಮಿಚೆಲ್ ಸ್ಟಾರ್ಕ್ ಈ ವಿಶ್ವ ದಾಖಲೆ ಬರೆದಿದ್ದಾರೆ. 


ಇದನ್ನೂ ಓದಿ- ಕ್ರಿಕೆಟ್ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ರವೀಂದ್ರ ಜಡೇಜಾ ಕಮಾಲ್, 1987ರ ಬಳಿಕ ಭಾರತೀಯರೊಬ್ಬರು ಈ ಸಾಧನೆ ಮಾಡಿರುವುದು ಇದೇ ಮೊದಲು


ವಿಶ್ವಕಪ್‌ನಲ್ಲಿ ಲಸಿತ್ ಮಾಲಿಂಗ ಅವರ ವಿಶ್ವ ದಾಖಲೆ ಮುರಿದ ಮಿಚೆಲ್ ಸ್ಟಾರ್ಕ್: 
ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ವಿಶ್ವಕಪ್‌ನಲ್ಲಿ 25 ಇನ್ನಿಂಗ್ಸ್‌ಗಳಲ್ಲಿ 50 ವಿಕೆಟ್‌ಗಳನ್ನು ಪಡೆಯುವ ಮೂಲಕ ವಿಶ್ವ ದಾಖಲೆ ಬರೆದಿದ್ದರು. ಇದೀಗ, ಮಿಚೆಲ್ ಸ್ಟಾರ್ಕ್ 19ನೇ ಇನ್ನಿಂಗ್ಸ್‌ನಲ್ಲಿ ಅತಿವೇಗವಾಗಿ 50 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದರೊಂದಿಗೆ ಮಿಚೆಲ್ ಸ್ಟಾರ್ಕ್ ವಿಶ್ವಕಪ್‌ನಲ್ಲಿ ವೇಗವಾಗಿ 50 ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. 


ಇದನ್ನೂ ಓದಿ- ಗೆದ್ದರೂ ಕಳಪೆ ದಾಖಲೆ ಬರೆದ ಭಾರತ: ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಮಾಡಿರದ ಕೆಟ್ಟ ರೆಕಾರ್ಡ್ ಇದು…!


ವಿಶ್ವಕಪ್‌ನಲ್ಲಿ ಅತಿ ವೇಗದ 50 ವಿಕೆಟ್ ಪಡೆದ ಆಟಗಾರರ ಪಟ್ಟಿ ಈ ಕೆಳಕಂಡಂತಿದೆ: 


ವಿಶ್ವಕಪ್‌ನಲ್ಲಿ ಅತಿ ವೇಗದ 50 ವಿಕೆಟ್ ಪಡೆದ ಆಟಗಾರರ ಪಟ್ಟಿ
ಬೌಲರ್ ವಿಕೆಟ್‌ಗಳು 50 ODI ವಿಶ್ವಕಪ್ ವಿಕೆಟ್‌ಗಳನ್ನು ತಲುಪಲು ತೆಗೆದುಕೊಂಡ ಇನ್ನಿಂಗ್ಸ್
ಮಿಚೆಲ್ ಸ್ಟಾರ್ಕ್ 50 19 ಇನ್ನಿಂಗ್ಸ್‌ಗಳಲ್ಲಿ
ಲಸಿತ್ ಮಾಲಿಂಗ  56 25 ಇನ್ನಿಂಗ್ಸ್‌ಗಳಲ್ಲಿ
ಗ್ಲೆನ್ ಮೆಕ್‌ಗ್ರಾತ್ 71 30 ಇನ್ನಿಂಗ್ಸ್‌ಗಳಲ್ಲಿ
ಮುತ್ತಯ್ಯ ಮುರಳೀಧರನ್ 68 30 ಇನ್ನಿಂಗ್ಸ್‌ಗಳಲ್ಲಿ
ವಾಸಿಂ ಅಕ್ರಮ್ 55 33 ಇನ್ನಿಂಗ್ಸ್

 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.