Temba Bavuma: ಕೋಲ್ಕತ್ತಾದಲ್ಲಿ ಗುರುವಾರ ನಡೆದ 2023ರ ಏಕದಿನ  ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಐದು ಬಾರಿ ಚಾಂಪಿಯನ್ ಆಸ್ಟ್ರೇಲಿಯಾದ ವಿರುದ್ಧ ದಕ್ಷಿಣ ಆಫ್ರಿಕಾ ಮೂರು  ವಿಕೆಟ್‌ಗಳ ಸೋಲು ಅನುಭವಿಸಿದೆ. ಇದರೊಂದಿಗೆ ಮೊದಲ ಬಾರಿಗೆ ವಿಶ್ವಕಪ್ ಫೈನಲ್ ಪ್ರವೇಶಿಸುವ ದಕ್ಷಿಣ ಆಫ್ರಿಕಾ ತಂಡದ ಕನಸು ಮತ್ತೊಮ್ಮೆ ಭಗ್ನಗೊಂಡಿದೆ. 


COMMERCIAL BREAK
SCROLL TO CONTINUE READING

ನಿನ್ನೆ (ನ.16, ಗುರುವಾರ) ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 49.4 ಓವರ್‌ಗಳಲ್ಲಿ 212 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 47.2 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು ಪಂದ್ಯ ಗೆಲ್ಲುವ ಮೂಲಕ 8ನೇ ಬಾರಿಗೆ ಫೈನಲ್‌ಗೆ ಲಗ್ಗೆ ಇಟ್ಟಿತು. ಇದೀಗ  ಇದೇ ಭಾನುವಾರ (ನವೆಂಬರ್ 19) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಆತಿಥೇಯ ಭಾರತವನ್ನು ಎದುರಿಸಲಿದೆ. 


ಇದನ್ನೂ ಓದಿ- ರೋಹಿತ್ ಶರ್ಮಾಗೆ ಸ್ವಿಂಗ್, ಶುಭ್ಮನ್ ಗಿಲ್ ಗೆ ಇನ್ ಡೀಪರ್.. ಕೊಹ್ಲಿಗೆ ಲೆಫ್ಟ್ ಆರ್ಮ್ ಸ್ಪಿನ್...ಕಿವೀಸ್ ಗೇಮ್ ಪ್ಲಾನ್ ಬಹಿರಂಗ!


ವಿಶ್ವಕಪ್ ಸೆಮಿಫೈನಲ್‌ನಲ್ಲಿ ಸೋಲುಂಡ ಬಳಿಕ ಭಾವುಕರಾದ ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ತೆಂಬಾ ಬಾವುಮಾ, ಕಣ್ಣಂಚಲ್ಲಿ ನೀರು ತುಂಬಿತ್ತು. ಏಕದಿನ ವಿಶ್ವಕಪ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ಐದನೇ ಬಾರಿಗೆ ಸೆಮಿಫೈನಲ್‌ನಲ್ಲಿ ಸೋಲು ಕಂಡಿದೆ.  ಈ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಈ ಸೆಮೀಸ್ ಸೋಲನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ ಎಂದಿದ್ದಾರೆ. 


ಚೊಚ್ಚಲ ಬಾರಿಗೆ ಏಕದಿನ ವಿಶ್ವಕಪ್ ಫೈನಲ್ ಆಡುವ ಭರವಸೆಯೊಂದಿಗೆ ಸೆಮಿಫೈನಲ್‌ನಲ್ಲಿ ಪ್ರದರ್ಶನ ನೀಡಿದ್ದ ದಕ್ಷಿಣ ಆಫ್ರಿಕಾ ಕನಸು ಮತ್ತೆ ಚೂರು ಚೂರಾಗಿದೆ. ಈ ಕುರಿತಂತೆ ಭಾವುಕರಾಗಿ ಮಾತನಾಡಿದ ದಕ್ಷಿಣ ಆಫ್ರಿಕಾ ತಂಡದ ಕ್ಯಾಪ್ಟನ್ ತೆಂಬಾ ಬಾವುಮಾ, "ಈ ಸೋಲನ್ನು ಪದಗಳಲ್ಲಿ ವಿವರಿಸುವುದು ಕಷ್ಟ. ಆಸ್ಟ್ರೇಲಿಯಾ 8ನೇ ಬಾರಿ ವಿಶ್ವಕಪ್ ಫೈನಲ್ ತಲುಪಿದೆ. ಆ ತಂಡಕ್ಕೆ ಆಲ್ ದಿ ಬೆಸ್ಟ್. ಆಸೀಸ್ ತಂಡ ಮೊದಲಿನಿಂದಲೂ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಅವರು ಸಂಪೂರ್ಣವಾಗಿ ಗೆಲುವಿಗೆ ಅರ್ಹರಾಗಿದ್ದರು. ಫಲಿತಾಂಶವನ್ನು ನೋಡುವಾಗ, ನಾವು ಬ್ಯಾಟ್ ಮತ್ತು ಚೆಂಡಿನೊಂದಿಗೆ ಪ್ರಾರಂಭಿಸಿದ ರೀತಿ ಬಹುಶಃ ಟರ್ನಿಂಗ್ ಪಾಯಿಂಟ್ ಎಂದು ನಾನು ಭಾವಿಸುತ್ತೇನೆ. ಇದೀಗ ಸೆಮಿಫೈನಲ್‌ನಲ್ಲಿ ಕೆಟ್ಟದಾಗಿ ಸೋತಿದ್ದೇವೆ" ಎಂದರು.


ಇದನ್ನೂ ಓದಿ- ಆಸೀಸ್ ವಿರುದ್ಧ ಸೋತು ವಿಶ್ವಕಪ್’ನಿಂದ ಹೊರಬಿದ್ದ ದ.ಆಫ್ರಿಕಾಗೆ ಸಿಕ್ಕ ಹಣ ಎಷ್ಟು ಕೋಟಿ ಗೊತ್ತಾ? ತಿಳಿದರೆ ಶಾಕ್ ಆಗೋದು ಗ್ಯಾರಂಟಿ


ಈ ಕುರಿತಂತೆ ಮಾತು ಮುಂದುವರೆಸಿದ ದ.ಆಫ್ರಿಕಾ ಕ್ಯಾಪ್ಟನ್ ತೆಂಬಾ ಬಾವುಮಾ, "ಇಂದಿನ ಪರಿಸ್ಥಿತಿ, ಎದುರಾಳಿ ತಂಡದ ಅತ್ಯುತ್ತಮ ದಾಳಿ ನಮ್ಮ ಅಗ್ರ ಕ್ರಮಾಂಕವನ್ನು ಚದುರಿಸಿತು. ಇದರೊಂದಿಗೆ ವಿರೋಧಿ ತಂಡವು ನಮ್ಮನ್ನು ಸಂಪೂರ್ಣ ಒತ್ತಡಕ್ಕೆ ಒಳಪಡಿಸಿತು. ಕ್ಲಾಸೆನ್ ಔಟ್ ಆಗುವ ಮೊದಲು ನಾವು ವೇಗವನ್ನು ಪಡೆಯುತ್ತಿದ್ದೆವು ಮತ್ತು ಕೊನೆಯ ಓವರ್‌ಗಳಲ್ಲಿ ಅವರು ಎಷ್ಟು ಅಪಾಯಕಾರಿ ಎಂದು ಸಾಬೀತಾಯಿತು ಎಂದವರು ತಿಳಿಸಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.