IND vs AUS, World Cup 2023: ಅಕ್ಟೋಬರ್ 8ರಂದು ಚೆನ್ನೈನಲ್ಲಿ ನಡೆದ ಭಾರತ  ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ, ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತ್ತು. ಈ ಗೆಲುವಿನ ಮೂಲಕ ಹಲವು ದಾಖಲೆಗಳನ್ನು ಬ್ರೇಕ್ ಮಾಡಿತ್ತು ಭಾರತ. ಅದರಲ್ಲಿ ಒಂದು 31 ವರ್ಷಗಳಷ್ಟು ಹಳೆಯದಾದ ಆಸ್ಟ್ರೇಲಿಯಾದ ಅಜೇಯ ದಾಖಲೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಸ್ವಿಮ್ಮಿಂಗ್ ವೇಳೆ ಗಂಭೀರವಾಗಿ ಗಾಯಗೊಂಡ ಪ್ರಮುಖ ಸ್ಪಿನ್ನರ್: ವಿಶ್ವಕಪ್’ನಿಂದ ಹೊರಕ್ಕೆ…!


ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವಿನ ಮೂಲಕ ಶುಭಾರಂಭ ಮಾಡಿದೆ.  ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 200 ರನ್’​​ಗೆ ಆಲೌಟ್ ಆಗಿತ್ತು. ಆ ಬಳಿಕ ಗೆಲುವಿನ ಗುರಿ ಬೆನ್ನತ್ತಿ ಕಣಕ್ಕಿಳಿದ ಭಾರತ, ಆರಂಭಿಕ ಆಘಾತ ಅನುಭವಿಸಿದರೂ, ನಂತರದಲ್ಲಿ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅದ್ಭುತ ಆಟದಿಂದ ಭಾರತಕ್ಕೆ ಸ್ಮರಣೀಯ ಗೆಲುವು ಸಿಕ್ಕಿತು.


ಈ ರೋಚಕ ಗೆಲುವಿನೊಂದಿಗೆ ಆಸ್ಟ್ರೇಲಿಯಾದ 31 ವರ್ಷಗಳಷ್ಟು ಹಳೆಯ ಅಜೇಯ ದಾಖಲೆಗೆ ಬ್ರೇಕ್ ಬಿದ್ದಿದೆ. ಕಳೆದ 31 ವರ್ಷಗಳಿಂದ ಐಸಿಸಿ ವಿಶ್ವಕಪ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ಒಂದೇ ಒಂದು ಬಾರಿಯೂ ಕಾಂಗರೂ ಪಡೆ ಸೋತಿರಲಿಲ್ಲ. ಆ ಗೆಲುವಿನ ಓಟಕ್ಕೆ ಟೀಮ್ ಇಂಡಿಯಾ ಬ್ರೇಕ್ ಹಾಕಿದೆ.


ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ತರಕಾರಿಯ ರಸ ಕುಡಿದರೆ ಒಂದೇ ವಾರದಲ್ಲಿ ಸರಾಗವಾಗಿ ಕರಗುತ್ತೆ ಹೊಟ್ಟೆಯ ಬೊಜ್ಜು


1992 ರ ನಂತರ ಮೊದಲ ಬಾರಿಗೆ ತನ್ನ ಆರಂಭಿಕ ವಿಶ್ವಕಪ್ ಪಂದ್ಯದಲ್ಲಿ ಆಸ್ಟ್ರೇಲಿಯಾವು ಚೆನ್ನೈನಲ್ಲಿ ಭಾರತದ ವಿರುದ್ಧ ಸೋತಿದೆ. 1992 ರಲ್ಲಿ ಆಕ್ಲೆಂಡ್‌’ನಲ್ಲಿ ನ್ಯೂಜಿಲೆಂಡ್ ವಿರುದ್ಧ 37 ರನ್‌’ಗಳಿಂದ ಚತುರ್ವಾರ್ಷಿಕ ಪಂದ್ಯದಲ್ಲಿ ಕೊನೆಯ ಬಾರಿ ಆರಂಭಿಕ ಪಂದ್ಯದಲ್ಲಿ ಸೋಲು ಕಂಡಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.