Mohammad Shami record: ಭಾರತ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಮತ್ತೊಮ್ಮೆ ವಿಶ್ವಕಪ್’ನಲ್ಲಿ ಪ್ರಬಲವಾಗಿ ಆಟವನ್ನಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಧರ್ಮಶಾಲಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 5 ವಿಕೆಟ್ ಪಡೆದು ಕಿವೀಸ್ ತಂಡವನ್ನು 273 ರನ್‌’ಗಳಿಗೆ ಸೀಮಿತಗೊಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೀವೀಸ್ ವಿರುದ್ಧ ಮೊದಲ ಎಸೆತದಲ್ಲೇ ವಿಕೆಟ್ ಕಿತ್ತ ಮೊಹಮ್ಮದ್ ಶಮಿ


ಈ ಬಾರಿಯ ವಿಶ್ವಕಪ್‌’ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ತಂಡ ಅವರಿಗೆ ಇದುವರೆಗೂ ಅವಕಾಶ ನೀಡಿರಲಿಲ್ಲ. ಆದರೆ ಕಳೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಇಂದು ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ಶಮಿ ಅವರನ್ನು ಕಣಕ್ಕಿಳಿಸಲಾಗಿದೆ. ಈ ಸಂದರ್ಭದಲ್ಲಿ 5 ವಿಕೆಟ್ ಪಡೆದು ಫಾರ್ಮ್ ಹಾಗೂ ಫಿಟ್ನೆಸ್ ಸಾಬೀತುಪಡಿಸಿದ್ದಾರೆ ಶಮಿ.


ಪಂದ್ಯದ ಆರಂಭದಿಂದಲೂ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ ಶಮಿ 10 ಓವರ್‌’ಗಳ ಕೋಟಾದಲ್ಲಿ 54 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ. 33 ವರ್ಷದ ವೇಗದ ಬೌಲರ್ ವಿಲ್ ಯಂಗ್, ರಚಿನ್ ರವೀಂದ್ರ, ಡ್ಯಾರೆಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ ಮತ್ತು ಮ್ಯಾಟ್ ಹೆನ್ರಿಯವರನ್ನು ಔಟ್ ಮಾಡಿದ್ದಾರೆ.


ಶಮಿ ತಮ್ಮ ವೃತ್ತಿಜೀವನದ ಮೂರನೇ ಏಕದಿನ ವಿಶ್ವಕಪ್ ಆಡುತ್ತಿದ್ದಾರೆ. ಇಂದು ಕಬಳಿಸಿದ 5 ವಿಕೆಟ್ ಸೇರಿ ಇದುವರೆಗೆ 36 ವಿಕೆಟ್‌’ಗಳನ್ನು ತಮ್ಮ ಹೆಸರಿನಲ್ಲಿ ಪಡೆದಿದ್ದಾರೆ. ಇದು ಅವರ 12ನೇ ವಿಶ್ವಕಪ್ ಪಂದ್ಯವಾಗಿದೆ. ಇದರೊಂದಿಗೆ ಏಕದಿನ ವಿಶ್ವಕಪ್‌ನಲ್ಲಿ ಎರಡನೇ ಬಾರಿಗೆ 5 ವಿಕೆಟ್ ಕಬಳಿಸಿದ್ದಾರೆ. ಈ ಸಾಧನೆ ಮಾಡಿದ (ಏಕದಿನ ವಿಶ್ವಕಪ್‌’ನಲ್ಲಿ ಎರಡು ಬಾರಿ 5 ವಿಕೆಟ್ ಪಡೆದ) ಏಕೈಕ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ.


ಇದನ್ನೂ ಓದಿ: ಜಿಂಕೆಯಂತೆ ಜಿಗಿದು ಅದ್ಭುತ ಕ್ಯಾಚ್ ಹಿಡಿದ ಶ್ರೇಯಸ್! ಜಡೇಜಾ ಬಳಿಕ ಪದಕಕ್ಕೆ ಬೇಡಿಕೆಯಿಟ್ಟ ಅಯ್ಯರ್


ಶಮಿ ಭಾರತದ ಹಿರಿಯ ವೇಗದ ಬೌಲರ್. ಆದರೆ ಇಲ್ಲಿಯವರೆಗೆ ಅವರನ್ನು ಈ ವಿಶ್ವಕಪ್‌’ನಲ್ಲಿ ಭಾರತ ತಂಡದ ಪ್ರಮುಖ ಅಸ್ತ್ರವಾಗಿ ನೋಡಲಾಗಿಲ್ಲ. ಮೊದಲ 4 ಪಂದ್ಯಗಳ ಪ್ಲೇಯಿಂಗ್ ಇಲೆವೆನ್‌’ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಅಂದಹಾಗೆ ಇಂದಿನ ಇನಿಂಗ್ಸ್‌ನ 9ನೇ ಓವರ್‌’ನಲ್ಲಿ ಮೊದಲ ಬದಲಾವಣೆಯಾಗಿ ಅವರಿಗೆ ಬೌಲಿಂಗ್ ನೀಡಲಾಯಿತು. ಆದರೆ, ಶಮಿ ತನ್ನ ಸ್ಪೆಲ್‌’ನ ಮೊದಲ ಎಸೆತದಲ್ಲಿ ವಿಲ್ ಯಂಗ್ (17) ಅವರನ್ನು ಬೌಲ್ಡ್ ಮಾಡಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.