Rohit Sharma body shamed by journalist: ಸ್ಪೋರ್ಟ್ಸ್ ಟಾಕ್ ಸಂಸ್ಥೆಯ ಪತ್ರಕರ್ತನೊಬ್ಬ ರಾಷ್ಟ್ರೀಯ ದೂರದರ್ಶನದಲ್ಲಿ ಭಾರತೀಯ ನಾಯಕ ರೋಹಿತ್ ಶರ್ಮಾ ಅವರನ್ನು ಬಾಡಿ ಶೇಮ್ ಮಾಡಿದ್ದಾರೆ. "ನನಗೆ ಏನು ಹೇಳಬೇಕೆಂದು ತಿಳಿದಿಲ್ಲ, ಆದರೆ ಇವನು ಶೀಘ್ರದಲ್ಲೇ ರೋಹಿತ್ ಶರ್ಮಾ ತರ ಆಗುತ್ತಾನೆ, ಅವನ ಹೊಟ್ಟೆ ಜೋತು ಬೀಳ್ತಾಯಿದೆ " ಎಂದು ಸಹೋದ್ಯೋಗಿಗೆ ತಮಾಷೆ ಮಾಡುತ್ತಾ ವ್ಯಂಗ್ಯವಾಡಿದ್ದಾನೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರೋಹಿತ್ ಶರ್ಮಾರನ್ನು ಕೆಳಗಿಳಿಸಿ 26ರ ಹರೆಯದ ಈ ಆಟಗಾರನಿಗೆ ನಾಯಕತ್ವ ನೀಡಲಿದೆ- ಬಿಸಿಸಿಐ ಅಧಿಕಾರಿ


ಈ ಹೇಳಿಕೆಯನ್ನು ಖಂಡಿಸಿದ ಕ್ರಿಕೆಟ್ ಅಭಿಮಾನಿಗಳು ಮತ್ತು ರೋಹಿತ್ ಫ್ಯಾನ್ಸ್, “ಪ್ರಖ್ಯಾತ ವ್ಯಕ್ತಿಗಳನ್ನು ಟೀಕಿಸುವ ಮುನ್ನ ಯೋಚಿಸಬೇಕು. ಅವಕಾಶವಿದೆ ಎಂದು ಮಾತನಾಡಬಾರದು” ಎಂದು ಮಾತಿನ ಮೂಲಕ ಕಿವಿಹೊಂದಿದ್ದಾರೆ.


ಆದರೆ ಇನ್ನೂ ಕೆಲವರು, “ರೋಹಿತ್ ಶರ್ಮಾ ಪಬ್ಲಿಕ್ ಫಿಗರ್ ಆಗಿದ್ದು, ಅವರು ಟೀಕೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರಬೇಕು” ಎಂದು ವಾದಿಸಿದ್ದಾರೆ.


ಆದರೆ ಪತ್ರಕರ್ತರಿಗೆ ಸಾರ್ವಜನಿಕ ವ್ಯಕ್ತಿಗಳನ್ನು ಟೀಕಿಸುವ ಹಕ್ಕಿದೆ ಎಂಬುದು ನಿಜವಾದರೂ, ನ್ಯಾಯಯುತ ಟೀಕೆ ಮತ್ತು ಬಾಡಿ ಶೇಮಿಂಗ್ ನಡುವೆ ವ್ಯತ್ಯಾಸವಿದೆ. ನ್ಯಾಯೋಚಿತ ಟೀಕೆಯು ವ್ಯಕ್ತಿಯ ಕ್ರಿಯೆಗಳು ಅಥವಾ ಕಾರ್ಯಕ್ಷಮತೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ, ಆದರೆ ದೇಹದ ಬಗ್ಗೆ ಶೇಮಿಂಗ್ ಮಾಡುವುದು, ಆ ವ್ಯಕ್ತಿಯ ದೈಹಿಕ ನೋಟವನ್ನು ಕೇಂದ್ರೀಕರಿಸುತ್ತದೆ.


ಈ ವಿಡಿಯೋದಲ್ಲಿ ಕಾಣಿಸಿರುವಂತೆ, ಪತ್ರಕರ್ತನ ಉದ್ದೇಶಪೂರ್ವಕವಾಗಿ ಬಾಡಿ ಶೇಮಿಂಗ್ ಮಾಡುತ್ತಿದ್ದಾನೆ. ಆತ ಕ್ರಿಕೆಟಿಗನಾಗಿ ರೋಹಿತ್ ಶರ್ಮಾ ಅವರ ಆಟವನ್ನು ಟೀಕಿಸಲಿಲ್ಲ, ಬದಲಿಗೆ ಅವರ ದೈಹಿಕ ನೋಟವನ್ನು ಟೀಕಿಸಿದ್ದಾರೆ. ಇದು ಸ್ವೀಕಾರಾರ್ಹವಲ್ಲ ಎಂಬುದು ಅನೇಕರ ವಾದ.


ಇದನ್ನೂ ಓದಿ: ಅನುಷ್ಕಾ ಶೆಟ್ಟಿ ಮೊದಲು ನಟಿಸಿದ್ದು ತೆಲುಗಿನಲ್ಲಿ ಅಲ್ಲ… ಕನ್ನಡದ ಈ ಧಾರಾವಾಹಿಯಲ್ಲಿ! ಯಾವುದದು ಗೊತ್ತಾ?


ರೋಹಿತ್ ಶರ್ಮಾ ಎಲ್ಲರಂತೆ ಮನುಷ್ಯರು. ಎಲ್ಲರಂತೆಯೇ ಗೌರವ ಮತ್ತು ಘನತೆಗೆ ಅರ್ಹನಾಗಿರುತ್ತಾರೆ. ಪಬ್ಲಿಕ್ ಫಿಗರ್ ಆಗಿದ್ದರೂ ಸಹ ಬಾಡಿ ಶೇಮ್ ಮಾಡುವುದು ಸರಿಯಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ