ವಿಶ್ವಕಪ್ ಸೋಲಿನ ಹೊಣೆಹೊತ್ತು ನಾಯಕತ್ವದಿಂದ ಕೆಳಗಿದ ಪಾಕ್ ಟೀಂ ಕ್ಯಾಪ್ಟನ್ ಬಾಬರ್..!
World cup 2023 final : ವಿಶ್ವಕಪ್ 2023ನ ಸೋಲಿನ ಬಳಿಕ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕತ್ವಕ್ಕೆ ಬಾಬರ್ ಅಜಮ್ ರಾಜೀನಾಮೆ ಘೋಷಿಸಿದ್ದಾರೆ. ಅಲ್ಲದೆ, ತಮಗೆ ಈ ಮಹತ್ವದ ಜವಾಬ್ದಾರಿ ನೀಡಿದ ಪಾಕ್ ಕ್ರಿಕೆಟ್ ಮಂಡಳಿ ಮತ್ತು ತಮ್ಮ ಮೇಲೆ ನಂಬಿಕೆ ಇಟ್ಟಿದ್ದ ಅಭಿಮಾನಿಗಳಿಗೆ ಕೃತಜ್ಞತೆಗಳನ್ನು ಸಲ್ಲಿದ್ದಾರೆ.
Babar Azam resigns : 2023 ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನ ನಾಕೌಟ್ ಹಂತವನ್ನು ತಲುಪಲು ಪಾಕಿಸ್ತಾನ್ ತಂಡ ವಿಫಲವಾದ ಕಾರಣ ಸೋಲಿನ ಹೊಣೆ ಬಾಬರ್ ಅಜಮ್ ಎಲ್ಲಾ ಮೂರು ಸ್ವರೂಪಗಳಿಂದ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ನವೆಂಬರ್ 15 ರ ಬುಧವಾರದಂದು ಅವರು ತಮ್ಮ ರಾಜೀನಾಮೆಯನ್ನು ಘೋಷಿಸಿದ್ದಾರೆ.
ಈ ಕುರಿತು ಸ್ವತಃ ಬಾಬರ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ, "2019 ರಲ್ಲಿ ಪಾಕಿಸ್ತಾನವನ್ನು ಮುನ್ನಡೆಸಲು ಪಿಸಿಬಿಯಿಂದ ನನಗೆ ಕರೆ ಬಂದ ಕ್ಷಣ ನನಗೆ ಇನ್ನೂ ಸ್ಪಷ್ಟವಾಗಿ ನೆನಪಿದೆ. ಕಳೆದ ನಾಲ್ಕು ವರ್ಷಗಳಲ್ಲಿ, ನಾನು ಅನೇಕ ಏಳು ಬೀಳುಗಳನ್ನು ಅನುಭವಿಸಿದ್ದೇನೆ. ಆದರೆ ಕ್ರಿಕೆಟ್ ಜಗತ್ತಿನಲ್ಲಿ ಪಾಕಿಸ್ತಾನದ ಹೆಮ್ಮೆ ಮತ್ತು ಗೌರವವನ್ನು ಕಾಪಾಡಿಕೊಳ್ಳುವ ಗುರಿಯನ್ನು ನಾನು ಇಂದಿಗೂ ಹೊಂದಿದ್ದೇನೆ.
ಇದನ್ನೂ ಓದಿ: ಕೊಹ್ಲಿ ಕರಿಯರ್ ಇನ್ನು ......! ಕಿಂಗ್ ಬಗ್ಗೆ ಭವಿಷ್ಯ ನುಡಿದ ಸೌರವ್ ಗಂಗೂಲಿ
ವೈಟ್-ಬಾಲ್ ಮಾದರಿಯಲ್ಲಿ ನಮ್ಮ ತಂಡ ನಂ.1 ಸ್ಥಾನಕ್ಕೇರಿತು, ಅದು ಆಟಗಾರರು, ತರಬೇತುದಾರರು ಮತ್ತು ನಿರ್ವಹಣೆಯ ಸಾಮೂಹಿಕ ಪ್ರಯತ್ನದ ಫಲಿತಾಂಶ. ಈ ಸಮಯದಲ್ಲಿ ನಮಗೆ ಬೆಂಬಲ ನೀಡಿದ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳಿಗೆ ನನ್ನ ಕೃತಜ್ಞತೆಗಳನ್ನು ವ್ಯಕ್ತಪಡಿಸಲು ನಾನು ಬಯಸುತ್ತೇನೆ.
ಶ್ರೇಷ್ಠ ದಾಖಲೆ ಬರೆದ ಶಮಿಗೆ ಪ್ರಧಾನಿ ಮೋದಿಯ ವಿಶೇಷ ಸಂದೇಶ ! ಏನಿತ್ತು ಆ ಸಂದೇಶದಲ್ಲಿ ?
ಇನ್ನು ಬಾಬರ್ ಅವಧಿಯಲ್ಲಿ, ಪಾಕಿಸ್ತಾನ ODIಗಳಲ್ಲಿ ನಂ. 1 ಸ್ಥಾನಕ್ಕೆ ಹೋಗಿತ್ತು. ಆದ್ರೆ, ಬಾಬರ್ ತಂಡ ಐಸಿಸಿ ವಿಶ್ವಕಪ್‌ನಲ್ಲಿ ನೀರಸ ಪ್ರದರ್ಶನ ತೋರಿದರು. ಒಂಬತ್ತು ಪಂದ್ಯಗಳಲ್ಲಿ 8ನೇ ರ್ಯಾಂಕ್ ಪಡೆದು 5 ಸ್ಥಾನ ಕ್ಕೆ ಸೀಮಿತರಾದರು. ಬಾಬರ್ ಒಂಬತ್ತು ವಿಶ್ವಕಪ್ ಪಂದ್ಯಗಳಲ್ಲಿ 320 ರನ್ ಗಳಿಸಿದ್ದಾರೆ.
ಪಾಕಿಸ್ತಾನ ತನ್ನ ಒಂಬತ್ತು ಪಂದ್ಯಗಳಲ್ಲಿ ಐದು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿತು. ಸಾಂಪ್ರದಾಯಿಕ ಎದುರಾಳಿ ಭಾರತದ ಕೈಯಲ್ಲಿ ಏಳು ವಿಕೆಟ್‌ಗಳಿಂದ ಒಂದು ಸೋಲನ್ನು ಅನುಭವಿಸಿತು. ಈ ವಾರದ ಆರಂಭದಲ್ಲಿ, ಪಾಕಿಸ್ತಾನ ಪುರುಷರ ತಂಡದ ಬೌಲಿಂಗ್ ಕೋಚ್ ಸ್ಥಾನಕ್ಕೆ ಮೊರ್ನೆ ಮೊರ್ಕೆಲ್ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ:ಸೆಮೀಸ್’ನಲ್ಲಿ ಸೋಲುಂಡು ವಿಶ್ವಕಪ್’ನಿಂದ ಹೊರಬಿದ್ದ ನ್ಯೂಜಿಲೆಂಡ್ ತಂಡಕ್ಕೆ ಸಿಕ್ಕ ಮೊತ್ತ ಎಷ್ಟು ಕೋಟಿ ಗೊತ್ತಾ?
ಸರ್ಫರಾಜ್ ಅಹ್ಮದ್ ಅವರಿಂದ ಅಧಿಕಾರ ವಹಿಸಿಕೊಂಡ ನಂತರ ಬಾಬರ್ ಎಲ್ಲಾ ಸ್ವರೂಪಗಳಲ್ಲಿ 133 ಪಂದ್ಯಗಳಲ್ಲಿ ಪಾಕಿಸ್ತಾನದ ನಾಯಕತ್ವ ವಹಿಸಿದ್ದರು, ಅವುಗಳಲ್ಲಿ 78 ರಲ್ಲಿ ಗೆದ್ದರು ಮತ್ತು ಕೇವಲ 43 ರಲ್ಲಿ ಸೋತಿದ್ದರು. ಸಧ್ಯ ವಿಶ್ವಕಪ್ 2023ರ ಸೋಲಿನ ಹೊಣೆಹೊತ್ತು ಎಲ್ಲಾ ಸ್ವರೂಪಗಳ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.