IND v BAN, World Cup 2023: ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 2015 ರ ನಂತರ ಇದೇ ಮೊದಲ ಬಾರಿಗೆ ವಿಶ್ವಕಪ್ ಪಂದ್ಯದಲ್ಲಿ ಬೌಲಿಂಗ್ ಮಾಡಿದ್ದಾರೆ. ಪುಣೆಯಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ 2023 ರ ಪಂದ್ಯದ 9 ನೇ ಓವರ್‌ನಲ್ಲಿ ಕೊಹ್ಲಿ ಕೊನೆಯ 3 ಎಸೆತಗಳ ಜವಾಬ್ದಾರಿ ತೆಗೆದುಕೊಂಡರು. 


COMMERCIAL BREAK
SCROLL TO CONTINUE READING

ಪಂದ್ಯದಲ್ಲಿ ತಮ್ಮ ಮೊದಲ ಓವರ್ ಬೌಲಿಂಗ್ ಮಾಡುವಾಗ ಹಾರ್ದಿಕ್ ಪಾಂಡ್ಯ ಪಾದದ ಗಾಯಕ್ಕೆ ಒಳಗಾದರು. ಈ ಹಿನ್ನೆಲೆಯಲ್ಲಿ ಓವರ್ ನಲ್ಲಿ ಉಳಿದ ಮೂರು ಎಸೆತಗಳ ಜವಾಬ್ದಾರಿಯನ್ನು ಕೊಹ್ಲಿ ವಹಿಸಿಕೊಂಡರು. ಈ ಮೂರು ಎಸೆತಗಳಲ್ಲಿ ಕೊಹ್ಲಿ 2 ರನ್ ನೀಡಿದರು.


 


IND-BAN ಪಂದ್ಯಕ್ಕೆ ಮಳೆ ಅಡ್ಡಿ ಭೀತಿ : ಏನು ಹೇಳುತ್ತದೆ ಹವಾಮಾನ ವರದಿ


ವಿರಾಟ್ ಕೊಹ್ಲಿ 2015 ರ ವಿಶ್ವಕಪ್ ಪಂದ್ಯದಲ್ಲಿ ಕೊನೆಯ ಬಾರಿಗೆ ಬೌಲಿಂಗ್ ಮಾಡಿದ್ದರು. ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಓವರ್ ನಲ್ಲಿ  ಬೌಲಿಂಗ್ ಮಾಡಿದ್ದರು. ಆ ಸಂದರ್ಭದಲ್ಲಿ ತಂಡದ ನಾಯಕ ಎಂಎಸ್ ಧೋನಿ ವಿರಾಟ್ ಗೆ ಈ ಜವಾಬ್ದಾರಿ ವಹಿಸಿದ್ದರು. 


ವಿರಾಟ್ ಕೊಹ್ಲಿ ಗುರುವಾರ ಸುಮಾರು 105 kmph ವೇಗದಲ್ಲ ಬೌಲಿಂಗ್ ಮಾಡುವ ಮೂಲಕ ತಮ್ಮ ಪ್ರಭಾವ ಶಾಲಿ ನಿಯಂತ್ರಣವನ್ನು ಪ್ರದರ್ಶಿಸಿದರು. ಈ ಬೌಲಿಂಗ್ ನಲ್ಲಿ ತಂಝಿದ್ ಹಸನ್ ಮತ್ತು ಲಿಟ್ಟನ್ ದಾಸ್ ತಲಾ ಒಂಡು ರನ್ ಗಳಿಸುವಲ್ಲಿ ಯಶಸ್ವಿಯಾದರು.


 


ಬಾಂಗ್ಲಾ ವಿರುದ್ದ ಪಂದ್ಯದಲ್ಲಿ ಈ ಮಾರಕ ಬೌಲರ್ ಎಂಟ್ರಿ ! ಇಲ್ಲಿದೆ ಟೀಂ ಇಂಡಿಯಾ ಪ್ಲೇಯಿಂಗ್ 11


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್