World Cup 2023 News: ಪಾಕಿಸ್ತಾನದ ಟಿವಿ ಆ್ಯಂಕರ್ ಝೈನಾಬ್ ಅಬ್ಬಾಸ್ 2023ರ ವಿಶ್ವಕಪ್ ಮಧ್ಯದಲ್ಲಿ ಭಾರತವನ್ನು ತೊರೆದು ತನ್ನ ದೇಶಕ್ಕೆ ಮರಳಿದ್ದಾರೆ. ಈ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಭಾರತ ವಿರೋಧಿ ಪೋಸ್ಟ್‌’ಗಳನ್ನು ಹಾಕಿದ್ದ ಆರೋಪ ಆಕೆಯ ಮೇಲಿದ್ದು, ಇಂದು ಈಕೆ ಸೋಮವಾರ ದೇಶವನ್ನು ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ವೈಯಕ್ತಿಕ ಕಾರಣಗಳಿಂದ ಜೈನಬ್ ಭಾರತವನ್ನು ತೊರೆದಿದ್ದಾರೆ ಎಂದು ಆಡಳಿತ ಮಂಡಳಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹೇಳಿಕೊಂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 2ನೇ ಪಂದ್ಯದಿಂದ ಈ ಆಟಗಾರ ರೂಲ್ಡೌಟ್!


ಪಾಕಿಸ್ತಾನಿ ಟಿವಿ ನಿರೂಪಕಿ ಝೈನಾಬ್ ಅಬ್ಬಾಸ್ ಈ ಹಿಂದೆ ತನ್ನದೇ ದೇಶದ ಕ್ರಿಕೆಟಿಗ ಮತ್ತು ನಾಯಕ ಬಾಬರ್ ಆಜಮ್ ಬಗ್ಗೆ ಮಾಡಿದ ಟ್ವೀಟ್‌’ನಿಂದ ವಿವಾದಕ್ಕೆ ಒಳಗಾಗಿದ್ದರು. 2018 ರಲ್ಲಿ, ಜೈನಾಬ್ ಅಬ್ಬಾಸ್ ಮಾಡಿದ ಟ್ವೀಟ್‌’ನಿಂದಾಗಿ ಬಾಬರ್ ಆಜಮ್ ಕೋಪಗೊಂಡಿದ್ದರು. 2018 ರಲ್ಲಿ, ಬಾಬರ್ ಅಜಮ್ ನ್ಯೂಜಿಲೆಂಡ್ ವಿರುದ್ಧ ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿದ್ದರು. ಆ ಸಂದರ್ಭದಲ್ಲಿ ಕೋಚ್ ಮಿಕ್ಕಿ ಆರ್ಥರ್ ಅವರ ಮಗ ಬಾಬರ್ ಅಜಮ್ ಎಂದು ಬರೆದು ತಮಾಷೆ ಮಾಡಿದ್ದಾರೆ. ಈ ಬಗ್ಗೆ ಬೇಸರಗೊಂಡ ಬಾಬರ್ ಆಜಮ್ ಸಾಮಾಜಿಕ ಜಾಲತಾಣಗಳಲ್ಲಿ ಜೈನಾಬ್ ಅಬ್ಬಾಸ್ ಅವರನ್ನು ನಿಂದಿಸಲು ಆರಂಭಿಸಿದರು.


ಬಾಬರ್ ಆಜಮ್ ಬಗ್ಗೆ ಟ್ವೀಟ್ ಮಾಡಿದ್ದ ಜೈನಾಬ್ ಅಬ್ಬಾಸ್ ಹೀಗೆ  ಬರೆದಿದ್ದಾರೆ… “ಬಾಬರ್ ಆಜಮ್, ನೀವು ಚೆನ್ನಾಗಿ ಆಡಿದ್ದೀರಿ. ಮಗನ ಶತಕದ ಸಂಭ್ರಮದಲ್ಲಿದ್ದ ಮಿಕ್ಕಿ ಆರ್ಥರ್’ಗೆ ಆಟಗಾರರು ಅಭಿನಂದನೆ ಸಲ್ಲಿಸಿದ್ದು ಕೂಡ ಸಂತಸ ತಂದಿದೆ”.


ಝೈನಾಬ್ ಅಬ್ಬಾಸ್ ಅವರ ಈ ಹೇಳಿಕೆಯ ಬಗ್ಗೆ ಬಾಬರ್ ಅಜಮ್ ಬೇಸರಗೊಂಡು, ”ನೀವು ಏನನ್ನಾದರೂ ಹೇಳುವ ಮೊದಲು ಅದರ ಬಗ್ಗೆ ಯೋಚಿಸಿ ಮತ್ತು ನಿಮ್ಮ ಮಿತಿಗಳನ್ನು ದಾಟಲು ಪ್ರಯತ್ನಿಸಬೇಡಿ” ಎಂದು ತೀಕ್ಷ್ಣವಾಗಿ ಟ್ವೀಟ್ ಮಾಡಿದ್ದರು.


ಇದನ್ನೂ ಓದಿ: ಪಂದ್ಯದ ಮಧ್ಯೆ ನಿಯಮ ಉಲ್ಲಂಘಿಸಿದ ಈ ತಂಡ ವಿಶ್ವಕಪ್ 2023ರಿಂದ ಬ್ಯಾನ್!


ಇನ್ನು ಪಾಕಿಸ್ತಾನ, ಹೈದರಾಬಾದ್‌’ನಲ್ಲಿ ಆಡಿದ ಪಂದ್ಯ ಸೇರಿದಂತೆ ಮೂರು ಪಂದ್ಯಗಳನ್ನು ಕವರ್ ಮಾಡಲು ಜೈನಾಬ್ ಅವರನ್ನು ನಿಯೋಜಿಸಲಾಗಿತ್ತು. ಅಕ್ಟೋಬರ್ 6 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಪಾಕಿಸ್ತಾನದ ಮೊದಲ ವಿಶ್ವಕಪ್ ಪಂದ್ಯದ ವೇಳೆ ಹೈದರಾಬಾದ್‌’ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈಕೆ ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.