“ಈತನೇ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್”- ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಹೊಗಳಿದ್ದು ಯಾರನ್ನು ಗೊತ್ತಾ?

ricky ponting statement about virat kohli: ಅಂದಹಾಗೆ ರಿಕಿ ಪಾಂಟಿಂಗ್ ಅವರು ಭಾರತದ ಬೌಲರ್‌’ಗಳ ಪ್ರದರ್ಶನದಿಂದ ಪ್ರಭಾವಿತರಾಗಿದ್ದಾರೆ. “ದಕ್ಷಿಣ ಆಫ್ರಿಕಾವನ್ನು ಕೇವಲ 83 ರನ್‌’ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾದ ಬೌಲಿಂಗ್ ವಿಭಾಗ ವಿಶ್ವದಲ್ಲೇ ಅತ್ಯುತ್ತಮವಾಗಿದೆ” ಎಂದು ಅವರು ಹೇಳಿದರು.

Written by - Bhavishya Shetty | Last Updated : Nov 7, 2023, 12:33 AM IST
    • ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್
    • ವಿರಾಟ್ ಮತ್ತು ಭಾರತಕ್ಕೆ ತುಂಬಾ ಒಳ್ಳೆಯ ದಿನ
    • ಐಸಿಸಿ ವೆಬ್‌’ಸೈಟ್‌ ಜೊತೆ ಮಾತನಾಡಿದ ರಿಕಿ ಪಾಂಟಿಂಗ್ ಹೇಳಿಕೆ
“ಈತನೇ ವಿಶ್ವದ ಅತ್ಯುತ್ತಮ ಬ್ಯಾಟ್ಸ್ಮನ್”- ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್ ಹೊಗಳಿದ್ದು ಯಾರನ್ನು ಗೊತ್ತಾ? title=
ricky ponting

World Cup 2023: ವಿರಾಟ್ ಕೊಹ್ಲಿ ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಅಂದು ವಿರಾಟ್ ಮೆನೇಜರ್ ಆಗಿದ್ದ ಈ ಬಾಲಕಿ ಇಂದು ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಪತ್ನಿ-5 ಮಿಲಿಯನ್ ಆಸ್ತಿಯ ಒಡತಿ! ಯಾರೆಂದು ಗೊತ್ತಾಯ್ತ?

ವಿರಾಟ್ ಕೊಹ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ತಮ್ಮ 35 ನೇ ಹುಟ್ಟುಹಬ್ಬದಂದು ಅಜೇಯ 101 ರನ್ ಗಳಿಸುವ ಮೂಲಕ ತೆಂಡೂಲ್ಕರ್ ಅವರ ಏಕದಿನದಲ್ಲಿ 49 ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಶತಕದ ಮೂಲಕ ಅವರು ಈಗಿನ ಕಾಲದ ಅತ್ಯುತ್ತಮ ಆಟಗಾರರಲ್ಲೊಬ್ಬರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

ಐಸಿಸಿ ವೆಬ್‌’ಸೈಟ್‌ ಜೊತೆ ಮಾತನಾಡಿದ ರಿಕಿ ಪಾಂಟಿಂಗ್, ”ಕೊಹ್ಲಿ ವಿಶ್ವದ ಅತ್ಯುತ್ತಮ ಆಟಗಾರ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ನಾನು ಇದನ್ನು ಬಹಳ ಸಮಯದಿಂದ ಹೇಳುತ್ತಿದ್ದೇನೆ. ಇದಕ್ಕಾಗಿ ಅವರು ಸಚಿನ್ ದಾಖಲೆಯನ್ನು ಸರಿಗಟ್ಟುವ ಮತ್ತು ಮುರಿಯುವ ಅಗತ್ಯವಿಲ್ಲ. ಇನ್ನು ಟೀಂ ಇಂಡಿಯಾದ ಬೌಲಿಂಗ್ ಇಡೀ ವಿಶ್ವದಲ್ಲೇ ಬಲಿಷ್ಟವಾಗಿದೆ” ಎಂದು ಹೇಳಿದರು,

“ಏಕದಿನದಲ್ಲಿ 49ನೇ ಶತಕ ಬಾರಿಸುವ ಮೂಲಕ ಸಚಿನ್ ಅವರ ದಾಖಲೆಯನ್ನು ವಿರಾಟ್ ಸರಿಗಟ್ಟಿದ್ದಾರೆ. ಈ ಸಾಧನೆ ಮಾಡಲು ಅವರು ಸಚಿನ್ ಅವರಿಗಿಂತ 175 ಇನ್ನಿಂಗ್ಸ್‌’ಗಳನ್ನು ಕಡಿಮೆ ಆಡಿದ್ದಾರೆ ಎಂದು ಭಾವಿಸುವುದು ನಂಬಲಾಗದ ಸಂಗತಿಯಾಗಿದೆ” ಎಂದು ರಿಕಿ ಪಾಂಟಿಂಗ್ ಹೇಳಿದರು.

ವಿರಾಟ್ ಮತ್ತು ಭಾರತಕ್ಕೆ ತುಂಬಾ ಒಳ್ಳೆಯ ದಿನ:

“49ನೇ ಶತಕ ಮನಸ್ಸಿನಲ್ಲಿ ಉಳಿದುಕೊಳ್ಳುವಂತಹದ್ದು, ಸಚಿನ್ ದಾಖಲೆ ಸರಿಗಟ್ಟಲು ಅವರು ಹೆಚ್ಚು ಶ್ರಮಿಸಿದ್ದಾರೆ ಎಂದು ನಾನು ನಂಬುತ್ತೇನೆ. ಈಗ ಅವರು ಈ ದಾಖಲೆಯನ್ನು ಸರಿಗಟ್ಟಿದ್ದಾರೆ ಮತ್ತು ಇದು ಪಂದ್ಯಾವಳಿಯಲ್ಲಿ ಸರಿಯಾದ ಸಮಯದಲ್ಲಿ ಸಂಭವಿಸಿದೆ. ವಿರಾಟ್ ಮತ್ತು ಭಾರತಕ್ಕೆ ಇದು ತುಂಬಾ ಒಳ್ಳೆಯ ದಿನವಾಗಿತ್ತು” ಎಂದಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಅಂದರೆ 5 ಸಲ ಟ್ರೋಫಿ ಗೆದ್ದಿದ್ದು ಕೇವಲ ಒಂದೇ ತಂಡ: ಯಾವುದದು ಗೊತ್ತಾ?

ಅಂದಹಾಗೆ ರಿಕಿ ಪಾಂಟಿಂಗ್ ಅವರು ಭಾರತದ ಬೌಲರ್‌’ಗಳ ಪ್ರದರ್ಶನದಿಂದ ಪ್ರಭಾವಿತರಾಗಿದ್ದಾರೆ. “ದಕ್ಷಿಣ ಆಫ್ರಿಕಾವನ್ನು ಕೇವಲ 83 ರನ್‌’ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾದ ಬೌಲಿಂಗ್ ವಿಭಾಗ ವಿಶ್ವದಲ್ಲೇ ಅತ್ಯುತ್ತಮವಾಗಿದೆ” ಎಂದು ಅವರು ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News