World cup 2023 : ವಿಶ್ವಕಪ್ 2023ರಲ್ಲಿ ದಕ್ಷಿಣ ಆಫ್ರಿಕಾವನ್ನು 243 ರನ್‌ಗಳಿಂದ ಸೋಲಿಸುವ ಮೂಲಕ ಟೀಂ ಇಂಡಿಯಾ ಟೂರ್ನಿಯಲ್ಲಿ ತನ್ನ  ಗೆಲುವಿನ ಓಟವನ್ನು ಮುಂದುವರೆಸಿದೆ. ಭಾರತ ನೀಡಿದ 327 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ 83 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯದಲ್ಲಿ ಕೊಹ್ಲಿ 49ನೇ ಏಕದಿನ ಶತಕ ಬಾರಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಕೂಡಾ ಸರಿಗಟ್ಟಿದರು. ಆದರೆ, ಈ ಶತಕದಲ್ಲಿ ನಾಯಕ ರೋಹಿತ್ ಶರ್ಮಾ ಪಾತ್ರ ಬಹಳ ಮುಖ್ಯ ಎನ್ನಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಹುಟ್ಟುಹಬ್ಬದಂದೇ ಸಿಡಿದೆದ್ದ ಕೊಹ್ಲಿ : 
2023ರ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕೊಹ್ಲಿಯ ಅಮೋಘ ಬ್ಯಾಟಿಂಗ್ ನಿಂದಾಗಿ ಭಾರತ ಟೂರ್ನಿಯ ಹಲವು ಪಂದ್ಯಗಳನ್ನು ಗೆದ್ದುಕೊಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಿನ್ನೆ  ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಕೊಹ್ಲಿ 101 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಈ ಶತಕದ ಮೂಲಕ ಕೊಹ್ಲಿ, ಸಚಿನ್ ತೆಂಡೂಲ್ಕರ್ ಅವರ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ. ಸಚಿನ್ ಏಕದಿನದಲ್ಲಿ ಗರಿಷ್ಠ 49 ಶತಕಗಳನ್ನು ಗಳಿಸಿದ್ದಾರೆ. ಆದರೆ, ಇದೀಗ ಕೊಹ್ಲಿ ಕೂಡಾ ಏಕದಿನದಲ್ಲಿ 49 ಶತಕ ಸಿಡಿಸಿದ ಬ್ಯಾಟ್ಸ್‌ಮನ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 


ಇದನ್ನೂ ಓದಿ : ದಾಖಲೆಗಾಗಿ ಕೊಹ್ಲಿ ನಿಧಾನವಾಗಿ ಆಡ್ತಾರಾ? ನಾಯಕ ರೋಹಿತ್ ಶರ್ಮಾ ಹೇಳಿದ್ದೇನು?


ಕೊಹ್ಲಿ ಶತಕದ ಹಿಂದೆ ರೋಹಿತ್ ಪ್ಲಾನ್ : 
ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್ ಜೀವನದ 79 ನೇ ಶತಕ ದಾಖಲಿಸಿದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋ ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುತ್ತಿದ್ದ ಸಮಯದ್ದು. ಈ  ವೀಡಿಯೊದಲ್ಲಿ, ನಾಯಕ ರೋಹಿತ್ ಶರ್ಮಾ ಇಶಾನ್ ಕಿಶನ್‌ ಬಳಿ ಬಹಳ ಗಂಭೀರವಾಗಿ ಮಾತನಾಡುತ್ತಿರುವುದನ್ನು ಗಮನಿಸಬಹುದು. ನಂತರ ಕಿಶನ್ ಓವರ್ ವಿರಾಮದ ಸಮಯದಲ್ಲಿ ಮೈದಾನಕ್ಕೆ ಹೋಗಿ ಬ್ಯಾಟ್ಸ್‌ಮನ್‌ಗಳಿಗೆ ರೋಹಿತ್ ನೀಡಿದ ಸಂದೇಶವನ್ನು ನೀಡಿ ಬಂದಿದ್ದಾರೆ. ರೋಹಿತ್ ಬ್ಯಾಟಿಂಗ್ ಕುರಿತು ಮೈದಾನದಲ್ಲಿರುವ ಕೊಹ್ಲಿ ಮತ್ತು ಅಯ್ಯರ್ ಗೆ ಸಂದೇಶ ರವಾನಿಸಿರುವುದು ಇಲ್ಲಿ ಸ್ಪಷ್ಟ. ಪಂದ್ಯದ ನಂತರ ಅಯ್ಯರ್ ಕೂಡಾ ಇದನ್ನು ಬಹಿರಂಗಪಡಿಸಿದ್ದಾರೆ. 


 


ಪಾಕ್ ವಿರುದ್ಧ ಗೆದ್ದು ‘ಜೈ ಶ್ರೀಹನುಮಾನ್’ ಪೋಸ್ಟ್ ಹಾಕಿದ್ದ ಕೇಶವ್ ಮಹಾರಾಜ್ ಅವರ ಪತ್ನಿ ಭಾರತದ ಖ್ಯಾತ ಡ್ಯಾನ್ಸರ್! ಯಾರು ಗೊತ್ತಾ ಆ ಬ್ಯೂಟಿ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews