Rohit Sharma Records: ನವೆಂಬರ್ 15 ಬುಧವಾರದಂದು ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಭಾರತ ತಂಡ ನಾಲ್ಕನೇ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶಿಸಿದೆ. 2023ರ ವಿಶ್ವಕಪ್‌’ನಲ್ಲಿ ಟೀಮ್ ಇಂಡಿಯಾ ಸತತ 10 ನೇ ಗೆಲುವು ಸಾಧಿಸಿದ್ದು, ನಾಯಕ ರೋಹಿತ್ ಶರ್ಮಾ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಒಂದು ನಿರ್ದಿಷ್ಟ ವಿಷಯದಲ್ಲಿ ಟೀಂ ಇಂಡಿಯಾದ ಅತ್ಯಂತ ಯಶಸ್ವಿ ನಾಯಕರಾದ ಎಂಎಸ್ ಧೋನಿ ಮತ್ತು ಸೌರವ್ ಗಂಗೂಲಿಯವರನ್ನು ಹಿಂದಿಕ್ಕಿದ್ದಾರೆ.  


ಇದನ್ನೂ ಓದಿ: “ನಾನ್’ಸೆನ್ಸ್..ಇದೆಲ್ಲಾ ಮೂರ್ಖತನ”-ಭಾರತ ಫೈನಲ್ ಪ್ರವೇಶಿಸುತ್ತಿದ್ದಂತೆ ಗವಾಸ್ಕರ್ ಹೀಗಂದಿದ್ದೇಕೆ?


ರೋಹಿತ್ ಶರ್ಮಾ ವಿಶ್ವಕಪ್ 2023ರಲ್ಲಿ ಇದುವರೆಗೆ ಒಟ್ಟು 10 ಪಂದ್ಯಗಳನ್ನು ಗೆದ್ದಿದ್ದಾರೆ. ಆದರೆ ಸೌರವ್ ಗಂಗೂಲಿ 2003 ರ ವಿಶ್ವಕಪ್‌’ನಲ್ಲಿ ನಾಯಕರಾಗಿದ್ದಾಗ 9 ಪಂದ್ಯಗಳನ್ನು ಗೆದ್ದಿದ್ದರು. ಎಂಎಸ್ ಧೋನಿ ಅವರ ನಾಯಕತ್ವದಲ್ಲಿ ಭಾರತ 2015ರ ವಿಶ್ವಕಪ್‌’ನಲ್ಲಿ 7 ಪಂದ್ಯಗಳನ್ನು ಗೆದ್ದಿತ್ತು. ಅಂದರೆ ರೋಹಿತ್ ಈಗ ಧೋನಿ ಮತ್ತು ಗಂಗೂಲಿ ಇಬ್ಬರಿಗಿಂತ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ.


ಇದನ್ನೂ ಓದಿ: “ನಾನು ಟೀಂ ಇಂಡಿಯಾದ ಈ ಆಟಗಾರನ ಫ್ಯಾನ್ ಆಗ್ಬಿಟ್ಟೆ”- ಶೋಯೆಬ್ ಅಖ್ತರ್ ಫಿದಾ ಆಗಿದ್ದು ಯಾರಿಗೆ?


ರೋಹಿತ್ ಶರ್ಮಾ ವಿಶ್ವಕಪ್ ಫೈನಲ್ ತಲುಪಿದ ನಾಲ್ಕನೇ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಕಪಿಲ್ ದೇವ್, ಸೌರವ್ ಗಂಗೂಲಿ ಮತ್ತು ಎಂಎಸ್ ಧೋನಿ ಟೀಂ ಇಂಡಿಯಾವನ್ನು ವಿಶ್ವಕಪ್ ಫೈನಲ್‌’ಗೆ ಕೊಂಡೊಯ್ದಿದ್ದರು. ರೋಹಿತ್ ಈಗ ನಾಲ್ಕನೇ ನಾಯಕ ಎನಿಸಿಕೊಂಡಿದ್ದಾರೆ. 1983 ರಲ್ಲಿ ಕಪಿಲ್ ದೇವ್ ಮತ್ತು 2011 ರಲ್ಲಿ ಎಂಎಸ್ ಧೋನಿ ಅವರ ನಾಯಕತ್ವದಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.