Ind vs Pak in ODI World Cup 2023: ಭಾರತದಲ್ಲಿ ನಡೆಯುತ್ತಿರುವ 2023ರ ವಿಶ್ವಕಪ್‌ನ ಉತ್ಸಾಹ ದಿನೇ ದಿನೇ ಉತ್ತುಂಗಕ್ಕೇರುತ್ತಿದೆ. ಕ್ರಿಕೆಟ್ ಪಂದ್ಯ ಎಂದರೆ ಮೊದಲು ನೆನಪಾಗುವುದು ಇಂಡಿಯಾ vs ಪಾಕಿಸ್ತಾನ ಪಂದ್ಯ. ಭಾರತ ಮತ್ತು ಪಾಕಿಸ್ತಾನ ನಡುವಿನ ಏಕದಿನ ಅಂತಾರಾಷ್ಟ್ರೀಯ ವಿಶ್ವಕಪ್‌ನ ಸೂಪರ್ ಹಾಟ್ ಪಂದ್ಯ ವೀಕ್ಷಣೆಗೆ ಇಡೀ ವಿಶ್ವವೇ ಕಾತುರದಿಂದ ಕಾದು ಕುಳಿತಿದೆ. ಅಕ್ಟೋಬರ್ 14 ರಂದು ಇಂಡಿಯಾ vs ಪಾಕಿಸ್ತಾನ ವಿಶ್ವಕಪ್‌ನ ಹೈವೋಲ್ಟೇಜ್ ಕದನ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯಲಿದ್ದು, ಪಂದ್ಯಕ್ಕೂ ಮುನ್ನ ಭಾರತೀಯ ರೈಲ್ವೇಸ್ ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ವಿಶ್ವಕಪ್ ಪಂದ್ಯ ವೀಕ್ಷಣೆ, ಅದರಲ್ಲೂ ಭಾರತ vs ಪಾಕಿಸ್ತಾನ ಪಂದ್ಯವನ್ನು ನೇರವಾಗಿ ವೀಕ್ಷಿಸುವುದು ಕ್ರಿಕೆಟ್ ಅಭಿಮಾನಿಗಳಿಗೆ ಸ್ವರ್ಗಕ್ಕಿಂತ ಕಡಿಮೆ ಇಲ್ಲ ಎಂತಲೇ ಹೇಳಬಹುದು. ಇದೀಗ, ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ-ಪಾಕ್ ನಡುವಿನ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು, ಟಿಕೆಟ್ ಖರೀದಿಗಾಗಿ ಕ್ರಿಕೆಟ್ ಪ್ರೇಮಿಗಳು ಮುಗಿಬಿದ್ದಿದ್ದಾರೆ. ಏತನ್ಮಧ್ಯೆ, ಭಾರತೀಯ ರೈಲ್ವೇ ದೊಡ್ಡ ಸಾವಿರಾರು ಕ್ರಿಕೆಟ್ ಪ್ರೇಮಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. 


ಕ್ರಿಕೆಟ್ ಪ್ರೇಮಿಗಳಿಗಾಗಿ ವಿಶೇಷ ರೈಲು ವ್ಯವಸ್ಥೆ: 
ಅಕ್ಟೋಬರ್ 14 ರಂದು  ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಣೆಗಾಗಿ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೇ ಮುಂಬೈ ಸೆಂಟ್ರಲ್ ಮತ್ತು ಅಹಮದಾಬಾದ್ ನಿಲ್ದಾಣಗಳ ನಡುವೆ ವಿಶೇಷ ಸೂಪರ್‌ಫಾಸ್ಟ್ ರೈಲುಗಳನ್ನು (ಮುಂಬೈ ಸೆಂಟ್ರಲ್-ಅಹಮದಾಬಾದ್ ವಿಶೇಷ ರೈಲು) ಓಡಿಸಲು ನಿರ್ಧರಿಸಿದೆ. 


ಇದನ್ನೂ ಓದಿ- World Cup 2023: ವಿಶ್ವಕಪ್’ಗೆ ಖಲಿಸ್ತಾನಿ ಬೆದರಿಕೆ! ಧರ್ಮಶಾಲಾ ಕಟ್ಟಡದ ಗೋಡೆಗಳಲ್ಲಿ ಪ್ರಚೋದನಾಕಾರಿ ಬರಹ


ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುವುದರಿಂದ ಮುಂಬೈ ಸೆಂಟ್ರಲ್-ಅಹಮದಾಬಾದ್ ವಿಶೇಷ ರೈಲು ಶುಕ್ರವಾರ ರಾತ್ರಿ 9.30 ಕ್ಕೆ ಮುಂಬೈ ಸೆಂಟ್ರಲ್‌ನಿಂದ ಹೊರಡಲಿದೆ. ಈ ರೈಲು ಮರುದಿನ ಬೆಳಗ್ಗೆ 5.30ಕ್ಕೆ ರೈಲು ಅಹಮದಾಬಾದ್ ತಲುಪಲಿದೆ ಎಂದು ಪಶ್ಚಿಮ ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ. ಇನ್ನೂ ಅಹಮದಾಬಾದ್-ಮುಂಬೈ ಸೆಂಟ್ರಲ್ ವಿಶೇಷ ರೈಲು ಭಾನುವಾರ ಮುಂಜಾನೆ 4 ಗಂಟೆಗೆ ಅಹಮದಾಬಾದ್‌ನಿಂದ ಹೊರಡಲಿದ್ದು, ಅದೇ ದಿನ ಮಧ್ಯಾಹ್ನ 12:10 ಕ್ಕೆ ಮುಂಬೈ ಸೆಂಟ್ರಲ್ ತಲುಪಲಿದೆ. 


ಶುಲ್ಕ: 
ಈ ವಿಶೇಷ ರೈಲು ಎಸಿ 2-ಟೈರ್, ಎಸಿ 3-ಟೈರ್, ಸ್ಲೀಪರ್ ಮತ್ತು ಸಾಮಾನ್ಯ ದರ್ಜೆಯ ಕೋಚ್‌ಗಳನ್ನು ಹೊಂದಿರಲಿದ್ದು, ಈ ರೈಲಿನಲ್ಲಿ ಪ್ರಯಾಣಿಸಲು ಇಚ್ಛಿಸುವವರು ವಿಶೇಷ ದರವನ್ನು ಪಾವತಿಸಬೇಕಾಗುತ್ತದೆ. 


ಇದನ್ನೂ ಓದಿ- ವಿಶ್ವಕಪ್ ಮೊದಲ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಪ್ರಕಟ! 148 ಕಿಮೀ ವೇಗದ ‘ಫಾಸ್ಟ್ ಬೌಲರ್’ಗೆ ಅವಕಾಶ ಕೊಟ್ಟ ಕ್ಯಾಪ್ಟನ್


ಟಿಕೆಟ್ ಬುಕ್ಕಿಂಗ್: 
ಪಶ್ಚಿಮ ರೈಲ್ವೆ ವಿಭಾಗ (ಭಾರತೀಯ ರೈಲ್ವೆ) ಪ್ರಕಾರ,  ಮುಂಬೈ ಸೆಂಟ್ರಲ್- ಅಹಮದಾಬಾದ್ ವಿಶೇಷ ರೈಲು ತನ್ನ ಪ್ರಯಾಣದ ಸಮಯದಲ್ಲಿ ದಾದರ್, ಬೊರಿವಲಿ, ಪಾಲ್ಘರ್, ವಾಪಿ, ವಲ್ಸಾದ್, ನವಸಾರಿ, ಸೂರತ್ ಮತ್ತು ವಡೋದರಾ ನಿಲ್ದಾಣಗಳಲ್ಲಿ ನಿಲ್ಲುತ್ತದೆ ಎಂದು ತಿಳಿದುಬಂದಿದೆ. ಈ ರೈಲಿನಲ್ಲಿ ಪ್ರಯಾಣಿಸಲು ಇಂದಿನಿಂದ (ಅಕ್ಟೋಬರ್ 12) ಟಿಕೆಟ್ ಬುಕ್ ಮಾಡಲು ಅವಕಾಶವಿದ್ದು, ಪ್ರಯಾಣಿಕರು ಎಲ್ಲಾ ಸಾರ್ವಜನಿಕ ಮೀಸಲಾತಿ ಸೇವೆ (PRS) ಕೌಂಟರ್‌ಗಳು ಮತ್ತು ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ವೆಬ್‌ಸೈಟ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.