ODI World Cup 2023 : ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತದ  ವಿರುದ್ದ ಪಾಕಿಸ್ತಾನ ತಂಡ 7 ವಿಕೆಟ್‌ಗಳ ಹೀನಯಾ ಸೋಲು ಕಂಡಿದೆ.   ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಈ ಪಂದ್ಯದಲ್ಲಿ ಪಾಕಿಸ್ತಾನವನ್ನು 117 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್‌ಗಳಿಂದ  ಪರಾಭವಗೊಳಿಸಿತು. ಭಾರತದ ವಿರುದ್ಧದ ಹೀನಾಯ ಸೋಲು ಕಂಡ   ನಂತರ, ಪಾಕಿಸ್ತಾನದ ನೆಟ್ ರನ್ ರೇಟ್ ಮೇಲೆ ಹೆಚ್ಚು ಪರಿಣಾಮ ಬೀರಿದೆ. ಪಾಕಿಸ್ತಾನ ತಂಡವು ಪ್ರಸ್ತುತ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೂ, ಅದರ ನೆಟ್ ರನ್  (-0.137) ಗೆ ಕುಸಿದಿದೆ. 


COMMERCIAL BREAK
SCROLL TO CONTINUE READING

ಈ ಕಾರಣದಿಂದಾಗಿ  2023ರ ವಿಶ್ವಕಪ್‌ನಿಂದ ಹೊರಗುಳಿಯಲಿದೆ ಪಾಕಿಸ್ತಾನ : 
2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಇದುವರೆಗೆ 3 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 2 ಪಂದ್ಯ ಗೆದ್ದು 1 ಪಂದ್ಯವನ್ನು ಸೋತಿದೆ. ಪಾಕಿಸ್ತಾನ ತಂಡ ಇದುವರೆಗೆ 2023ರ ವಿಶ್ವಕಪ್‌ನಲ್ಲಿ ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ವಿರುದ್ಧದ ಪಂದ್ಯಗಳನ್ನು ಮಾತ್ರ ಗೆದ್ದಿದೆ. ನಂತರ, ಪಾಕಿಸ್ತಾನವು ಭಾರತದ  ವಿರುದ್ದ ಹೀನಾಯ ಸೋಲನ್ನು ಅನುಭವಿಸಬೇಕಾಯಿತು. ಇದರಿಂದಾಗಿ ಅದರ  ನೆಟ್ ರನ್ ರೇಟ್ ಮೇಲೆ ಭಾರೀ ಪರಿಣಾಮ ಬಿದ್ದಿದೆ. 2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಸೆಮಿಫೈನಲ್‌ಗೆ ಪ್ರವೇಶಿಸಬೇಕಾದರೆ, ಒಟ್ಟು 9 ಪಂದ್ಯಗಳಲ್ಲಿ ಕನಿಷ್ಠ 7 ಪಂದ್ಯಗಳನ್ನು ಗೆಲ್ಲಲೇಬೇಕು.  ಹಾಗಾದಾಗ ಮಾತ್ರ  14 ಅಂಕ ಪಡೆದು ಸೆಮಿಫೈನಲ್ ಹಾದಿ ಸುಗಮವಾಗಲಿದೆ. 


ಇದನ್ನೂ ಓದಿ : ಮುಂದಿನ ಪಂದ್ಯದಲ್ಲಿ ಕೊಹ್ಲಿ ಮುಡಿಗೇರಲಿದೆ ಈ ದಾಖಲೆ! ಧೋನಿ ಹಿಂದಿಕ್ಕಲಿದ್ದಾರೆ ವಿರಾಟ್


ಸಂಪೂರ್ಣ ಸಮೀಕರಣ ಇಲ್ಲಿದೆ : 
ವಿಶ್ವಕಪ್ 2023 ರಲ್ಲಿ, ಪಾಕಿಸ್ತಾನವು ಪ್ರಸ್ತುತ 2 ಪಂದ್ಯಗಳನ್ನು ಗೆದ್ದು ಒಂದು ಪಂದ್ಯವನ್ನು ಸೋತು 4 ಅಂಕಗಳನ್ನು ಹೊಂದಿದೆ. 2023 ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು ಇನ್ನೂ ನಾಲ್ಕು ಪಂದ್ಯಗಳನ್ನು  ಸೋತರೆ ಅದರ ಆಟ ಮುಗಿದು ಸೆಮಿಫೈನಲ್‌ನ ರೇಸ್‌ನಿಂದ ಹೊರಗುಳಿಯುತ್ತದೆ. 2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡವು ಇನ್ನೂ 6 ಪಂದ್ಯಗಳನ್ನು ಆಡಬೇಕಿದೆ. ಈ ಪೈಕಿ 4 ಪಂದ್ಯಗಳನ್ನು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸೆಣೆಸಬೇಕಿದೆ.  2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪ್ರಸ್ತುತ ಫಾರ್ಮ್ ಅನ್ನು ನೋಡಿದರೆ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಗೆಲುವು ದಾಖಲಿಸುವುದು ಅಸಾಧ್ಯವೆಂದು ತೋರುತ್ತದೆ. 2023 ರ ವಿಶ್ವಕಪ್‌ನ 9 ಪಂದ್ಯಗಳಲ್ಲಿ ಪಾಕಿಸ್ತಾನ ತಂಡವು ಒಟ್ಟು 5 ರಲ್ಲಿ ಸೋತರೆ,  ಸೆಮಿಫೈನಲ್‌ ತಲುಪುವ ಕನಸು ನುಚ್ಚು ನೂರಾಗಳಿದೆ.  


ಇದನ್ನೂ ಓದಿ : ಬರೋಬ್ಬರಿ 123 ವರ್ಷಗಳ ನಂತರ ಒಲಿಂಪಿಕ್ಸ್‌ಗೆ ಮರಳಿದ ಕ್ರಿಕೆಟ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.