Rachin Ravindra Name: ಏಕದಿನ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ್ದ ನ್ಯೂಜಿಲೆಂಡ್ ತಂಡದ ರಚಿನ್ ರವೀಂದ್ರ ಹಿನ್ನೆಲೆ ಏನು? ಅವರಿಗೆ ಆ ಹೆಸರನ್ನೇಕೆ ಇಟ್ಟಿದ್ದಾರೆ? ಅದರ ಹಿನ್ನೆಲೆ ಏನು? ಬೆಂಗಳೂರಿನ ಸಂಪರ್ಕದ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮುಂದಿನ 18 ತಿಂಗಳು ಈ ರಾಶಿಯವರದ್ದೇ ಅದೃಷ್ಟ ! ಒಲಿದು ಬರುವುದು ಹಣ-ಸಂಪತ್ತು, ಕೀರ್ತಿ, ಗೌರವ


ಐಸಿಸಿ ಏಕದಿನ ವಿಶ್ವಕಪ್​ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ರಚಿನ್ ರವೀಂದ್ರ ಅವರು ಬೆಂಗಳೂರು ಮೂಲದವರು. ಚೊಚ್ಚಲ ಏಕದಿನ ವಿಶ್ವಕಪ್ ಪಂದ್ಯದಲ್ಲೇ ಶತಕ ಸಿಡಿಸಿದ ರಚಿನ್ ಹೆಸರಲ್ಲಿ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಮತ್ತು ಟೀಂ ಇಂಡಿಯಾದ ದಿಗ್ಗಜ ದಿ ವಾಲ್ ಖ್ಯಾತಿಯ ರಾಹುಲ್ ಹೆಸರು ಅಡಗಿದೆ.


ಗಾಯಾಳು ಕೇನ್ ವಿಲಿಯಮ್ಸನ್​ ಅವರ ಅನುಪಸ್ಥಿತಿಯಲ್ಲಿ ಪ್ಲೇಯಿಂಗ್ ಇಲೆವೆನ್ ಸೇರಿದ ರಚಿನ್, ನ್ಯೂಜಿಲೆಂಡ್ ಪರ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದರು. ಈ ವೇಳೆ 96 ಎಸೆತಗಳಲ್ಲಿ 11 ಬೌಂಡರಿ, 5 ಸಿಕ್ಸರ್​ ಒಳಗೊಂಡು ಅಜೇಯ 123 ರನ್​ ಕಲೆ ಹಾಕಿದ್ದರು. ಇನ್ನು ರಚಿನ್ ಅವರ ತಂದೆ ಬೆಂಗಳೂರಿನ ಬಸವನಗುಡಿಯವರು.


ಇನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡದ ಸಂದರ್ಶನದ ವೇಳೆ ಮಾತನಾಡಿದ ರಚಿನ್ ರವೀಂದ್ರ, “ಬೆಂಗಳೂರಲ್ಲಿ ನನಗೆ ಫ್ಯಾಮಿಲಿ  ಇದೆ. ನನ್ನ ಅಜ್ಜ ಅಜ್ಜಿ ಇಲ್ಲಿಯವರು. ಮುಂದೆ ಬೆಂಗಳೂರಿನಲ್ಲಿ ನಮ್ಮ ಪಂದ್ಯ ನಡೆಯಲಿದ್ದು, ಮತ್ತಷ್ಟು ಖುಷಿ ತರಲಿದೆ” ಎಂದರು.


ಇದನ್ನೂ ಓದಿ:  ಬುಧ ಸಂಚಾರ ಬದಲಾವಣೆಯಿಂದ ವಿಪರೀತ ರಾಜಯೋಗ: ಇನ್ನೆರಡು ವಾರ ಈ ರಾಶಿಯವರಿಗೆ ಕೀರ್ತಿ ಜೊತೆಗೆ ಅಪಾರ ಧನ ಪ್ರಾಪ್ತಿ


ಇನ್ನು ರಚಿನ್‌ ಅವರ ತಂದೆ ರವಿ ಕೃಷ್ಣಮೂರ್ತಿ, ರಾಹುಲ್‌ ದ್ರಾವಿಡ್‌ ಮತ್ತು ಸಚಿನ್‌ ತೆಂಡೂಲ್ಕರ್‌ ಅವರ ಅಪ್ಪಟ ಅಭಿಮಾನಿ. ಇದೇ ಕಾರಣದಿಂದ ರಾಹುಲ್‌ ದ್ರಾವಿಡ್‌ ಹೆಸರಿನಿಂದ 'ರ' ಮತ್ತು ಸಚಿನ್‌ ತೆಂಡೂಲ್ಕರ್‌ ಹೆಸರಿನಿಂದ 'ಚಿನ್‌' ಅಕ್ಷರಗಳನ್ನು ತೆಗೆದು ಅವರು ತಮ್ಮ ಪುತ್ರನಿಗೆ ರಚಿನ್‌ ಎಂದು ಹೆಸರಿಟ್ಟಿದ್ದಾರಂತೆ. ಇನ್ನು ರಚಿನ್ ಅವರು​, ಸಚಿನ್​ ತೆಂಡೂಲ್ಕರ್​ ಅವರ ದೊಡ್ಡ ಅಭಿಮಾನಿ ಎಂಬುದು ಉಲ್ಲೇಖನೀಯ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ