ಮುಂದಿನ ಪಂದ್ಯದಲ್ಲಿ ಕೊಹ್ಲಿ ಮುಡಿಗೇರಲಿದೆ ಈ ದಾಖಲೆ! ಧೋನಿ ಹಿಂದಿಕ್ಕಲಿದ್ದಾರೆ ವಿರಾಟ್

Virat Kohli World Cup Records:ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೊಡ್ಡ ದಾಖಲೆ ಬರೆಯಲಿದ್ದಾರೆ. ಈ ಸಾಧನೆಯನ್ನು  ಪೂರ್ತಿ ಮಾಡುವ ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ.

Written by - Ranjitha R K | Last Updated : Oct 17, 2023, 09:50 AM IST
  • ಅಕ್ಟೋಬರ್ 19 ರಂದು ಭಾರತ- ಬಾಂಗ್ಲಾ ಪಂದ್ಯ
  • ಕೊಹ್ಲಿ ಹೆಸರಿಗೆ ಸೇರಲಿದೆ ಈ ಸಾಧನೆ
  • ಮೂರನೇ ಸ್ಥಾನಕ್ಕೆ ಏರಲಿರುವ ವಿರಾಟ್
ಮುಂದಿನ ಪಂದ್ಯದಲ್ಲಿ ಕೊಹ್ಲಿ ಮುಡಿಗೇರಲಿದೆ ಈ ದಾಖಲೆ! ಧೋನಿ ಹಿಂದಿಕ್ಕಲಿದ್ದಾರೆ ವಿರಾಟ್   title=

Virat Kohli World Cup Records : ಭಾರತ ತಂಡ ವಿಶ್ವಕಪ್ 2023 ರಲ್ಲಿ ಇದುವರೆಗೆ ಮೂರು ಪಂದ್ಯಗಳನ್ನು ಆಡಿದ್ದು,  ಮೂರರಲ್ಲೂ ಗೆದ್ದಿದೆ. ತಂಡದ ಮುಂದಿನ ಪಂದ್ಯ ಅಕ್ಟೋಬರ್ 19 ರಂದು ನಡೆಯಲಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ದೊಡ್ಡ ದಾಖಲೆ ಬರೆಯಲಿದ್ದಾರೆ. ಈ ಸಾಧನೆ ಪೂರ್ತಿ ಮಾಡುವ ಕೇವಲ ಒಂದು ಹೆಜ್ಜೆ ದೂರದಲ್ಲಿದ್ದಾರೆ. ಬಾಂಗ್ಲಾದೇಶ ವಿರುದ್ಧದ ತಂಡದ ಮುಂದಿನ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದ ಹಾಗೆಯೇ ವಿರಾಟ್ ಹೆಸರಿನಲ್ಲಿ ಈ ದಾಖಲೆ ಸೇರಿಕೊಳ್ಳುತ್ತದೆ. ಈ ಮೂಲಕ ವಿರಾಟ್ ಕೊಹ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಕೂಡಾ ಹಿಂದಿಕ್ಕುತ್ತಾರೆ. 

ಕೊಹ್ಲಿ ಹೆಸರಿಗೆ ಸೇರಲಿದೆ ಈ ಸಾಧನೆ : 
ವಿರಾಟ್ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ ಮೈದಾನಕ್ಕಿಳಿದ ತಕ್ಷಣ, ಅವರು ಅತಿ ಹೆಚ್ಚು ವಿಶ್ವಕಪ್ ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯನ್ನು  ಸೇರಿಕೊಳ್ಳುತ್ತಾರೆ. ಇದು ಕೊಹ್ಲಿಗೆ 30ನೇ ವಿಶ್ವಕಪ್ ಪಂದ್ಯವಾಗಿದೆ. ಇದರೊಂದಿಗೆ ಅವರು ಲೆಜೆಂಡರಿ ಎಂಎಸ್ ಧೋನಿಯನ್ನೂ ಹಿಂದೆ ಹಾಕಲಿದ್ದಾರೆ. ಧೋನಿ ತಮ್ಮ ವೃತ್ತಿಜೀವನದಲ್ಲಿ 29 ವಿಶ್ವಕಪ್ ಪಂದ್ಯಗಳನ್ನು ಆಡಿದ್ದಾರೆ. ಕೊಹ್ಲಿ ವಿಶ್ವಕಪ್‌ನಲ್ಲಿ 30 ಪಂದ್ಯಗಳನ್ನು ಆಡಿರುವ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ಅವರಿಗೆ ಸಮನಾಗುತ್ತಾರೆ.

ಇದನ್ನೂ ಓದಿ : ಬರೋಬ್ಬರಿ 123 ವರ್ಷಗಳ ನಂತರ ಒಲಿಂಪಿಕ್ಸ್‌ಗೆ ಮರಳಿದ ಕ್ರಿಕೆಟ್

 ಮೂರನೇ ಸ್ಥಾನಕ್ಕೆ ಏರಲಿರುವ ವಿರಾಟ್ : 
ವಿಶ್ವಕಪ್‌ನಲ್ಲಿ ಭಾರತ ಪರ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರರ ಪೈಕಿ ವಿರಾಟ್ ಕೊಹ್ಲಿ ಮೂರನೇ ಸ್ಥಾನಕ್ಕೆ ತಲುಪಲಿದ್ದಾರೆ. ಸಚಿನ್ ತೆಂಡೂಲ್ಕರ್ ಮತ್ತು ಜಾವಗಲ್ ಶ್ರೀನಾಥ್  ವಿರಾಟ್ ಕೊಹ್ಲಿಗಿಂತ ಮುಂದೆ ಇದ್ದಾರೆ. ಸಚಿನ್ 45 ಪಂದ್ಯಗಳನ್ನು ಆಡಿದ್ದರೆ, ಜಾವಗಲ್ ಶ್ರೀನಾಥ್ 34 ವಿಶ್ವಕಪ್ ಪಂದ್ಯಗಳನ್ನು ಆಡಿದ್ದಾರೆ.  

ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಭಾರತೀಯ ಆಟಗಾರರು :
ಸಚಿನ್ ತೆಂಡೂಲ್ಕರ್ - 45 ಪಂದ್ಯಗಳು   
ಜಾವಗಲ್ ಶ್ರೀನಾಥ್ - 34 ಪಂದ್ಯಗಳು 
ಮೊಹಮ್ಮದ್ ಅಜರುದ್ದೀನ್ - 30 ಪಂದ್ಯಗಳು 
ಎಂಎಸ್ ಧೋನಿ -29 ಪಂದ್ಯಗಳು 
ವಿರಾಟ್ ಕೊಹ್ಲಿ - 29 ಪಂದ್ಯಗಳು 
ಕಪಿಲ್ ದೇವ್ - 26 ಪಂದ್ಯಗಳು 
ಜಹೀರ್ ಖಾನ್ - 23 ಪಂದ್ಯಗಳು 

ಇದನ್ನೂ ಓದಿ : ಸತತ ಸೋಲಿನ ಕೊಂಡಿ ಕಳಚಿದ ಆಸ್ಟ್ರೇಲಿಯಾ: ಶ್ರೀಲಂಕಾ ವಿರುದ್ಧ 5 ವಿಕೆಟ್’ಗಳ ಸುಲಭ ಗೆಲುವು-ಹೈಲೈಟ್ಸ್ ಇಲ್ಲಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News