World Cup 2023 : ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತದ ಗೆಲುವಿನ ರೂವಾರಿ ಎನಿಸಿಕೊಂಡಿದ್ದಾರೆ ಫಾಸ್ಟ್ ಬೌಲರ್ ಮೊಹಮ್ಮದ್ ಶಮಿ. ತಂಡದ ಗೆಲುವಿನ ಬಳಿಕ ಇಲ್ಲಿಯವರೆಗೆ ತನಗೆ ಪ್ಲೇಯಿಂಗ್ 11ನಲ್ಲಿ ಸ್ಥಾನ ನೀಡದಿರುವ ಬಗ್ಗೆ ಶಮಿ ತನ್ನ ಮನದ ಮಾತನ್ನು ಹೊರ ಹಾಕಿದ್ದಾರೆ. ಪ್ರಸಕ್ತ ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಇದು ಸತತ ಐದನೇ ಗೆಲುವು. ಇಲ್ಲಿವರೆಗೆ ಆಡಿದ ಪಂದ್ಯದಲ್ಲಿ ಶಮಿ ಇದೇ ಮೊದಲ ಬಾರಿಗೆ ಪ್ಲೇಯಿಂಗ್ 11 ರಲ್ಲಿ  ಸ್ಥಾನ ಪಡೆದಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಗಾಯಗೊಂಡಿರುವ ಕಾರಣ, ಮೊಹಮ್ಮದ್ ಶಮಿ ಮತ್ತು ಸೂರ್ಯಕುಮಾರ್ ಯಾದವ್ (ಶಾರ್ದೂಲ್ ಠಾಕೂರ್ ಬದಲಿಗೆ) ತಂಡಕ್ಕೆ ಸೇರ್ಪಡೆಯಾಗಿದ್ದರು. 


COMMERCIAL BREAK
SCROLL TO CONTINUE READING

ಪ್ಲೇಯಿಂಗ್ 11 ನಿಂದ ಹೊರಗಿಟ್ಟಿರುವ ಬಗ್ಗೆ ಮುಕ್ತವಾಗಿ ಮಾತನಾಡಿಡ ಶಮಿ :
ಮೊಹಮ್ಮದ್ ಶಮಿ  ತಮ್ಮ ವೃತ್ತಿಜೀವನದಲ್ಲಿ ಮೂರನೇ ಬಾರಿಗೆ ಐದು ವಿಕೆಟ್‌ಗಳನ್ನು ಕಬಳಿಸಿ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಹೊರಹೊಮ್ಮಿದ್ದಾರೆ. ನ್ಯೂಜಿಲೆಂಡ್ ನೀಡಿದ 273 ರನ್‌ಗಳಿಗೆ ಉತ್ತರವಾಗಿ ಭಾರತ 48 ಓವರ್‌ಗಳಲ್ಲಿ ಆರು ವಿಕೆಟ್‌ ನಷ್ಟಕ್ಕೆ 274 ರನ್ ಗಳಿಸಿ ಜಯ ಸಾಧಿಸಿತು. ಪಂದ್ಯದ ನಂತರ ಮಾತನಾಡಿದ ಮೊಹಮ್ಮದ್ ಶಮಿ, ದೀರ್ಘ ಸಮಯದ ನಂತರ ತಂಡಕ್ಕೆ ಮರಳಿದಾಗ, ಆತ್ಮವಿಶ್ವಾಸವನ್ನು ಗಳಿಸುವ ಅವಶ್ಯಕತೆಯಿದೆ  ಈ ಪಂದ್ಯ ನನಗೆ ಅದನ್ನೇ ಮಾಡಿದೆ' ಎಂದು ಹೇಳಿದ್ದಾರೆ. ಇನ್ನು ತಂಡದಿಂದ ಹೊರಗುಳಿದಿರುವ ಬಗ್ಗೆ ಕೇಳಿದಾಗ, ಉತ್ತರಿಸಿದ ಶಮಿ, ತಂಡದ ಹಿತದೃಷ್ಟಿಗಾಗಿ  ಏನು ಬೇಕಾದರೂ ಮಾಡಲು ಸಿದ್ಧ ಎಂದಿದ್ದಾರೆ.


ಇದನ್ನೂ ಓದಿ : ನ್ಯೂಜಿಲೆಂಡ್ ವಿರುದ್ಧ ಭಾರತ ಗೆದ್ದಿದ್ದು ಈತನಿಂದಲೇ.. ಈ ಆಟಗಾರನೇ ಮ್ಯಾಚ್ ವಿನ್ನರ್ ಎಂದು ಕೊಂಡಾಡಿದ ರೋಹಿತ್ ಶರ್ಮಾ!


ಅಭಿಮಾನಿಗಳ ಹುಬ್ಬೇರಿಸಿದ ಶಮಿ ಹೇಳಿಕೆ : 
ತಂಡವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಂಡದಿಂದ ಹೊರಗೆ ಇರುವುದು ಕಷ್ಟದ ಕೆಲಸವಲ್ಲ. ತಂಡದ ಸದಸ್ಯರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವಾಗ, ಅವರನ್ನು ಬೆಂಬಲಿಸಬೇಕು ಎಂದು ಹೇಳಿದ್ದಾರೆ. ಮೊಹಮ್ಮದ್ ಶಮಿ ಅವರು ಕಬಳಿಸಿರುವ ಐದು ವಿಕೆಟ್‌ ಮತ್ತು ವಿರಾಟ್ ಕೊಹ್ಲಿ ಅವರ ಅದ್ಭುತ ಪ್ರದರ್ಶನ ಭಾನುವಾರ ನಡೆದ ಐಸಿಸಿ ವಿಶ್ವಕಪ್ ಪಂದ್ಯದಲ್ಲಿ ನ್ಯೂಜಿಲೆಂಡ್ ಅನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸುವಲ್ಲಿ ಮಹತ್ವದ ಪಾತ್ರ ವಹಿಸಿತ್ತು. ಈ ಮೂಲಕ ಭಾರತ ತನ್ನ ಸತತ ಐದನೇ ಗೆಲುವನ್ನು ದಾಖಲಿಸಲು ಸಹಾಯ ಮಾಡಿತು. ಈ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳಲ್ಲಿ ಐದು ಗೆಲುವಿನಿಂದ 10 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. ನ್ಯೂಜಿಲೆಂಡ್ ಐದು ಪಂದ್ಯಗಳಲ್ಲಿ ನಾಲ್ಕು ಗೆಲುವಿನಿಂದ ಎಂಟು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.


ಭಾರತವನ್ನು ಗೆಲುವಿನ  ದಡ ಸೇರಿಸಿದ ಕೊಹ್ಲಿ-ಶಮಿ : 
ನ್ಯೂಜಿಲೆಂಡ್ ನೀಡಿದ 274 ರನ್‌ಗಳ ಗುರಿ ಬೆನ್ನತ್ತಿದ ಭಾರತ ವಿಕೆಟ್‌ ಕೊಹ್ಲಿ 95 ರನ್,  ಶ್ರೇಯಸ್ ಅಯ್ಯರ್ 33,  ರಾಹುಲ್ 27, ರವೀಂದ್ರ ಜಡೇಜಾ 39 ರನ್ ಗಳಿಸುವ ಮೂಲಕ ಆರು ವಿಕೆಟ್ ನಷ್ಟಕ್ಕೆ ‌ಗೆ 274 ರನ್ ಗಳಿಸಿ, ಜಯ ದಾಖಲಿಸಿತು. ನಾಯಕ ರೋಹಿತ್ ಶರ್ಮಾ ಕೂಡ 46 ರನ್ ಗಳಿಸುವ ಮೂಲಕ  ಉತ್ತಮ ಇನಿಂಗ್ಸ್ ಆಡಿದರು. ನ್ಯೂಜಿಲೆಂಡ್ ಪರ ಲಾಕಿ ಫರ್ಗುಸನ್ 63 ರನ್ ನೀಡಿ ಎರಡು ವಿಕೆಟ್ ಪಡೆದರು. ಮಿಚೆಲ್ ಸ್ಯಾಂಟ್ನರ್ 37 ರನ್‌ಗಳಿಗೆ ಒಂದು ವಿಕೆಟ್ ಪಡೆದರು, ಆದರೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗಲಿಲ್ಲ.


ಇದನ್ನೂ ಓದಿ : ವಿಶ್ವಕಪ್’ನಲ್ಲಿ ಶ್ರೇಷ್ಠ ದಾಖಲೆ ಬರೆದ ರೋಹಿತ್ ಶರ್ಮಾ! ಇದುವರೆಗೆ ಯಾವೊಬ್ಬ ಕ್ರಿಕೆಟಿಗ ಮಾಡಲಾಗದ ಸಾಧನೆ ಇದು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.