World Cup 2023 : ಈ ಬಾರಿಯ ವಿಶ್ವಕಪ್ ಪಯಣದಲ್ಲಿ ಇಲ್ಲಿಯವರೆಗಿನ ಪ್ರದರ್ಶನ ಗಮನಿಸಿದರೆ ಟೀಂ ಇಂಡಿಯಾ ಅದ್ಭುತ ಸಾಧನೆ ಮಾಡಿದೆ. ಇಲ್ಲಿಯವರೆಗೆ ನಡೆದ ಎಲ್ಲಾ ಪಂದ್ಯಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಸೆಮಿ ಫೈನಲ್ ಕದ ತಟ್ಟಿದೆ. ಈ ಬಾರಿಯ ವಿಶ್ವಕಪ್ ಗೆಲ್ಲುವ ಫೆವರಿಟ್ ತಂಡಗಳ ಪೈಕಿ ಭಾರತದ ಹೆಸರು ಮುಂಚೂಣಿಯಲ್ಲಿದೆ. ಇದೀಗ ಭಾರತದ ಪ್ರದರ್ಶನ ಕಂಡು ಉಳಿದ ತಂಡದ ಆಟಗಾರರು ಭಯ ಪಟ್ಟಿರುವುದು ಸುಳ್ಳಲ್ಲ.


COMMERCIAL BREAK
SCROLL TO CONTINUE READING

 "ಭಾರತವನ್ನು ಸೋಲಿಸುವುದು ಕಷ್ಟ" : 
ಇನ್ನು ಭಾರತ ಮತ್ತು ದಕ್ಷಿಣ ಆಫ್ರಿಕಾವನ್ನು ಸೋಲಿಸುವುದು ಬಹಳ ಕಷ್ಟ ಎನ್ನುವ ಸತ್ಯವನ್ನು ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್  ಕೂಡಾ ಅವರು ಒಪ್ಪಿಕೊಂಡಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿಫೈನಲ್‌ ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿವೆ. ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್ ತಲುಪಿದ ಮೂರನೇ ತಂಡ ಎನಿಸಿಕೊಳ್ಳಲು ಆಸ್ಟ್ರೇಲಿಯಾ ಮುಂದಾಗಿದೆ. 


ಇದನ್ನೂ ಓದಿ : ವಿಶ್ವಕಪ್‌ನಲ್ಲಿ ಭಾರತದ ಜೊತೆ ಫೈನಲ್‌ ತಲುಪಲಿದೆ ಈ ತಂಡ.. 2011ರ ಐತಿಹಾಸಿಕ ಕ್ಷಣ ಮರಳುತ್ತಾ? ಪಾಕ್‌ ದಿಗ್ಗಜನ ಭವಿಷ್ಯ!


ಕಾಂಗರೂ ತಂಡಕ್ಕೆ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಜತೆ ಸೆಣಸಾಡುವ ಭೀತಿ  :
ಸೆಮಿಫೈನಲ್ ತಲುಪಬೇಕಾದರೆ ಆಸ್ಟ್ರೇಲಿಯಾ ಖಂಡಿತವಾಗಿಯೂ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಸೆಮಿ ಫೈನಲ್ ತಲುಪುವುದು ಸಾಧ್ಯವಾದರೆ  ಸಂತಸವಾಗುತ್ತದೆ ಎಂದು ಸ್ಟೀವ್ ಸ್ಮಿತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ನಾವು ಉತ್ತಮ ಆರಂಭವನ್ನು ಹೊಂದಿಲ್ಲ. ಮೊದಲ ಪಂದ್ಯಗಳಲ್ಲಿ ಸೋತಿದ್ದೇವೆ. ಆದರೆ ನಂತರ ಉತ್ತಮ ಪ್ರದರ್ಶನ ನಿದಿದ್ದೇವೆ. ಕೆಲ ಫೀಲ್ಡ್ ಗಳಲ್ಲಿ ಇನ್ನೂ ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ ಎಂದು  ಅವರು ಹೇಳಿದ್ದಾರೆ. 


ಭಾರತವನ್ನು ಅತ್ಯಂತ ಅಪಾಯಕಾರಿ ತಂಡ ಎಂದು ಕರೆದ ಸ್ಟೀವ್ ಸ್ಮಿತ್  : 
ಟೂರ್ನಮೆಂಟ್‌ನ ಎರಡನೇ ಅತ್ಯುತ್ತಮ ತಂಡವಾದ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ದೊಡ್ಡ ಗೆಲುವು ಆಸ್ಟ್ರೇಲಿಯಾದ ಮುಂದಿರುವ ಸವಾಲನ್ನು ಇನ್ನಷ್ಟು ಕಠಿಣಗೊಳಿಸಿದೆ ಎಂದು ಸ್ಮಿತ್ ಹೇಳಿದ್ದಾರೆ. ನಾಳಿನ ಪಂದ್ಯದಲ್ಲಿ   ಗೆದ್ದರೆ ನಮ್ಮ ಪಯಣ ಮುಂದುವರೆಯುತ್ತದೆ. ನಾವು ಈ ವಿಶ್ವಕಪ್ ನಲ್ಲಿ ಮುಂದೆ ಸಾಗುತ್ತೇವೆ ಎನ್ನುವ ಭರವಸೆ ಇದೆ ಎಂದಿದ್ದಾರೆ. ಇದೀಗ ಅಗ್ರಸ್ಥಾನದಲ್ಲಿರುವ ಎರಡೂ ತಂಡಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಅದರಲ್ಲೂ ಭಾರತ ಎರಡನೇ ಶ್ರೇಯಾಂಕಿತ ದಕ್ಷಿಣ ಆಫ್ರಿಕಾ ತಂಡವನ್ನು ಸುಲಭವಾಗಿ ಸೋಲಿಸಿದೆ. ನಮಗೆ ಭಾರತವನ್ನು  ಸೋಲಿಸಲು ಕಷ್ಟವಾಗುತ್ತದೆ ಎಂದಿದ್ದಾರೆ. ಆದರೆ ನಾವು ಕೂಡಾ ನಮ್ಮ ಪ್ರಯತ್ನದಲ್ಲಿ  ಮುಂದುವರೆಯುತ್ತೇವೆ.  ನಮಗಾಗಿ ಅವಕಾಶವನ್ನು ಸೃಷ್ಟಿಸಿಕೊಳ್ಳುತ್ತೇವೆ ಎಂದಿದ್ದಾರೆ. 


ಇದನ್ನೂ ಓದಿ : “ಈತನೇ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್”- ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಹೊಗಳಿದ್ದು ಯಾರನ್ನು ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.