Shadab Khan statement on Hyderabad Biryani: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ಅಕ್ಟೋಬರ್ 5 ರಂದು ಅಹಮದಾಬಾದ್‌’ನಲ್ಲಿ ಪ್ರಾರಂಭವಾಗಲಿದೆ. ಇದಕ್ಕೂ ಮುಂಚಿತವಾಗಿ ಪಾಕಿಸ್ತಾನ ಕ್ರಿಕೆಟ್ ಎರಡು ಅಭ್ಯಾಸ ಪಂದ್ಯಗಳನ್ನಾಡಿದ್ದರೂ ಸಹ ಸೋಲು ಕಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಧೋನಿ, ಸೆಹ್ವಾಗ್’ರಿಂದಲೂ ಕಷ್ಟಸಾಧ್ಯವಾದ ಈ ವಿಶ್ವದಾಖಲೆ ಬರೆಯಲಿದ್ದಾರೆ ರೋಹಿತ್ ಶರ್ಮಾ!


ಇನ್ನೊಂದೆಡೆ ಪಾಕಿಸ್ತಾನಕ್ಕೆ ಇದೀಗ ಚಿಂತೆಯಾಗಿ ಮಾರ್ಪಟ್ಟ ವಿಷಯವೆಂದರೆ ಅವರ ಉನ್ನತ ಬ್ಯಾಟಿಂಗ್ ಕ್ರಮಾಂಕ ಮತ್ತು ಫೀಲ್ಡಿಂಗ್, ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅತ್ಯಂತ ಕಳಪೆಯಾಗಿ ಬಿಂಬಿತವಾಗಿದ್ದು.


ಬಾಬರ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಶಾದಾಬ್ ಖಾನ್, ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಒಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ತಮಾಷೆಯೋ? ಅಥವಾ ವ್ಯಂಗ್ಯವೋ ಎಂಬುದು ಅರಿವಿಗೆ ಬರದ ಸಂಗತಿ.


“ಪಾಕಿಸ್ತಾನದ ಆಟಗಾರರು ಹೈದರಾಬಾದ್‌’ನಲ್ಲಿ ಇರುವುದರಿಂದ, ಅವರು ವಿಶ್ವಪ್ರಸಿದ್ಧ ಹೈದರಾಬಾದಿ ಬಿರಿಯಾನಿಯನ್ನು ಹೆಚ್ಚು ತಿನ್ನುತ್ತಿದ್ದಾರೆ. ಅವರಿಗೆ ಅದರ ರುಚಿ ಸಿಕ್ಕಿದೆ. ಈಗ ಕೆಲವು ಆಟಗಾರರಿಗೆ ಅದನ್ನು ಬಿಡುವುದು ತುಂಬಾ ಕಷ್ಟಕರವಾಗಿದೆ ಎಂದು ತೋರುತ್ತದೆ. ಈ ಕಾರಣದಿಂದಾಗಿ ಫೀಲ್ಡಿಂಗ್’ನಲ್ಲಿ ನಾವು ಸ್ವಲ್ಪ ನಿಧಾನವಾಗುತ್ತಿದ್ದೇವೆ" ಎಂದು ಹೇಳಿದ್ದಾರೆ.


ಇದನ್ನೂ ಓದಿ: World Cup: ಮನೆಯಲ್ಲೇ ಕುಳಿತು ವಿಶ್ವಕಪ್ ವೀಕ್ಷಿಸಿ ಎಂದ ವಿರಾಟ್ ಕೊಹ್ಲಿ, ಕಾರಣ ಏನ್ ಗೊತ್ತಾ!


ಗ್ರೌಂಡ್ ಫೀಲ್ಡಿಂಗ್ ಮತ್ತು ಕ್ಯಾಚಿಂಗ್ ವಿಷಯದಲ್ಲಿ ಪಾಕಿಸ್ತಾನ ಎಂದೆಂದೂ ಸಮಸ್ಯೆ ಎದುರಿಸುತ್ತಲೇ ಇದೆ. ಪಾಕಿಸ್ತಾನದ ಸೆಟಪ್‌’ನಲ್ಲಿನ ಅಪರೂಪದ ಕ್ರಿಕೆಟಿಗರಲ್ಲಿ ಶಾದಾಬ್ ಕೂಡ ಸೇರಿದ್ದಾರೆ. ಅವರು ಫೀಲ್ಡಿಂಗ್ ಮತ್ತು ಕ್ಯಾಚಿಂಗ್‌’ನಲ್ಲಿ ಉತ್ತಮರಾಗಿದ್ದಾರೆ. ಆದರೆ ಇತರರನ್ನು ಹೊರತುಪಡಿಸಿ, ಪಾಕಿಸ್ತಾನದ ಫೀಲ್ಡಿಂಗ್ ನಿರ್ವಹಣೆಗೆ ಚೆನ್ನಾಗಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ