King Kohli: ಇತಿಹಾಸ ಸೃಷ್ಟಿಸುತ್ತಿರುವ ವಿರಾಟ್ ಕೊಹ್ಲಿ, ಏಕದಿನದಲ್ಲಿ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೋಲ್ಕತ್ತಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ (121 ಎಸೆತಗಳಲ್ಲಿ ಔಟಾಗದೆ 101; 10 ಬೌಂಡರಿ) ಗಳಿಸಿದರು. ಇದು ಏಕದಿನದಲ್ಲಿ ಕೊಹ್ಲಿ ಅವರ 49ನೇ ಶತಕವಾಗಿದೆ. ಕಿಂಗ್ ಕೊಹ್ಲಿ ತಮ್ಮ ಹುಟ್ಟುಹಬ್ಬದಂದು ತಾವೇ ಭಾರತ ತಂಡಕ್ಕೆ ಉಡುಗೊರೆ ನೀಡಿದ್ದಾರೆ.
ಇನ್ನು ವಿರಾಟ್ ಕೊಹ್ಲಿಗೆ ಫ್ಯಾಮಿಲಿ ಎಂದರೇ ತುಂಬಾ ಸ್ಪೆಷಲ್. ಪಂದ್ಯಗಳಲ್ಲಿ ಇಲ್ಲದಿದ್ದಾಗ ಕುಟುಂಬದೊಂದಿಗೆ ಸಾಕಷ್ಟು ಸಮಯ ಕಳೆಯುತ್ತಾರೆ. ಒಮ್ಮೆ ಸ್ಟಾರ್ ಸ್ಪೋರ್ಟ್ಸ್ ಗೆ ನೀಡಿದ ಸಂದರ್ಶನದಲ್ಲಿ.. ವಿರಾಟ್ ಕೊಹ್ಲಿ.. ಯಾರೊಂದಿಗೆ ಫೋನ್ ನಲ್ಲಿ ಹೆಚ್ಚು ಮಾತನಾಡುತ್ತೀರಿ? ಎಂದು ಕೇಳಿದಾಗ ಈ ಪ್ರಶ್ನೆಗೆ ಉತ್ತರವಾಗಿ.. ವಿರಾಟ್ ನಾನು ಹೆಚ್ಚಾಗಿ ಮೂವರೊಂದಿಗೆ ಹೆಚ್ಚು ಮಾತನಾಡುತ್ತೆನೆ ಎನ್ನುತ್ತಾರೆ.. ನಂತರ ಯಾರು ಎಂದು ಕೇಳಿದಾಗ "ನಾನು ನನ್ನ ತಾಯಿ, ಅನುಷ್ಕಾ ಶರ್ಮಾ ಮತ್ತು ನನ್ನ ಕೋಚ್ ಜೊತೆ ಹೆಚ್ಚು ಮಾತನಾಡುತ್ತೇನೆ" ಎಂದು ಕೊಹ್ಲಿ ಅಸಲಿ ಅಸಲಿ ವಿಷಯ ಹೇಳಿದ್ದಾರೆ. ಅಂದರೆ ಕೊಹ್ಲಿ ಹೆಚ್ಚು ಮಾತನಾಡುವ ಆ ಮೂರನೇ ವ್ಯಕ್ತಿ ವಿರಾಟ್ ಕೋಚ್.
ಇದನ್ನೂ ಓದಿ-ಕೊಹ್ಲಿಯ ಐತಿಹಾಸಿಕ ಶತಕದ ಬಗ್ಗೆ ಸಿಡಿಮಿಡಿಗೊಂಡ ಈ ಆಟಗಾರ ! ಹೊರ ಹಾಕಿಯೇ ಬಿಟ್ಟರು ಮನಸ್ಸಿನ ವಿಷ
ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ರಾಜಕುಮಾರ್ ಶರ್ಮಾ ಕೊಹ್ಲಿಯ ಬಾಲ್ಯದ ಕೋಚ್ ಆಗಿದ್ದರು. ಅವರು ದೆಹಲಿಯಲ್ಲಿ ತಮ್ಮದೇ ಆದ ಕ್ರಿಕೆಟ್ ಅಕಾಡೆಮಿಯನ್ನು ನಡೆಸುತ್ತಿದ್ದಾರೆ. ಅವರು 1998 ರಲ್ಲಿ ದೆಹಲಿಯಲ್ಲಿ ತಮ್ಮ ಅಕಾಡೆಮಿಯನ್ನು ಪ್ರಾರಂಭಿಸಿದರು. ಇದೇ ಅಕಾಡೆಮಿಗೆ ವಿರಾಟ್ ಕೊಹ್ಲಿ ಕೂಡ ಕಲಿಯಲು ಹೋಗುತ್ತಿದ್ದರಂತೆ.. ಅಂದಿನಿಂದ ವಿರಾಟ್ ಕೊಹ್ಲಿ ಅವರೊಂದಿಗಿದ್ದಾರೆ. ವಿರಾಟ್ ಆಗಾಗ್ಗೆ ತಮ್ಮ ಕೋಚ್ ಅನ್ನು ಹೊಗಳುತ್ತಾರೆ. ಅಲ್ಲದೇ ಅನೇಕ ಬಾರಿ ಅವರಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ.
ಐಪಿಎಲ್ 2023 ರ ಸಮಯದಲ್ಲಿ.. ರಾಜ್ ಕುಮಾರ್ ಶರ್ಮಾ ವಿರಾಟ್ ಕೊಹ್ಲಿಯನ್ನು ಭೇಟಿಯಾಗಲು ಬಂದಿದ್ದರು. ವಿರಾಟ್ ಅವರನ್ನು ನೋಡಿದ ತಕ್ಷಣ.. ಅವರ ಪಾದಗಳನ್ನು ಮುಟ್ಟಿ, ಅವರಿಂದ ಆಶೀರ್ವಾದ ಪಡೆದರು. ಆ ಫೋಟೋ ಸಖತ್ ವೈರಲ್ ಆಗಿತ್ತು.
ಇದನ್ನೂ ಓದಿ-ಬ್ಯಾಟಿಂಗ್ ಮಧ್ಯೆಯೇ ರೋಹಿತ್ ರವಾನಿಸಿದ್ದರಂತೆ ಈ ಸಂದೇಶ ! ಗೆಲುವಿಗೆ ಕಾರಣವಾಗಿದ್ದೇ ಈ ಮಂತ್ರ ಎಂದ ಅಯ್ಯರ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews