ವಿರಾಟ್ ಕೊಹ್ಲಿ 49ನೇ ಸೆಂಚುರಿಗಾಗಿ ಕಾತುರದಿಂದ ಕಾಯುತ್ತಿದ್ದಾನೆ ಪಾಕಿಸ್ತಾನ ಈ ಸ್ಟಾರ್ ಬ್ಯಾಟ್ಸ್’ಮನ್
Mohammad Rizwan Wishes Virat Kohli: ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ಕೂಡ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದಿತ್ತು. ನವೆಂಬರ್ 5 ರಂದು ಇದೇ ಮೈದಾನದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ನಡೆಯಲಿದೆ.
Mohammad Rizwan Wishes Virat Kohli: ಭಾರತೀಯ ಕ್ರಿಕೆಟ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಅವರು ನವೆಂಬರ್ 5 ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಂದೇ ಕೋಲ್ಕತ್ತಾದ ಈಡನ್ ಗಾರ್ಡನ್’ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ತನ್ನ 8ನೇ ಪಂದ್ಯವನ್ನಾಡಲಿದೆ. ಆದರೆ ಇವೆಲ್ಲದಲ್ಲೂ ಮುನ್ನ ಪಾಕಿಸ್ತಾನದ ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ಮೊಹಮ್ಮದ್ ರಿಜ್ವಾನ್, ಕೊಹ್ಲಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಜನ್ಮದಿನದ ಶುಭಾಶಯಗಳನ್ನು ಹೇಳಿದ್ದಾರೆ.
ಇದನ್ನೂ ಓದಿ: 100 ವರ್ಷಗಳ ಬಳಿಕ ಅದೃಷ್ಟದ ರಾಜಯೋಗಗಳು: ಮಹಾಲಕ್ಷ್ಮೀ ಪೂರ್ಣ ಆಶೀರ್ವಾದದಿಂದ ಈ ರಾಶಿಗೆ ಧನವೈಭವ-ಸುಖೀ ಜೀವನ ಸಿದ್ಧಿ
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ಕೂಡ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದಿತ್ತು. ನವೆಂಬರ್ 5 ರಂದು ಇದೇ ಮೈದಾನದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಪಂದ್ಯ ನಡೆಯಲಿದೆ. ಪಾಕಿಸ್ತಾನ-ಬಾಂಗ್ಲಾದೇಶ ಪಂದ್ಯಕ್ಕೂ ಮುನ್ನ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಜ್ವಾನ್ ಕಿಂಗ್ ಕೊಹ್ಲಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು.
ಮಾಧ್ಯಮ ವರದಿಗಳ ಪ್ರಕಾರ, "ನನಗೆ ವಿರಾಟ್ ಕೊಹ್ಲಿ ಮೇಲೆ ಅಪಾರ ಪ್ರೀತಿ ಇದೆ. ದೇವರು ಅವರಿಗೆ ಹೆಚ್ಚಿನ ಶಕ್ತಿಯನ್ನು ನೀಡಲಿ. ಅವರು ಈ ವಿಶ್ವಕಪ್ ನಲ್ಲಿ 49 ಮತ್ತು 50 ನೇ ಶತಕ ಗಳಿಸಲಿ" ಎಂದು ಹಾರೈಸಿದ್ದಾರೆ. ರಿಜ್ವಾನ್ ಅವರ ಈ ಹೇಳಿಕೆಯನ್ನು ಕೇಳಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಗರಿಷ್ಠ ಸಂಖ್ಯೆಯ ಶತಕಗಳನ್ನು ಗಳಿಸಿದ್ದು, ಅವರ ಹೆಸರಿನಲ್ಲಿ 49 ಶತಕಗಳಿವೆ. 2023ರ ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ 48ನೇ ಶತಕ ಸಿಡಿಸಿದ್ದರು. ಇದೀಗ ಅವರು ಸಚಿನ್ ದಾಖಲೆಯನ್ನು ಮುರಿಯಲು ಮತ್ತು ಏಕದಿನದಲ್ಲಿ ಶತಕಗಳ ಅರ್ಧ ಶತಕ ಪೂರೈಸಲು ಕೇವಲ ಎರಡು ಹೆಜ್ಜೆ ದೂರದಲ್ಲಿದ್ದಾರೆ.
ಇದನ್ನೂ ಓದಿ: “ದೇಶದ್ರೋಹ ಬಗೆಯುವ ಪರಿಸ್ಥಿತಿ ಬಂದ್ರೆ..”- ಟೀಂ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಹೇಳಿಕೆ
ಇನ್ನೊಂದೆಡೆ ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಸಂದರ್ಭದಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್’ನಲ್ಲಿ ಕೇಕ್ ಕತ್ತರಿಸಲಾಗುತ್ತಿದೆ. ಇದಲ್ಲದೇ 70 ಸಾವಿರ ಪ್ರೇಕ್ಷಕರು ವಿರಾಟ್ ಫೇಸ್ ಮಾಸ್ಕ್ ಧರಿಸಲಿದ್ದಾರೆ. ಈಡನ್ ಗಾರ್ಡನ್ ನಲ್ಲಿ ಲೇಸರ್ ಶೋ ಕೂಡ ಆಯೋಜಿಸಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪಟಾಕಿ ಸಿಡಿಸಲಾಗುತ್ತಿದೆ. ಈ ಮೂಲಕ ಕಿಂಗ್ ಕೊಹ್ಲಿ ಹುಟ್ಟುಹಬ್ಬವನ್ನು ವಿಶೇಷವಾಗಿಸಲು ಬಂಗಾಳ ಕ್ರಿಕೆಟ್ ಸಂಸ್ಥೆ ಸಿದ್ಧತೆಯಲ್ಲಿ ತೊಡಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.