ICC ODI World Cup 2023: ನವೆಂಬರ್ 19ರ ಭಾನುವಾರದಂದು ಅಹಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಿಶ್ವಕಪ್ 2023ರ ಫೈನಲ್ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ ಶ್ರೇಷ್ಠ ಸಾಧನೆಯೊಂದನ್ನು ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟೂರ್ನಿಯುದ್ದಕ್ಕೂ ಮಿಂಚಿದ್ದ ಟೀಂ ಇಂಡಿಯಾ ಫೈನಲ್’ನಲ್ಲಿ ಸೋಲಲು ಕಾರಣವಾಗಿದ್ದು ಇವರು… ಈ ಅಂಶಗಳು!


ಎರಡು ಬಾರಿ (2019, 2023) ODI ವಿಶ್ವಕಪ್‌’ನಲ್ಲಿ 50 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್‌’ಗಳನ್ನು 5 ಸಲ ಕಲೆ ಹಾಕಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ 56 ಎಸೆತಗಳಲ್ಲಿ ಈ ಪಂದ್ಯಾವಳಿಯಲ್ಲಿ ಅರ್ಧಶತಕ ಪೂರೈಸಿದರೆ, 2019ರ ಏಕದಿನ ವಿಶ್ವಕಪ್‌’ನಲ್ಲಿ ಕೂಡ 50 ಪ್ಲಸ್ ಸ್ಕೋರ್‌’ಗಳನ್ನು 5 ಬಾರಿ ಗಳಿಸಿದ್ದರು.


2019 ರಲ್ಲಿ, ಅವರು ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದರು. 2015 ರಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ವಿರಾಟ್’ಗಿಂತ ಮುಂಚಿತವಾಗಿ ಈ ಸಾಧನೆ ಮಾಡಿದ್ದರು. ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಐದನೇ ಬಾರಿಗೆ ಮೆಗಾ ಈವೆಂಟ್ ಅನ್ನು ಗೆದ್ದುಕೊಂಡಿತ್ತು.


ವಿರಾಟ್ ಕೊಹ್ಲಿ ದಾಖಲೆ:


2019 ರ ವಿಶ್ವಕಪ್ ನಂತರ, ವಿರಾಟ್ ಕೊಹ್ಲಿ 2023ರ ಏಕದಿನ ವಿಶ್ವಕಪ್‌’ನಲ್ಲಿ 50 ಪ್ಲಸ್ 5 ಬಾರಿ ಗಳಿಸಿದರು. ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. 2023ರ ವಿಶ್ವಕಪ್‌’ನ 11 ಪಂದ್ಯಗಳಲ್ಲಿ ಕೊಹ್ಲಿ 108.71 ಸರಾಸರಿಯಲ್ಲಿ 761 ರನ್ ಗಳಿಸಿದ್ದಲ್ಲದೆ, ಮೂರು ಶತಕಗಳು ಮತ್ತು ಆರು ಅರ್ಧ ಶತಕಗಳೊಂದಿಗೆ 90.59 ಸ್ಟ್ರೈಕ್ ರೇಟ್‌ ಹೊಂದಿದ್ದಾರೆ.


ಮೊಹಮ್ಮದ್ ಶಮಿ ವಿಶ್ವದಾಖಲೆ:


ಟೂರ್ನಿಯ ಮೊದಲಾರ್ಧದಲ್ಲಿ ಹೊರಗುಳಿದಿದ್ದ ಶಮಿ, ನ್ಯೂಜಿಲೆಂಡ್ ವಿರುದ್ಧದ ಭಾರತದ ಐದನೇ ಲೀಗ್ ಹಂತದ ಪಂದ್ಯದಲ್ಲಿ ತಂಡಕ್ಕೆ ಎಂಟ್ರಿ ಪಡೆದಿದ್ದರು, ಒಟ್ಟು ಆಡಿರುವ ಏಳು ಪಂದ್ಯಗಳಲ್ಲಿ ಶಮಿ 10.70 ರ ಸರಾಸರಿಯಲ್ಲಿ 24 ವಿಕೆಟ್‌’ಗಳನ್ನು ಮತ್ತು 12.20 ಸ್ಟ್ರೈಕ್ ರೇಟ್‌ನೊಂದಿಗೆ 7/57 ರ ಅತ್ಯುತ್ತಮ ಅಂಕಿಅಂಶಗಳೊಂದಿಗೆ ವಿಶ್ವಕಪ್ ಇತಿಹಾಸದಲ್ಲಿ ಶ್ರೇಷ್ಠರಾಗಿ ಉಳಿದಿದ್ದಾರೆ.


ಇದನ್ನೂ ಓದಿ: ವಿಶ್ವಕಪ್ ಫೈನಲ್’ನಲ್ಲಿ ಭಾರತದ ಹೀನಾಯ ಸೋಲಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ದೂಷಿಸಿದ್ದು ಯಾರನ್ನು?


18 ವಿಶ್ವಕಪ್ ಪಂದ್ಯಗಳಲ್ಲಿ, ಶಮಿ 13.52 ರ ಸರಾಸರಿಯಲ್ಲಿ ಒಟ್ಟು 55 ವಿಕೆಟ್‌’ಗಳನ್ನು ಪಡೆದಿದ್ದಾರೆ. ಅಂದಹಾಗೆ ವಿಶ್ವಕಪ್ ಇತಿಹಾಸದಲ್ಲಿ ನಾಲ್ಕು ಬಾರಿ ಐದು ವಿಕೆಟ್‌’ಗಳನ್ನು ಕಬಳಿಸಿರುವ ಮತ್ತು ಅತಿಹೆಚ್ಚು ವಿಕೆಟ್ ಪಡೆದಿರುವ 5ನೇ ಆಟಗಾರ ಶಮಿ.  ಆಸ್ಟ್ರೇಲಿಯದ ಗ್ಲೆನ್ ಮೆಕ್‌’ಗ್ರಾತ್ ಅವರು 39 ಪಂದ್ಯಗಳಲ್ಲಿ 71 ವಿಕೆಟ್‌ಗಳನ್ನು ಕಬಳಿಸುವ ಮೂಲಕ WC ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್‌’ಗಳನ್ನು ಪಡೆದಿದ್ದಾರೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...


Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ