ವರುಣ್ ತೇಜ್-ಲಾವಣ್ಯ ಲಗ್ನಪತ್ರಿಕೆ ಬೆಲೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ!

Varun Tej-Lavanya Tripathi Marriage card: ಮೆಗಾ ಪ್ರಿನ್ಸ್ ವರುಣ್ ತೇಜ್ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದ ನಾಯಕಿ ಲಾವಣ್ಯ ತ್ರಿಪಾಠಿಯನ್ನು ಹಿರಿಯರ ಸಮ್ಮುಖದಲ್ಲಿ ವಿವಾಹವಾಗಲಿದ್ದಾರೆ. ಸದ್ಯ ಇವರಿಬ್ಬರ ಲಕ್ನಪತ್ರಿಕೆ ಕುರಿತಾದ ಮಾಹಿತಿಯೊಂದು ಹೊರಬಿದ್ದದೆ. 

Written by - Savita M B | Last Updated : Oct 29, 2023, 01:20 PM IST
  • ನಾಗಬಾಬು ಪುತ್ರ, ಮೆಗಾ ಪ್ರಿನ್ಸ್ ವರುಣ್ ತೇಜ್ ವಿವಾಹವಾಗಲಿರುವ ವಿಚಾರ ಗೊತ್ತೇ ಇದೆ.
  • ಇದೀಗ ನವೆಂಬರ್ 1 ರಂದು ಇಟಲಿಯಲ್ಲಿ ಸೆಲೆಬ್ರಿಟಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
  • ಸದ್ಯ ಈ ಜೋಡಿಯ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವರುಣ್ ತೇಜ್-ಲಾವಣ್ಯ ಲಗ್ನಪತ್ರಿಕೆ ಬೆಲೆ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್‌ ಆಗೋದು ಗ್ಯಾರಂಟಿ!  title=

Varun Tej-Lavanya Tripathi Marriage: ನಾಗಬಾಬು ಪುತ್ರ, ಮೆಗಾ ಪ್ರಿನ್ಸ್ ವರುಣ್ ತೇಜ್ ವಿವಾಹವಾಗಲಿರುವ ವಿಚಾರ ಗೊತ್ತೇ ಇದೆ. ಅದರ ಭಾಗವಾಗಿ ಜೂನ್ 09 ರಂದು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ನವೆಂಬರ್ 1 ರಂದು ಇಟಲಿಯಲ್ಲಿ ಸೆಲೆಬ್ರಿಟಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಸದ್ಯ ಈ ಜೋಡಿಯ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಳ್ಳಿ ಬಣ್ಣದ ಈ ವೆಡ್ಡಿಂಗ್ ಕಾರ್ಡ್‌ನಲ್ಲಿ ಮೊದಲು ವರುಣ್‌ನ ತಾತ ಮತ್ತು ಅಜ್ಜಿಯ ಹೆಸರನ್ನು ನಮೂದಿಸಲಾಗಿದೆ. ಈ ಹೆಸರುಗಳ ಜೊತೆಗೆ ವರುಣ್ ಪೋಷಕರ ಹೆಸರನ್ನು ಹಾಕಲಾಗಿದೆ. 

ಇದನ್ನೂ ಓದಿ-'Friends' ಖ್ಯಾತಿಯ ನಟ ಮ್ಯಾಥ್ಯೂ ಪೆರ್ರಿ ಅನುಮಾನಾಸ್ಪದ ಸಾವು.!

ಇದೆಲ್ಲವೂ ಸಾಮಾನ್ಯ ಆದರೆ ವರುಣ್ ತೇಜ್ ವೆಡ್ಡಿಂಗ್ ಕಾರ್ಡ್ ಬೆಲೆಯ ಸುದ್ದಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು ಈ ಸೆಲೆಬ್ರಿಟಿ ಜೋಡಿಯ ಮದುವೆ ಕಾರ್ಡ್‌ನ್ನು 6 ಲಕ್ಷ ವೆಚ್ಚದಲ್ಲಿ ವಿನ್ಯಾಸಗೊಳಿಸಲಾಗಿದ್ದು, ಆ ದುಡ್ಡಲ್ಲಿ ಮಧ್ಯಮ ವರ್ಗ ಕುಟುಂಬದ ಒಂದು ಮದುವೆಯಾಗಬಹುದು ಎಂದು ನೆಟ್ಟಿಗರು ಶಾಕ್‌ ಆಗಿದ್ದಾರೆ. 

ಇದೇ ವೇಳೆ ವರುಣ್ ಹಾಗೂ ಭಾವಿ ಪತ್ನಿ ಲಾವಣ್ಯ ಅವರಿಗೆ ಮದುವೆ ಗಿಫ್ಟ್ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆಯ ಸಂದರ್ಭದಲ್ಲಿ ವರುಣ್ ಲಾವಣ್ಯ ತ್ರಿಪಾಠಿಗೆ ಯಾವ ಪತಿಯೂ ನೀಡದ ಉಡುಗೊರೆಯನ್ನು ನೀಡಲಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆಯಾದ ಎರಡ್ಮೂರು ದಿನ ಶೂಟಿಂಗ್‌ನಲ್ಲಿ ಬ್ಯುಸಿಯಾಗುತ್ತಾರೆ. ಆದರೆ ವರುಣ್ ಪತ್ನಿಗಾಗಿ ಒಂದು ತಿಂಗಳ ಕಾಲ ಸಮಯವನ್ನು ಮೀಸಲಿಡಲಿದ್ದಾರೆ ಎನ್ನಲಾಗಿದೆ. 

ಇದನ್ನೂ ಓದಿ-Manvitha Kamath: ಕೊಡೈಕೆನಾಲ್‌ನಲ್ಲಿ ಸಖತ್ ಎಂಜಾಯ್‌ ಮಾಡುತ್ತಿರುವ ಟಗರು ಪುಟ್ಟಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News