Rachin Ravindra: ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುರುವಾರ (ಅಕ್ಟೋಬರ್ 05) ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಅವರು ತಮ್ಮ ಚೊಚ್ಚಲ ಶತಕವನ್ನು ಸಿಡಿಸುವ ಮೂಲಕ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್‌ನ್ನು 9 ವಿಕೆಟ್‌ಗಳಿಂದ ಮಣಿಸಿದರು. 


COMMERCIAL BREAK
SCROLL TO CONTINUE READING

96 ಎಸೆತಗಳಲ್ಲಿ ಅಜೇಯ 123 ರನ್ ಗಳಿಸಿದ 23 ವರ್ಷದ ರಚಿನ್ ರವೀಂದ್ರ  ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಪಂದ್ಯದ ತಾರೆಯಾಗಿ ಮಿಂಚಿದರು. ಅವರಿಗೆ ಡೆವೊನ್ ಕಾನ್ವೇ (121 ಎಸೆತಗಳಲ್ಲಿ 152*)  ಸಾಥ್ ನೀಡಿದರು. ವಿಶೇಷವೆಂದರೆ, ಈ ಇಬ್ಬರೂ ಸಹ ನಿನ್ನೆಯಷ್ಟೇ ವಿಶ್ವಕಪ್‌ಗೆ  ಪದಾರ್ಪಣೆ ಮಾಡಿದ ಕ್ರಿಕೆಟಿಗರು. ಇಬ್ಬರು ವಿಶ್ವಕಪ್‌ಗೆ ಪದಾರ್ಪಣೆ ಮಾಡಿದ ಆಟಗಾರರು ಒಂದೇ ಪಂದ್ಯದಲ್ಲಿ ಶತಕ ಬಾರಿಸಿದ್ದು ಇದೇ ಮೊದಲು ಎಂಬುದು ಮತ್ತೊಂದು ವಿಶೇಷ. 


ಅಕ್ಟೋಬರ್ 5 ರಂದು, ರವೀಂದ್ರ ಅವರು ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ವಿಶ್ವಕಪ್ ODI ಚೊಚ್ಚಲ ಪಂದ್ಯದಲ್ಲಿ ಶತಕ ದಾಖಲಿಸಿದ ನಾಲ್ಕನೇ ಕಿವೀಸ್ ಆಟಗಾರರಾದರು. 82 ಎಸೆತಗಳಲ್ಲಿ ನ್ಯೂಜಿಲೆಂಡ್ ಆಟಗಾರನೊಬ್ಬ ವಿಶ್ವಕಪ್‌ನಲ್ಲಿ ಸಿಡಿಸಿದ ವೇಗದ ಶತಕ ಇದಾಗಿದೆ. ಅವರು ಡೆವೊನ್ ಕಾನ್ವೆ ಅವರೊಂದಿಗೆ ವಿಶ್ವಕಪ್ ಇತಿಹಾಸದಲ್ಲಿ ನಾಲ್ಕನೇ ಅತಿ ಹೆಚ್ಚು ಜೊತೆಯಾಟವನ್ನು ದಾಖಲಿಸಿದರು. ಈ ಸ್ಟಾರ್ ಆಟಗಾರ ರಚಿನ್ ರವೀಂದ್ರ ಅವರಿಗೂ ನಮ್ಮ ಭಾರತಕ್ಕೂ ನಂಟಿದ್ದು, ಭಾರತೀಯ ಕ್ರಿಕೆಟ್ ನ ಇಬ್ಬರು ಖ್ಯಾತ ದಿಗ್ಗಜ ಕ್ರಿಕೆಟಿಗರ ಹೆಸರನ್ನು ಇವರಿಗೆ ಇಡಲಾಗಿದೆ ಎಂದು ನಿಮಗೆ ತಿಳಿದಿದೆಯೇ? 


ಇದನ್ನೂ ಓದಿ- ಟೀಂ ಇಂಡಿಯಾ ಪಾಲಿಗೆ ಈ ಒಬ್ಬ ಆಟಗಾರ ಸಾಕು ಟ್ರೋಫಿ ಗೆಲ್ಲಿಸಿ ಕೊಡಲು ! ಯಾರಾತ ಗೊತ್ತಾ ?


ರಚಿನ್ ರವೀಂದ್ರ ಯಾರು? ಇವರಿಗೂ ನಮ್ಮ ಭಾರತಕ್ಕೂ ಇದೆಯೇ ನಂಟು? 
ಹೌದು, ರಚಿನ್ ರವೀಂದ್ರ ಅವರು ವೆಲ್ಲಿಂಗ್ಟನ್‌ನಲ್ಲಿ ಭಾರತೀಯ ಪೋಷಕರಿಗೆ ಜನಿಸಿದರು. ನ್ಯೂಜಿಲೆಂಡ್‌ಗೆ ಸ್ಥಳಾಂತರಗೊಳ್ಳುವ ಮೊದಲು, ಅವರ ತಂದೆ, ಸಾಫ್ಟ್‌ವೇರ್ ಆರ್ಕಿಟೆಕ್ಟ್ ರವಿ ಕೃಷ್ಣಮೂರ್ತಿ, ಅವರು ಜನಿಸಿದ ನಗರದಲ್ಲಿ ಕ್ಲಬ್ ಕ್ರಿಕೆಟ್ ಆಡುತ್ತಿದ್ದರು. 


ರಾಹುಲ್+ಸಚಿನ್= ರಚಿನ್: ಇದು ರಚಿನ್ ರವೀಂದ್ರ ಅವರ ಹೆಸರಿನ ಗುಟ್ಟು!
ರಚಿನ್ ರವೀಂದ್ರ ಪಾಲಕರು ಭಾರತೀಯರು ಅದರಲ್ಲೂ ಮೂಲತಃ ಬೆಂಗಳೂರಿನವರು. ಸದ್ಯ ನ್ಯೂಜಿಲೆಂಡ್‌ನಲ್ಲಿ ನೆಲೆಸಿದವರಾಗಿದ್ದು, ಇವರ ತಂದೆ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಮತ್ತು ದಿ ವಾಲ್ ಆಫ್ ಇಂಡಿಯನ್ ಕ್ರಿಕೆಟ್ ಎಂದು ಕರೆಯಲ್ಪಡುವ ರಾಹುಲ್ ದ್ರಾವಿಡ್ ಅವರ ಅಪ್ಪಟ ಅಭಿಮಾನಿ. ಹಾಗಾಗಿಯೇ ತಮ್ಮ ಪುತ್ರನಿಗೆ ರಾಹುಲ್+ಸಚಿನ್= ರಚಿನ್ (RAhul + saCHIN=RACHIN) ಎಂದು ನಾಮಕರಣ ಮಾಡಿದ್ದಾರೆ. 


ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಆಟ ನೋಡಿ ಬೆಳೆದ ರಚಿನ್, ಅವರಂತೆ ತಾನೂ ಕ್ರಿಕೆಟ್ ಆಡಬೇಕೆಂದು ಬಯಸಿದ್ದರು. ಅಷ್ಟೇ ಅಲ್ಲ, ಅಭಿಮನ್ಯುವಿನಂತೆ ಅವರ ಆಟ ನೋಡಿ ಕಲಿತ ಅಭಿಮಾನಿ ರಚಿನ್ ರವೀಂದ್ರ 2023ರ ವಿಶ್ವಕಪ್ ಮೊದಲ ಪಂದ್ಯದಲ್ಲೇ ಹಲವು ದಾಖಲೆಯನ್ನು ಬರೆಯುವ ಮೂಲಕ ಶುಭಾರಂಭ ಮಾಡಿದ್ದಾರೆ. ಇಂದು ಅವರ ತಂದೆ, ಸಚಿನ್ ತೆಂಡುಲ್ಕರ್  ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಮೆಚ್ಚುವಂತೆ ಆಟವಾಡಿದ್ದಾನೆ ಈ ಯುವಕ. 


ಇದನ್ನೂ ಓದಿ- ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಆಡಲಿದ್ದಾರೆ ಟೀಂ ಇಂಡಿಯಾದ ಈ ಆರು ಆಟಗಾರರು


ವಿಶ್ವಕಪ್ ಅಂದರೆ ಹಾಗೇ ವಿಶ್ವವೇ ಬೆರಗಾಗುವಂತಹ ಸ್ಪೂರ್ತಿದಾಯಕ ಕಥೆಗಳ ಸಾಗರ. ಮೊದಲ ಪಂದ್ಯದಲ್ಲಿ ಹೊರಬಂದ ಇದು ಮೊದಲ ಕತೆ. ಈ ವಿಶ್ವಕಪ್ ನಲ್ಲಿ ಒಟ್ಟು 150 ಆಟಗಾರರಿದ್ದಾರೆ. ಈ ವಿಶ್ವಕಪ್ ಪಯಣದಲ್ಲಿ ಮತ್ತಷ್ಟು ರೋಚಕ ಕತೆಗಳು ಅನಾವರಣಗೊಳ್ಳಲ್ಲಿವೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.