ನವದೆಹಲಿ: ಗುಜರಾತ್ ಜೈಂಟ್ಸ್ (ಜಿಜಿ) ಮಹಿಳಾ ಆರಂಭಿಕ ಆಟಗಾರ್ತಿಯರಾದ ಬೆತ್ ಮೂನಿ ಮತ್ತು ಲಾರಾ ವೊಲ್ವಾರ್ಡ್ ಅವರು ಬುಧವಾರದಂದು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಟೂರ್ನಿಯ ಇತಿಹಾಸದಲ್ಲಿ ಎರಡನೇ ಅತ್ಯಧಿಕ ಜೊತೆಯಾಟದ ದಾಖಲೆಯನ್ನು ನಿರ್ಮಿಸಿದ್ದಾರೆ


COMMERCIAL BREAK
SCROLL TO CONTINUE READING

ನವದೆಹಲಿಯಲ್ಲಿ ನಡೆದ WPL 2024 ರ ರಾಯಲ್ ಚಾಲೆಂಜರ್ಸ್ (RCB) ಮಹಿಳೆಯರ ವಿರುದ್ಧದ ಪಂದ್ಯದಲ್ಲಿ ಇವರಿಬ್ಬರು ಆಟಗಾರ್ತಿಯರು ಮೊದಲ ವಿಕೆಟ್‌ಗೆ 140 ರನ್ ಸೇರಿಸಿದರು. ಆ ಮೂಲಕ  2023ರ ಋತುವಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಶಫಾಲಿ ವರ್ಮಾ ಮತ್ತು ಮೆಗ್ ಲ್ಯಾನಿಂಗ್ ಅವರ 162 ರನ್‌ಗಳ ನಂತರ ಇದು ಎರಡನೇ ಅತ್ಯಧಿಕ ಜೊತೆಯಾಟದ ದಾಖಲೆಯಾಗಿದೆ.ಅಷ್ಟೇ ಅಲ್ಲದೆ ಈ ಋತುವಿನಲ್ಲಿ ಅತ್ಯಧಿಕ ಜೊತೆಯಾಟವಾಗಿದೆ.


Foods To Boost Memory: ಮಕ್ಕಳಲ್ಲಿ ನೆನೆಪಿನ ಶಕ್ತಿ ಹೆಚ್ಚಿಸಲು ಈ ಆಹಾರಗಳನ್ನು ತಪ್ಪದೇ ನೀಡಿ!


ವೊಲ್ವಾರ್ಡ್ಟ್ ಮತ್ತು ಮೂನಿ ಕೂಡ ಈ ಋತುವಿನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರರ್‌ಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದಿದ್ದಾರೆ.ಮೂನಿ ಈಗ ಅಗ್ರಸ್ಥಾನದಲ್ಲಿ ಹಾಗೂ ಆರ್‌ಸಿಬಿಯ ಸ್ಮೃತಿ ಮಂಧಾನ (80) ಪಟ್ಟಿಯಲ್ಲಿ ಎರಡನೇ ಮತ್ತು ವೊಲ್ವಾರ್ಡ್ ಮೂರನೇ ಸ್ಥಾನದಲ್ಲಿದ್ದಾರೆ.


ಒಟ್ಟಾರೆಯಾಗಿ, ಮೂನಿ ಅವರ ಅಜೇಯ 85 ರನ್ ಗಳು ಲೀಗ್ ಇತಿಹಾಸದಲ್ಲಿ ನಾಲ್ಕನೇ ಅತ್ಯಧಿಕ ವೈಯಕ್ತಿಕ ಮೊತ್ತವಾಗಿದೆ.


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.