Virat Kohli 49th ODI Century: ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌’ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವಕಪ್ 2023ರಲ್ಲಿ ತಮ್ಮ ಎರಡನೇ ಶತಕ ಬಾರಿಸಿದ್ದಲ್ಲದೆ, ಏಕದಿನ ಕ್ರಿಕೆಟ್’ನಲ್ಲಿ ಒಟ್ಟು 49 ಶತಕ ಸಿಡಿಸಿದ್ದಾರೆ. ಈ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಅಂದಹಾಗೆ ವಿರಾಟ್ ತಮ್ಮ 289ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದರೆ, ಸಚಿನ್ 463 ಪಂದ್ಯಗಳನ್ನು ಆಡಿ 49 ಶತಕಗಳನ್ನು ಪೂರೈಸಿದ್ದರು.


ಇದನ್ನೂ ಓದಿ: ಫೈನಲ್’ನಲ್ಲಿ ಭಾರತ-ನ್ಯೂಜಿಲೆಂಡ್ ಮುಖಾಮುಖಿಯಾದ್ರೆ ರಚಿನ್ ಅವರ ತಾತಾ ಸಪೋರ್ಟ್ ಮಾಡೋದು ಈ ತಂಡಕ್ಕೆ! ಯಾವುದದು?


ಹುಟ್ಟುಹಬ್ಬದಂದೇ ಶತಕ ಸಿಡಿಸಿದ ಆಟಗಾರರು:


ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅತ್ಯುತ್ತಮ ಇನ್ನಿಂಗ್ಸ್ ಆಡುವ ಮೂಲಕ ಶತಕ ಸಿಡಿಸಿದ್ದಾರೆ. ಅದಲ್ಲದೆ, ಇಂದು ಕೊಹ್ಲಿ ಅವರ 35ನೇ ವರ್ಷದ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಸಾಧನೆಯ ಮೈಲಿಗಲ್ಲನ್ನು ತಲುಪಿ ಇತಿಹಾಸ ಬರೆದಿದ್ದಾರೆ. ಜನ್ಮದಿನದಂದೇ ಶತಕ ಸಿಡಿಸಿದ ಏಳನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಮಿಚೆಲ್ ಮಾರ್ಷ್, ಟಾಮ್ ಲ್ಯಾಥಮ್, ರಾಸ್ ಟೇಲರ್, ಸನತ್ ಜಯಸೂರ್ಯ, ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಈ ಸಾಧನೆ ಮಾಡಿದ್ದರು. ಅಂದಹಾಗೆ ಇದು ಏಕದಿನ ವಿಶ್ವಕಪ್‌’ನಲ್ಲಿ ವಿರಾಟ್ ಅವರ ನಾಲ್ಕನೇ ಶತಕವಾಗಿದೆ.


ಅಂತಾರಾಷ್ಟ್ರೀಯ ಏಕದಿನದಲ್ಲಿ ಅತಿ ಹೆಚ್ಚು ಶತಕಗಳು


  • ವಿರಾಟ್ ಕೊಹ್ಲಿ- 49

  • ಸಚಿನ್ ತೆಂಡೂಲ್ಕರ್- 49

  • ರೋಹಿತ್ ಶರ್ಮಾ- 31

  • ರಿಕಿ ಪಾಂಟಿಂಗ್- 30

  • ಸನತ್ ಜಯಸೂರ್ಯ- 28

  • ಹಾಶಿಮ್ ಆಮ್ಲ- 27


ವಿಶ್ವಕಪ್ 2023 ರಲ್ಲಿ ಅತ್ಯುತ್ತಮ ಫಾರ್ಮ್:


ಇದರೊಂದಿಗೆ ವಿರಾಟ್ ಕೊಹ್ಲಿ 2023ರ ಏಕದಿನ ವಿಶ್ವಕಪ್‌’ನಲ್ಲೂ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಆಡಿರುವ 8 ಪಂದ್ಯಗಳಲ್ಲಿ 6ರಲ್ಲಿ 50+ ಸ್ಕೋರ್ ಮಾಡಿದ್ದಾರೆ. ಅಂದರೆ ಎರಡು ಶತಕ ಮತ್ತು ನಾಲ್ಕು ಅರ್ಧ ಶತಕಗಳು ಸೇರಿವೆ. ಕ್ವಿಂಟನ್ ಡಿ ಕಾಕ್ ಮತ್ತು ರಚಿನ್ ರವೀಂದ್ರ ಬಳಿಕ ಪ್ರಸಕ್ತ ಟೂರ್ನಿಯಲ್ಲಿ 500ರ ಗಡಿ ದಾಟಿದ ಮೂರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಜೊತೆಗೆ ಟೀಂ ಇಂಡಿಯಾದ ಟಾಪ್ ಸ್ಕೋರರ್ ಕೂಡ ಆಗಿದ್ದಾರೆ.


ಇದನ್ನೂ ಓದಿ: ಈ ರಾಶಿಯ ಜನರ ಬಾಳಲ್ಲಿ ದೀಪಾವಳಿ ಬೆಳಗಲಿದೆ ಅದೃಷ್ಟವೆಂಬ ನಂದಾದೀಪ: ಸಿರಿಸಂಪತ್ತಿನ ಸುಧೆಯನ್ನೇ ಧಾರೆ ಎರೆಯುವಳು ಸಾಕ್ಷಾತ್ ಮಹಾಲಕ್ಷ್ಮೀ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ