ನವದೆಹಲಿ: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಐವತ್ತಕ್ಕೂ ಅಧಿಕ ಸ್ಕೋರ್ ಗಳಿಸಿದ ಬ್ಯಾಟ್ಸಮನ್ ಗಳ ಪಟ್ಟಿಗೆ ಸೇರಿದ್ದಾರೆ.  


COMMERCIAL BREAK
SCROLL TO CONTINUE READING

12 ಬಾರಿ ಐವತ್ತಕ್ಕೂ ಅಧಿಕ ರನ್ ಗಳಿಸಿರುವ ದಾಖಲೆ ನಿರ್ಮಿಸುವ ಮೂಲಕ ಈಗ ಅವರು ವಿರಾಟ್ ಕೊಹ್ಲಿ ಅವರೊಂದಿಗೆ ದಾಖಲೆಯನ್ನು ಹಂಚಿಕೊಂಡಿದ್ದಾರೆ. ಇನ್ನೊಂದೆಡೆಗೆ ಸಚಿನ್ ತೆಂಡೂಲ್ಕರ್ 21 ಸಾರಿ ಗಳಿಸಿ ಅಗ್ರಸ್ತಾನದಲ್ಲಿದ್ದಾರೆ


ಇದನ್ನೂ ಓದಿ-'Friends' ಖ್ಯಾತಿಯ ನಟ ಮ್ಯಾಥ್ಯೂ ಪೆರ್ರಿ ಅನುಮಾನಾಸ್ಪದ ಸಾವು.!


ಭಾನುವಾರ ಲಕ್ನೋದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2023 ರ ವಿಶ್ವಕಪ್ ಪಂದ್ಯದಲ್ಲಿ ಅರ್ಧಶತಕವನ್ನು ದಾಖಲಿಸಿದ ನಂತರ ರೋಹಿತ್ ಈ ಸಾಧನೆ ಮಾಡಿದರು. ಅಷ್ಟೇ ಅಲ್ಲದೆ ರೋಹಿತ್ ತಮ್ಮ 477 ನೇ ಇನ್ನಿಂಗ್ಸ್‌ನಲ್ಲಿ ಈ ಸಾಧನೆಯನ್ನು ಸಾಧಿಸುವ ಮೂಲಕ 18000 ಅಂತರಾಷ್ಟ್ರೀಯ ರನ್‌ಗಳನ್ನು ಪೂರೈಸಿದರು. ಆ ಮೂಲಕ ಅವರು ಈ ಸಾಧನೆ ಮಾಡಿದ ದ ಐದನೇ ಭಾರತೀಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ತೆಂಡೂಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ಕೊಹ್ಲಿ ಪಟ್ಟಿಯಲ್ಲಿರುವ ಇತರ ಆಟಗಾರರಾಗಿದ್ದಾರೆ.


ಇದನ್ನೂ ಓದಿ-ವರುಣ್ ತೇಜ್-ಲಾವಣ್ಯ ಲಗ್ನಪತ್ರಿಕೆ ಬೆಲೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ!


ಮೊದಲ ಇನಿಂಗ್ಸ್‌ನ 21 ನೇ ಓವರ್‌ನಲ್ಲಿ ಆದಿಲ್ ರಶೀದ್ ಅವರ ಎಸೆತದಲ್ಲಿ ಸ್ಲಾಗ್ ಸ್ವೀಪ್ ನಲ್ಲಿ ಬೌಂಡರಿ ಹೊಡೆದ ನಂತರ ಅವರು 18000 ರನ್‌ಗಳನ್ನು ತಲುಪಿದರು. ಇದೀಗ ರೋಹಿತ್ ಟೆಸ್ಟ್‌ನಲ್ಲಿ 3677, ಟಿ20ಯಲ್ಲಿ 3853 ಮತ್ತು ಏಕದಿನದಲ್ಲಿ 10570 ರನ್ ಗಳಿಸಿದ್ದಾರೆ. ಒಟ್ಟಾರೆಯಾಗಿ, ಅವರು 45 ಟನ್ ಮತ್ತು 98 ಅರ್ಧ ಶತಕಗಳನ್ನು ಹೊಂದಿದ್ದಾರೆ. 2023 ರಲ್ಲಿ ಶುಭಮನ್ ಗಿಲ್ ಮತ್ತು ಪಾಥುಮ್ ನಿಸ್ಸಾಂಕ ನಂತರ  ಏಕದಿನ ಪಂದ್ಯಗಳಲ್ಲಿ 1000 ರನ್ ದಾಟಿದ ಮೂರನೇ ಬ್ಯಾಟರ್ ಎನಿಸಿಕೊಂಡರು. ಕ್ಯಾಲೆಂಡರ್ ವರ್ಷದಲ್ಲಿ ರೋಹಿತ್ 1000 ರನ್ ದಾಟಿದ್ದು ಇದು ಐದನೇ ಬಾರಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.