ಅನುಷ್ಕಾ ಶೆಟ್ಟಿ ಮೊದಲು ನಟಿಸಿದ್ದು ತೆಲುಗಿನಲ್ಲಿ ಅಲ್ಲ… ಕನ್ನಡದ ಈ ಧಾರಾವಾಹಿಯಲ್ಲಿ! ಯಾವುದದು ಗೊತ್ತಾ?

Anushka Shetty Kannada Serial: ದಕ್ಷಿಣ ಭಾರತದ ಸಿನಿರಂಗದಲ್ಲಿ ಖ್ಯಾತಿ ಪಡೆದಿರುವ ಅನುಷ್ಕಾ ಶೆಟ್ಟಿಗೆ ಇಂದು 42ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.

  • Nov 07, 2023, 15:21 PM IST

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ವಿಭಿನ್ನ ನಟನೆಯಿಂದಲೇ ಖ್ಯಾತಿ ಗಳಿಸಿರುವ ಮೇರು ನಟಿ ಅನುಷ್ಕಾ ಕರ್ನಾಟಕದವರೇ. ಇವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ. ಅನೇಕ ಸ್ಟಾರ್ ನಟರ ಜೊತೆ ತೆರೆಹಂಚಿಕೊಂಡಿರುವ ಅನುಷ್ಕಾ ಲೇಡಿ ಸೂಪರ್ ಸ್ಟಾರ್ ಆಗಿ ತೆಲುಗು ಚಿತ್ರರಂಗವನ್ನು ಆಳುತ್ತಿದ್ದಾರೆ. ಐತಿಹಾಸಿಕ, ಪೌರಾಣಿಕ ಸಿನಿಮಾಗಳು ಇವರಿಗೆ ಸಖತ್ ಸೂಟ್ ಆಗುತ್ತವೆ ಎನ್ನುವುದಕ್ಕೆ'ಅರುಂಧತಿ', 'ಭಾಗಮತಿ', 'ಬಾಹುಬಲಿ' ಸಿನಿಮಾಗಳೇ ಸಾಕ್ಷಿ.

2 /7

ಎಷ್ಟೇ ರಿಸ್ಕ್ ಆದರೂ ತಾನು ನಿಭಾಯಿಸುವ ಪಾತ್ರಕ್ಕೆ ನ್ಯಾಯ ಕೊಡಬೇಕು ಎನ್ನುವುದು ಅನುಷ್ಕಾ ಪಾಲಿಸಿ. ಇದಕ್ಕೆ ಉದಾಹರಣೆ ಎಂದರೆ 2015ರಲ್ಲಿ ಬಿಡುಗಡೆಯಾದ ‘ಜೀರೋ ಸೈಜ್’ ಸಿನಿಮಾ. ನೈಸರ್ಗಿಕವಾಗಿ ಕಾಣಬೇಕು ಎಂಬ ಕಾರಣಕ್ಕೆ ತೂಕ ಹೆಚ್ಚಳ ಮಾಡಿಕೊಂಡು ಈ ಸಿನಿಮಾದಲ್ಲಿ ಅಭಿನಯಿಸಿದ್ದರು ಸ್ವೀಟಿ.

3 /7

ಅರುಂಧತಿ ಸಿನಿಮಾದಲ್ಲಿ ಜೇಜಮ್ಮ ಪಾತ್ರಕ್ಕೆ ಜೀವ ತುಂಬಿದ ಅನುಷ್ಕಾ, ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದರು. ಇವರ ನಟನೆ ನೋಡಿ ಅದೆಷ್ಟೋ ಜನ, ಸಿನಿಮಾ ಹೀರೋ ಇಲ್ಲದಿದ್ದರೂ ನಡೆಯುತ್ತೆ ಆದ್ರೆ ಇಂಥಾ ಅಭಿನೇತ್ರಿ ಬೇಕು ಎಂದೆಲ್ಲಾ ಹೇಳಿಕೆ ಕೊಟ್ಟಿದ್ದರು.  

4 /7

ಆದರೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಧಾರಾವಾಹಿಯೊಂದರಲ್ಲಿ ಕೂಡ ನಟಿಸಿದ್ದರು. ಆ ಧಾರಾವಾಹಿ ಯಾವುದು ಎಂದು ನಿಮಗೆ ತಿಳಿದರೆ ಶಾಕ್ ಆಗೋದು ಖಂಡಿತ.

5 /7

ಅನುಷ್ಕಾ ಶೆಟ್ಟಿ ಅವರ ತಂದೆ ಎ ಎನ್‌ ವಿಠ್ಠಲ್ ಶೆಟ್ಟಿ ಇಂಜಿನಿಯರ್ ಆಗಿದ್ದರು. ಇವರ ಕುಟುಂಬ ಬೆಂಗಳೂರಿನಲ್ಲಿಯೇ ಸೆಟಲ್ ಆಗಿತ್ತು. ಅನುಷ್ಕಾಗೆ ಇಬ್ಬರು ಸಹೋದರರಿದ್ದು, ಅವರ ಹೆಸರು ಗುಣರಂಜನ್ ಮತ್ತು ರಮೇಶ್.

6 /7

ಅನುಷ್ಕಾ ಎಂಬಿಎ ಪದವೀಧರೆ. ಇನ್ನು ಅನುಷ್ಕಾ ಮುದ್ದಾಗಿದ್ದ ಕಾರಣ ಒತ್ತಾಯ ಮಾಡಿ ಅವರನ್ನು ಕನ್ನಡದ 'ಬಣ್ಣ' ಧಾರಾವಾಹಿಯಲ್ಲಿ ನಟಿಸುವಂತೆ ಹೇಳಲಾಗಿತ್ತು. ಈ ಸೀರಿಯಲ್‌’ನಲ್ಲಿ ಅವರು ತನಿಖಾಧಿಕಾರಿಯಾಗಿ ಪಾತ್ರ ನಿಭಾಯಿಸಿದ್ದರು.

7 /7

ಕನ್ನಡದಲ್ಲಿ ಅದೆಷ್ಟೋ ಬಾರಿ ಆಡಿಷನ್ ಕೊಟ್ಟರೂ ಕೂಡ ಅವಕಾಶ ಸಿಕ್ಕಿರಲಿಲ್ಲವಂತೆ. ಇದೇ ಕಾರಣ, ಅವರು ಟಾಲಿವುಡ್ ಕಡೆ ಮುಖ ಮಾಡಿದರು ಎಂದು ಕೆಲ ಮೂಲಗಳು ಹೇಳುತ್ತವೆ. ಆದರೆ ಇದೆಷ್ಟು ಸತ್ಯ ಎಂಬುದು ತಿಳಿದಿಲ್ಲ. ಇನ್ನು ಅನುಷ್ಕಾ ತೆಲುಗಿನಲ್ಲಿ ಅಭಿನಿಯಿಸಿದ ಮೊದಲ ಸಿನಿಮಾ 'ಸೂಪರ್'.