ಪಂದ್ಯದ ಮಧ್ಯೆ ನಿಯಮ ಉಲ್ಲಂಘಿಸಿದ ಈ ತಂಡ ವಿಶ್ವಕಪ್ 2023ರಿಂದ ಬ್ಯಾನ್!

South Africa Cricket Team Ban: ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆಯ (World Anti-Doping Agency-WADA) ಡೋಪಿಂಗ್​​ ವಿರೋಧಿ ನಿಯಮಗಳನ್ನು ಅನುಸರಿದ ಹಿನ್ನೆಲೆಯಲ್ಲಿ ದಕ್ಷಿಣ​ ಆಫ್ರಿಕಾ ಕ್ರಿಕೆಟ್ ತಂಡ ಈ ವಿಶ್ವಕಪ್ ಟೂರ್ನಿಯಿಂದ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇದೆ.

Written by - Bhavishya Shetty | Last Updated : Oct 9, 2023, 10:02 PM IST
    • ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆಯ ನಿಯಮ ಅನುಸರಿಸ ಹಿನ್ನೆಲೆ
    • ದಕ್ಷಿಣ ಆಫ್ರಿಕಾ ತಂಡವನ್ನು ನಿಷೇಧಿಸುವ ಸಾಧ್ಯತೆ
    • ಈ ಸಂಬಂಧ ​ವರದಿ ಮಾಡಿದ ಕ್ರಿಕ್​’ಬಜ್
ಪಂದ್ಯದ ಮಧ್ಯೆ ನಿಯಮ ಉಲ್ಲಂಘಿಸಿದ ಈ ತಂಡ ವಿಶ್ವಕಪ್ 2023ರಿಂದ ಬ್ಯಾನ್!  title=
South Africa Cricket

South Africa Cricket Team Ban: ಐಸಿಸಿ ವಿಶ್ವಕಪ್ 2023 ಈಗಾಗಲೇ ಆರಂಭವಾಗಿದೆ. ಪ್ರಪಂಚದಾದ್ಯಂತದ ಅಭಿಮಾನಿಗಳು ಇದಕ್ಕಾಗಿ ಕಾಯುತ್ತಿದ್ದರು. ಆದರೆ ವಿಶ್ವಕಪ್ ಆರಂಭವಾದ ಕೂಡಲೇ ದಕ್ಷಿಣ ಆಫ್ರಿಕಾ ತಂಡಕ್ಕೆ ಸಂಕಷ್ಟ ಎದುರಾಗಿದೆ. ಆಫ್ರಿಕನ್ ತಂಡ ವಾಡಾ ನಿಯಮಗಳನ್ನು ಉಲ್ಲಂಘಿಸಿದೆ ಎಂಬ ಆರೋಪ ಕೇಳಿ ಬರುತ್ತಿದ್ದು, ಇದು ಸಾಬೀತಾದರೆ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ತಂಡ ಹೊರಗುಳಿಯಬೇಕಾಗಬಹುದು.

ಇದನ್ನೂ ಓದಿ: 2ನೇ ಪಂದ್ಯದಿಂದ ಈ ಆಟಗಾರ ರೂಲ್ಡೌಟ್!

ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆಯ (World Anti-Doping Agency-WADA) ಡೋಪಿಂಗ್​​ ವಿರೋಧಿ ನಿಯಮಗಳನ್ನು ಅನುಸರಿದ ಹಿನ್ನೆಲೆಯಲ್ಲಿ ದಕ್ಷಿಣ​ ಆಫ್ರಿಕಾ ಕ್ರಿಕೆಟ್ ತಂಡ ಈ ವಿಶ್ವಕಪ್ ಟೂರ್ನಿಯಿಂದ ನಿಷೇಧಕ್ಕೆ ಒಳಗಾಗುವ ಸಾಧ್ಯತೆ ಇದೆ.

ಈ ಸಂಬಂಧ ಕ್ರಿಕ್​’ಬಜ್​ ವರದಿ ಮಾಡಿದ್ದು, ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆಯ ನಿಯಮ ಅನುಸರಿಸ ಹಿನ್ನೆಲೆಯಲ್ಲಿ ತಂಡವನ್ನು ನಿಷೇಧಿಸುವ ಸಾಧ್ಯತೆಗಳು ಇವೆ. ರಾಷ್ಟ್ರೀಯ ಉದ್ದೀಪನ ಮದ್ದು ವಿರೋಧಿ ಸಂಸ್ಥೆ 2021ರಲ್ಲಿ ಜಾರಿಗೊಳಿಸಿರುವ  ವಾಡಾ ಸಂಹಿತೆಯನ್ನು ಸೌತ್​ ಆಫ್ರಿಕಾ ತಂಡ ಅನುಸರಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:  ದಾಸವಾಳದ ಜೊತೆ ಈ ಕಪ್ಪು ಕಾಳನ್ನು ಅರೆದು ನೆತ್ತಿಗೆ ಹಚ್ಚಿದರೆ ಎಷ್ಟೇ ಬಿಳುಪಾದ ಕೂದಲು ಸಹ ಬುಡದಿಂದಲೇ ಕಪ್ಪಾಗುತ್ತೆ!

ಇನ್ನು ಅಕ್ಟೋಬರ್ 14 ರಂದು ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಈ ಬಳಿಕ ಮುಂದಿನ ನಿರ್ಧಾರ ಎಂಬುದು ತಿಳದುಬರಲಿದೆ. ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಹೊಂದಿದ್ದು, ನಿರ್ಬಂಧ ಮುಂದೂಡುವ ಸಾಧ್ಯತೆಯೂ ಇದೆ. ಈ ಎಲ್ಲದರ ನಡುವೆ ದಕ್ಷಿಣ ಆಫ್ರಿಕಾ ತಂಡವು ತನ್ನ ನಿಷೇಧದ ಮಾಹಿತಿಯನ್ನು ತಳ್ಳಿ ಹಾಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
 

Trending News