“ಈತನ ಬ್ಯಾಟಿಂಗ್ ತಂತ್ರದಲ್ಲಿದೆ ಭಾರತದ ಸತತ ಯಶಸ್ಸಿನ ರಹಸ್ಯ”- ಟೀಂ ಇಂಡಿಯಾದ ಕೋಚ್ ಹೇಳಿಕೆ

Virat Kohli Batting Form: ಬುಧವಾರ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್‌’ನ ಮೊದಲ ಸೆಮಿಫೈನಲ್‌’ನಲ್ಲಿ ವಿರಾಟ್ ಕೊಹ್ಲಿ ಏಕದಿನದಲ್ಲಿ ತಮ್ಮ 50 ನೇ ಶತಕವನ್ನು ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

Written by - Bhavishya Shetty | Last Updated : Nov 16, 2023, 10:21 PM IST
    • ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್
    • ವಿರಾಟ್ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಕೋಚ್
    • ಸಚಿನ್ ತೆಂಡೂಲ್ಕರ್ ದಾಖಲೆ ಮುರಿದಿದ್ದ ವಿರಾಟ್ ಕೊಹ್ಲಿ
“ಈತನ ಬ್ಯಾಟಿಂಗ್ ತಂತ್ರದಲ್ಲಿದೆ ಭಾರತದ ಸತತ ಯಶಸ್ಸಿನ ರಹಸ್ಯ”- ಟೀಂ ಇಂಡಿಯಾದ ಕೋಚ್ ಹೇಳಿಕೆ title=
Vikram Rathore

Virat Kohli Batting Form: ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರು, ಬ್ಯಾಟ್ಸ್‌’ಮನ್ ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ್ದಾರೆ. “ವಿರಾಟ್ ಕೊಹ್ಲಿ ಬಗ್ಗೆ ಹೆಚ್ಚು ಗಮನ ಹರಿಸುವ ಅಗತ್ಯವಿಲ್ಲ” ಬ್ಯಾಟಿಂಗ್ ಕೋಚ್ ಹೇಳಿದ್ದಾರೆ.

ಬುಧವಾರ ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್‌’ನ ಮೊದಲ ಸೆಮಿಫೈನಲ್‌’ನಲ್ಲಿ ವಿರಾಟ್ ಕೊಹ್ಲಿ ಏಕದಿನದಲ್ಲಿ ತಮ್ಮ 50 ನೇ ಶತಕವನ್ನು ಗಳಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾದ ಸ್ಟಾರ್ ಆಟಗಾರನ ಪತ್ನಿ ದೇಶದ ಪ್ರಖ್ಯಾತ ಪಕ್ಷದ ಶಾಸಕಿ! ಕೋಟಿ ಆಸ್ತಿಯ ಒಡತಿ ಈಕೆ ಯಾರೆಂದು ಗುರುತಿಸಬಲ್ಲಿರೇ?

ಟೀಂ ಇಂಡಿಯಾದ ಬ್ಯಾಟಿಂಗ್ ಕೋಚ್ ಮಾತನಾಡಿ, “ಕೊಹ್ಲಿ, ಕ್ರಿಕೆಟ್ ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ನಾವು ಅವರ ತಯಾರಿಯಲ್ಲಿ ಮಾತ್ರ ಅವರಿಗೆ ಸಹಾಯ ಮಾಡುತ್ತೇವೆ. ಅವರಿಗೇನಾದರೂ ಬೇಕಾದರೆ ಬಂದು ಕೇಳುತ್ತಾರೆ, ಇಲ್ಲವಾದರೆ ಅವರದೇ ರೀತಿಯಲ್ಲಿ ತಯಾರಿ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಡುತ್ತೇವೆ. ಏನು ಮಾಡಬೇಕೆಂದು ಅವರಿಗೆ ತಿಳಿದಿದೆ. ಅವರು ತನಗೆ ಬೇಕಾದ ರೀತಿಯಲ್ಲಿ ಬ್ಯಾಟ್ ಮಾಡುತ್ತಾರೆ” ಎಂದು ಹೇಳಿದ್ದಾರೆ.

“ಸೆಮಿಫೈನಲ್‌’ನಲ್ಲಿ ಗೆದ್ದು ಫೈನಲ್‌’ಗೆ ಪ್ರವೇಶಿಸುವುದು ಅತ್ಯಂತ ಮುಖ್ಯವಾದ ವಿಷಯ. ಖಂಡಿತವಾಗಿಯೂ ವಿರಾಟ್ ಕೊಹ್ಲಿ ಅವರ 50ನೇ ಶತಕ ವಿಶೇಷ. ಅವರು ತಮ್ಮ ಕ್ರಿಕೆಟ್ ಮತ್ತು ಫಿಟ್‌ನೆಸ್‌ ಬಗ್ಗೆ ಸಾಕಷ್ಟು ಸಮಯ ನೀಡುತ್ತಾರೆ. ಇನ್ನೂ ಅವರಿಗೆ ರನ್ ಗಳಿಸಬೇಕೆಂಬ ತವಕವಿದೆ. ಈತ ತನ್ನ ತಂತ್ರವನ್ನು ಉತ್ತಮವಾಗಿ ಕಾರ್ಯಗತಗೊಳಿಸುವುದೇ ಭಾರತದ ಯಶಸ್ಸಿನ ರಹಸ್ಯ” ಎಂದು ಹೇಳಿದ್ದಾರೆ.

“ಎಲ್ಲರೂ ಶ್ರಮಿಸುತ್ತಿದ್ದಾರೆ ಮತ್ತು ಈ ಪಂದ್ಯಾವಳಿಗಾಗಿ ಉತ್ತಮ ತಯಾರಿ ನಡೆಸುತ್ತಿದ್ದಾರೆ. ಪ್ರತಿಯೊಬ್ಬರೂ ಕಾರ್ಯತಂತ್ರವನ್ನು ಉತ್ತಮವಾಗಿ ಕಾರ್ಯಗತಗೊಳಿಸುವುದನ್ನು ನೋಡುವುದು ಖುಷಿ. ಸಂದರ್ಭಕ್ಕೆ ಸರಿಯಾಗಿ ಹೊಂದಿಕೊಂಡಿದ್ದೇವೆ. ಸಾಕಷ್ಟು ಪಂದ್ಯಗಳನ್ನು ಪಡೆಯದಿದ್ದರೂ ಮೊಹಮ್ಮದ್ ಶಮಿ ಮತ್ತು ರವಿಚಂದ್ರನ್ ಅಶ್ವಿನ್ ಅವರಂತಹ ಆಟಗಾರರನ್ನು ಸರಿಯಾದ ಮನಸ್ಥಿತಿಯಲ್ಲಿ ಇರಿಸಿದ್ದಕ್ಕಾಗಿ ತಂಡದ ಮ್ಯಾನೇಜ್‌ಮೆಂಟ್‌’ಗೆ ಅದರ ಕ್ರೆಡಿಟ್ ಸಲ್ಲುತ್ತದೆ” ಎಂದಿದ್ದಾರೆ.

ಇದನ್ನೂ ಓದಿ: ‘ರೋಹಿತ್ ಟಾಸ್ ಆಯ್ಕೆ ಬಗ್ಗೆ ಡೌಟ್ ಇದೆ’- ಟೀಂ ಇಂಡಿಯಾ ನಾಯಕನ ಬಗ್ಗೆ ಆರೋಪ ಮಾಡಿದ ಪಾಕ್ ಆಟಗಾರ

“ಶಮಿ ವಿಶೇಷ ಬೌಲರ್. ನಿಜವಾಗಿಯೂ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ನಾವು ಬಯಸಿದ ರೀತಿಯ ಸಂಯೋಜನೆಯಲ್ಲಿ ಅವರನ್ನು ತಂಡಕ್ಕೆ ಸೇರಿಸುವುದು ಕಷ್ಟಕರವಾಗಿತ್ತು. ಅದೇ ಕಾರಣಕ್ಕೆ ಅವರು ಮೊದಲ ಕೆಲವು ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಆಡದೇ ಇದ್ದಾಗಲೂ ಚೆನ್ನಾಗಿ ಮೂಡಿ ಬಂದದ್ದು ಆಡಳಿತ ಮಂಡಳಿಯ ಹೆಗ್ಗಳಿಕೆ” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News