Sunil Narine Retirement: ಐಸಿಸಿ ಏಕದಿನ ವಿಶ್ವಕಪ್‌’ನಲ್ಲಿ ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅದ್ಭುತ ಫಾರ್ಮ್ ಪ್ರದರ್ಶಿಸಿದ್ದಾರೆ. ಕಳೆದ ದಿನ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ 49 ODI ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಆದರೆ ಇದೇ ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲಿ, ಕೊಹ್ಲಿಗೆ ಒಂದೊಮ್ಮೆ ಸಾಕಷ್ಟು ತೊಂದರೆ ನೀಡಿದ್ದ ಈ ಸ್ಟಾರ್ ಬೌಲರ್ ನಿವೃತ್ತಿ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೊಹ್ಲಿಯ ಐತಿಹಾಸಿಕ ಶತಕದ ಬಗ್ಗೆ ಸಿಡಿಮಿಡಿಗೊಂಡ ಈ ಆಟಗಾರ ! ಹೊರ ಹಾಕಿಯೇ ಬಿಟ್ಟರು ಮನಸ್ಸಿನ ವಿಷ


ನವೆಂಬರ್ 5, ಭಾನುವಾರದಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌’ನಲ್ಲಿ ಭಾರತ ತಂಡ ವಿಶ್ವಕಪ್ ಪಂದ್ಯವನ್ನು ಆಡುತ್ತಿದ್ದಾಗ, ಇಂಡಿಯನ್ ಪ್ರೀಮಿಯರ್ ಲೀಗ್‌’ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ ವೆಸ್ಟ್ ಇಂಡೀಸ್ ದಂತಕಥೆ ನಿವೃತ್ತಿ ಘೋಷಿಸಿದ್ದರು. ಅವರು ಬೇರಾರು ಅಲ್ಲ, ಸುನಿಲ್ ನರೈನ್.


ವೆಸ್ಟ್ ಇಂಡೀಸ್ ಪರ 2011ರಲ್ಲಿ ಏಕದಿನ ಕ್ರಿಕೆಟ್’ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದ ಸ್ಪಿನ್ನರ್ ಸುನಿಲ್ ನರೈನ್ ನಿವೃತ್ತಿ ಘೋಷಿಸಿದ್ದಾರೆ. ಅಬುಧಾಬಿಯಲ್ಲಿ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌’ಗೆ ಪದಾರ್ಪಣೆ ಮಾಡಿದ ಈ ಸ್ಪಿನ್ನರ್, 2019 ರಲ್ಲಿ ಭಾರತದ ವಿರುದ್ಧ ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನೂ ಸಹ ಆಡಿದ್ದರು.


6 ಟೆಸ್ಟ್, 65 ಏಕದಿನ ಮತ್ತು 51 ಟಿ20 ಪಂದ್ಯಗಳನ್ನು ಆಡಿರುವ ಈ ಆಟಗಾರನ ವೃತ್ತಿಜೀವನದಲ್ಲಿ ಹೆಚ್ಚು ಕಾಲ ಉಳಿಯಲಿಲ್ಲ. ಸುನಿಲ್ ಟೆಸ್ಟ್‌’ನಲ್ಲಿ 21, ಏಕದಿನದಲ್ಲಿ 92 ಮತ್ತು ಟಿ20ಯಲ್ಲಿ ವೆಸ್ಟ್ ಇಂಡೀಸ್‌ ಪರ 52 ವಿಕೆಟ್‌ಗಳನ್ನು ಪಡೆದಿದ್ದಾರೆ.


ಇದನ್ನೂ ಓದಿ: ಕೊಹ್ಲಿ ಫೋನ್‌ನಲ್ಲಿ ಅತಿ ಹೆಚ್ಚು ಮಾತನಾಡೋದು ಈ ಮೂವರ ಜೊತೆ.. ತಾಯಿ, ಅನುಷ್ಕಾ.. ಆ ಮೂರನೇ ವ್ಯಕ್ತಿ ಯಾರು?


ವಿರಾಟ್’ಗೆ ತೊಂದರೆ ನೀಡಿದ್ದ ಬೌಲರ್!


ಇಂಡಿಯನ್ ಪ್ರೀಮಿಯರ್ ಲೀಗ್‌’ನಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಿದ್ದರೆ, ಸುನಿಲ್ ನರೈನ್ ಕೆಕೆಆರ್ ತಂಡದ ಭಾಗವಾಗಿದ್ದರು. ಇದುವರೆಗೆ ಕೊಹ್ಲಿ ಅವರನ್ನು ಒಟ್ಟು 4 ಬಾರಿ ಔಟ್ ಮಾಡಿದ್ದು ಇದೇ ಬೌಲರ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews