World Test Championship Final 2023: ಮೂಲಗಳ ಪ್ರಕಾರ ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23ರ ಅಂತಿಮ ಪಂದ್ಯವು ಜೂನ್ 8 ರಿಂದ ನಡೆಯಲಿದೆ. ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಇನ್ನೂ ಔಪಚಾರಿಕ ದಿನಾಂಕಗಳನ್ನು ಅಂತಿಮಗೊಳಿಸಿಲ್ಲ. ಆದರೂ, ಪಂದ್ಯವು ಜೂನ್ 8 ರಿಂದ ಲಂಡನ್‌ನ ಲೆಜೆಂಡಿರಿ ಓವಲ್‌ನಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Rohit Sharma Retirement: ನಾಯಕ ಸ್ಥಾನಕ್ಕೆ ರೋಹಿತ್ ಶರ್ಮಾ ನಿವೃತ್ತಿ!? ವಿಶ್ವಕಪ್ ಬಳಿಕ ಇವರೇ ಟೀಂ ಇಂಡಿಯಾ ಕ್ಯಾಪ್ಟನ್!


ಕೆಟ್ಟ ಹವಾಮಾನದ ಸಂದರ್ಭದಲ್ಲಿ ಅಪೆಕ್ಸ್ ಕ್ರಿಕೆಟ್ ಸಂಸ್ಥೆಯು ದಿನವನ್ನು ನಿಗದಿಪಡಿಸಿದೆ ಎಂದು ಊಹಿಸಲಾಗಿದೆ. ಪಂದ್ಯಾವಳಿಯು 2018-21 ಆವೃತ್ತಿಯ ರೀತಿಯ ರಚನೆಯನ್ನು ಅನುಸರಿಸಲು ತೀರ್ಮಾನಿಸಲಾಗಿದೆ. ಅಷ್ಟೇ ಅಲ್ಲದೆ, ತಂಡಗಳ ನಡುವೆ ಡ್ರಾ ಅಥವಾ ಟೈ ಆದಲ್ಲಿ ಆ ಸಂದರ್ಭದಲ್ಲಿ ಜಂಟಿ ವಿಜೇತರನ್ನು ಘೋಷಿಸುವ ಸಾಧ್ಯತೆ ಇದೆ.


ಆಸ್ಟ್ರೇಲಿಯಾ, ಭಾರತ ಮತ್ತು ಶ್ರೀಲಂಕಾ ಎಲ್ಲರೂ ರೇಸ್‌ನಲ್ಲಿದ್ದರೂ ಯಾವ ತಂಡವು ಫೈನಲ್‌ನಲ್ಲಿ ಸ್ಥಾನವನ್ನು ಪಡೆಯುತ್ತದೆ ಎಂದು ಖಚಿತಪಡಿಸಿಲ್ಲ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದ ನಂತರ ಭಾರತ ಟೆಸ್ಟ್ ಚಾಂಪಿಯನ್ ಶಿಪ್ ಶ್ರೇಯಾಂಕದಲ್ಲಿ ನಂಬರ್ ವನ್ ಸ್ಥಾನದಲ್ಲಿದೆ.  ಮುಂದಿನ ಪಂದ್ಯವು ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದ್ದು, ಈ ಪಂದ್ಯ ಎರಡೂ ತಂಡಗಳಿಗೆ ನಿರ್ಣಾಯಕವಾಗಿದೆ.


ಇದನ್ನೂ ಓದಿ: KL Rahul Tattoos: ಕೆಎಲ್ ರಾಹುಲ್ ದೇಹದಲ್ಲಿದೆ 9 ಟ್ಯಾಟೂಗಳು: ಒಂದೊಂದಕ್ಕೂ ಇದೆಯಂತೆ ವಿಭಿನ್ನ ಅರ್ಥ!


ಭಾರತವು ಟೆಸ್ಟ್ ಸರಣಿಯನ್ನು 1-0, 2-0, ಅಥವಾ 2-1 ಅಂತರದಿಂದ ಗೆದ್ದರೆ ಅಥವಾ 2-2 ಸ್ಕೋರ್‌ನಿಂದ ಡ್ರಾ ಮಾಡಿಕೊಂಡರೆ, ಶ್ರೀಲಂಕಾ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯಗಳಲ್ಲಿ ಒಂದನ್ನು ಟೈನಲ್ಲಿ ಮುಕ್ತಾಯಗೊಳಿಸಿದರೆ,  ಭಾರತವು 2023 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.