ಭಾರತ ಗೆದ್ದರೂ ಕಳಪೆ ದಾಖಲೆ ಬರೆದ ವಿರಾಟ್! ತಾಳ್ಮೆ ಕಳೆದುಕೊಂಡು ಡ್ರೆಸ್ಸಿಂಗ್ ರೂಂನಲ್ಲಿ ಕೋಪ ಹೊರಹಾಕಿದ್ದು ಹೀಗೆ…
Virat Kohli Poor Record: ಪ್ರಮುಖ ಆಟಗಾರರೇ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿ ಪೆವಿಲಿಯನ್’ಗೆ ಮರಳಿದ್ದರು. ಅಂತೆಯೇ ವಿರಾಟ್ ಕೊಹ್ಲಿ ಕೂಡ ಶೂನ್ಯಕ್ಕೆ ಔಟಾದರು. ಅಂದಹಾಗೆ ವಿರಾಟ್ ಕೊಹ್ಲಿ ವಿಶ್ವಕಪ್’ನಲ್ಲಿ ಮೊದಲ ಬಾರಿಗೆ ಡಕೌಟ್ ಆಗಿದ್ದಾರೆ
Virat Kohli Poor Record: 2023ರ ವಿಶ್ವಕಪ್’ನಲ್ಲಿ ಸತತ ಐದು ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿದೆ ಭಾರತ. ಆದರೆ ಇಂದು ಲಕ್ನೋದ ಏಕನಾ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕಳಪೆ ಪ್ರದರ್ಶನ ನೀಡಿತು.
ಇದನ್ನೂ ಓದಿ: ಲಕ್ನೋದಲ್ಲಿ ಟೀಂ ಇಂಡಿಯಾ ಕೈಹಿಡಿದ ‘ಲಕ್’- 20 ವರ್ಷದ ಬಳಿಕ ಆಂಗ್ಲರ ವಿರುದ್ಧ ಗೆದ್ದ ಅಜೇಯ ಭಾರತ ಸೆಮೀಸ್’ಗೆ ಲಗ್ಗೆ!
ಪ್ರಮುಖ ಆಟಗಾರರೇ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿ ಪೆವಿಲಿಯನ್’ಗೆ ಮರಳಿದ್ದರು. ಅಂತೆಯೇ ವಿರಾಟ್ ಕೊಹ್ಲಿ ಕೂಡ ಶೂನ್ಯಕ್ಕೆ ಔಟಾದರು. ಅಂದಹಾಗೆ ವಿರಾಟ್ ಕೊಹ್ಲಿ ವಿಶ್ವಕಪ್’ನಲ್ಲಿ ಮೊದಲ ಬಾರಿಗೆ ಡಕೌಟ್ ಆಗಿದ್ದಾರೆ
ಏಕದಿನ ಕ್ರಿಕೆಟ್’ನಲ್ಲಿ 49ನೇ ಶತಕ ಬಾರಿಸಿ ಸಚಿನ್ ದಾಖಲೆ ಸರಿಗಟ್ಟುವ ತವಕದಲ್ಲಿರುವ ವಿರಾಟ್ ಕೊಹ್ಲಿಗೆ ಮತ್ತು ಅವರ ಅಭಿಮಾನಿಗಳಿಗೆ ನಿರಾಶೆಯುಂಟಾಗಿದೆ.
ಅದು ಭಾರತೀಯ ಇನ್ನಿಂಗ್ಸ್’ನ ಏಳನೇ ಓವರ್ ಆಗಿತ್ತು. ಶುಭ್ಮನ್ ಔಟ್ ಆದ ಬಳಿಕ ಕಣಕ್ಕಿಳಿದಿದ್ದರು ವಿರಾಟ್. ಆದರೆ ಡೇವಿಡ್ ವಿಲ್ಲಿ ಅವರ ಐದನೇ ಎಸೆತದಲ್ಲಿ ಕೊಹ್ಲಿ ಸಿಕ್ಸ್ ಬಾರಿಸಲು ಮುಂದಾದಾಗ, ಎಡವಟ್ಟಾಗಿ ಬೆನ್ ಸ್ಟೋಕ್ಸ್’ಗೆ ಸುಲಭ ಕ್ಯಾಚ್ ನೀಡಿದರು. ಈ ಮೂಲಕ ಏಕದಿನ ಮತ್ತು ಟಿ20 ವಿಶ್ವಕಪ್’ಗಳೆರಡನ್ನೂ ಒಳಗೊಂಡಂತೆ ವಿಶ್ವಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಕೊಹ್ಲಿ ಡಕ್ ಔಟ್ ಆಗಿದ್ದರು. ಈ ದೃಶ್ಯ ಕಂಡ ಕ್ರೀಡಾಂಗಣದಲ್ಲಿ ಒಂದು ಕ್ಷಣ ಮೌನವೇ ಆವರಿಸಿಕೊಂಡಿತು.
ಇದನ್ನೂ ಓದಿ: ವಿಶ್ವಕಪ್ 2023ರ ಸೆಮಿಫೈನಲ್ ಪ್ರವೇಶಕ್ಕೆ ಟೀಂ ಇಂಡಿಯಾ ಇನ್ನೆಷ್ಟು ಪಂದ್ಯ ಗೆಲ್ಲಬೇಕು ಗೊತ್ತೇ?
ಇನ್ನು ಡಕೌಟ್ ಬಳಿಕ ನಿರಾಶೆಗೊಂಡ ವಿರಾಟ್, ಡ್ರೆಸ್ಸಿಂಗ್ ರೂಂನಲ್ಲಿ ತಮ್ಮ ತಾಳ್ಮೆ ಕಳೆದುಕೊಂಡು ಕೋಪದಿಂದ ಕುರ್ಚಿಗೆ ಹೊಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.