World Cup 2023: ವಿಶ್ವಕಪ್’ಗೆ ಖಲಿಸ್ತಾನಿ ಬೆದರಿಕೆ! ಧರ್ಮಶಾಲಾ ಕಟ್ಟಡದ ಗೋಡೆಗಳಲ್ಲಿ ಪ್ರಚೋದನಾಕಾರಿ ಬರಹ

Khalistan slogans in Dharamshala: ಮಾಹಿತಿಯ ಪ್ರಕಾರ, ಖಲಿಸ್ತಾನ್ ಬೆಂಬಲಿಗರು ಖಲಿಸ್ತಾನ್ ಪರವಾದ ಘೋಷಣೆಗಳನ್ನು ಧರ್ಮಶಾಲಾದ ಸರ್ಕಾರಿ ಇಲಾಖೆಯ ಗೋಡೆಗಳ ಮೇಲೆ ಬರೆದಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಕಾರ್ಯ ಪ್ರವೃತ್ತರಾದ ಪೊಲೀಸ್ ಇಲಾಖೆ ಆ ಬರಹಗಳನ್ನು ಅಳಿಸಿಹಾಕಿದೆ.

Written by - Bhavishya Shetty | Last Updated : Oct 4, 2023, 06:02 PM IST
    • ಧರ್ಮಶಾಲಾದ ಸರ್ಕಾರಿ ಇಲಾಖೆಯ ಗೋಡೆಗಳ ಮೇಲೆ ಖಲಿಸ್ತಾನ್ ಪರ ಘೋಷಣೆ
    • ಕಾರ್ಯ ಪ್ರವೃತ್ತರಾದ ಪೊಲೀಸ್ ಇಲಾಖೆ ಆ ಬರಹಗಳನ್ನು ಅಳಿಸಿಹಾಕಿದೆ
    • ಪಂದ್ಯಕ್ಕೂ ಮುನ್ನ ಧರ್ಮಶಾಲಾದಲ್ಲಿ ಪೊಲೀಸ್ ಭದ್ರತೆ
World Cup 2023: ವಿಶ್ವಕಪ್’ಗೆ ಖಲಿಸ್ತಾನಿ ಬೆದರಿಕೆ! ಧರ್ಮಶಾಲಾ ಕಟ್ಟಡದ ಗೋಡೆಗಳಲ್ಲಿ ಪ್ರಚೋದನಾಕಾರಿ ಬರಹ  title=
World Cup 2023

Khalistan slogans in Dharamshala: ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಶನಿವಾರ ಅಂದರೆ ಅಕ್ಟೋಬರ್ 7ರಂದು ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ನಡುವೆ ಪಂದ್ಯ ನಡೆಯಲಿದೆ. ಆದರೆ ಇದಕ್ಕೂ ಮೊದಲು ಖಲಿಸ್ತಾನಿ ಬೆದರಿಕೆ ಇದೆ ಎಂಬ ವಿಷಯ ಮುನ್ನೆಲೆಗೆ ಬಂದಿದೆ. ವಿಶ್ವಕಪ್ ಪಂದ್ಯದ ಮೊದಲು ಖಲಿಸ್ತಾನ್ ಪರವಾದ ಘೋಷಣೆಗಳನ್ನು ಧರ್ಮಶಾಲಾದ ಸರ್ಕಾರಿ ಕಟ್ಟಡದ ಗೋಡೆಗಳ ಮೇಲೆ ಬರೆಯಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Viral Video: ಮಾರ್ಗ ಮಧ್ಯೆ ಕೋಲಿನಂತೆ ನೆಟ್ಟಗೆ ಎದ್ದು ನಿಂತ ನಾಗರ! ಮೈನವಿರೇಳಿಸೋ ವಿಡಿಯೋ

ಮಾಹಿತಿಯ ಪ್ರಕಾರ, ಖಲಿಸ್ತಾನ್ ಬೆಂಬಲಿಗರು ಖಲಿಸ್ತಾನ್ ಪರವಾದ ಘೋಷಣೆಗಳನ್ನು ಧರ್ಮಶಾಲಾದ ಸರ್ಕಾರಿ ಇಲಾಖೆಯ ಗೋಡೆಗಳ ಮೇಲೆ ಬರೆದಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಕಾರ್ಯ ಪ್ರವೃತ್ತರಾದ ಪೊಲೀಸ್ ಇಲಾಖೆ ಆ ಬರಹಗಳನ್ನು ಅಳಿಸಿಹಾಕಿದೆ. ಪ್ರಸ್ತುತ, ಪೊಲೀಸರು ಪ್ರಕರಣವನ್ನು ದಾಖಲಿಸಿದ್ದು, ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ಘೋಷಣೆಗಳನ್ನು ಬ್ಲ್ಯಾಕ್ ಸ್ಪ್ರೇ ಪೇಂಟ್‌’ನಿಂದ ಬರೆಯಲಾಗಿದೆ ಎಂದು ಹೇಳಲಾಗಿದೆ. ಈ ಪ್ರಕರಣದ ಬಗ್ಗೆ ಸ್ಥಳೀಯ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದರು.   

ಇದನ್ನೂ ಓದಿ: ವಿಶ್ವಕಪ್ ಮೊದಲ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಪ್ರಕಟ!

ಸದ್ಯ ಧರ್ಮಶಾಲಾದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, 1500 ಪೊಲೀಸರು ಮತ್ತು ಗೃಹ ಕಾವಲುಗಾರರನ್ನು ನಿಯೋಜಿಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News