Wrestlers Protest: ಕುಸ್ತಿಪಟುಗಳನ್ನು ಭೇಟಿಯಾದ ನರೇಶ್ ಟಿಕಾಯಿತ್, ಮೆಡಲ್ ಗಳನ್ನು ಗಂಗೆಗೆ ಅರ್ಪಿಸುವ ನಿರ್ಧಾರ ಕೈಬಿಟ್ಟ ಆಟಗಾರರು
Wrestlers Protest: ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೆಹಲಿಯ ಜಂತರ್ ಮಂತರ್ ಬಳಿ ಧರಣಿ ನಡೆಸಿದ ದೇಶದ ಖ್ಯಾತ ಕುಸ್ತಿಪಟುಗಳು ಇಂದು ಹರಿದ್ವಾರಕ್ಕೆ ತೆರಳಿ ಗಂಗಾ ನದಿಯಲ್ಲಿ ಪದಕಗಳನ್ನು ಅರ್ಪಿಸಲು ನಿರ್ಧರಿಸಿದ್ದರು. ಕುಸ್ತಿಪಟುಗಳ ಈ ಘೋಷಣೆಯ ನಂತರ, ಕ್ರೀಡಾ ಸಚಿವಾಲಯವು ಹೇಳಿಕೆಯನ್ನು ಬಿಡುಗಡೆ ಮಾಡಿ, ಕುಸ್ತಿಪಟುಗಳನ್ನು ಹಾಗೆ ಮಾಡಬಾರದು ಎಂದು ಕೋರಿತ್ತು. ಪ್ರಸ್ತುತ ನರೇಶ್ ಟಿಕಾಯಿತ್ ಅವರು ಕುಸ್ತಿಪಟುಗಳಿಂದ 5 ದಿನಗಳ ಕಾಲಾವಕಾಶವನ್ನು ಕೋರಿದ್ದಾರೆ ಮತ್ತು ಅವರ ಪದಕಗಳನ್ನು ಅವರಿಂದ ವಾಪಸ್ ಪಡೆದಿದ್ದಾರೆ
Wrestlers Protest: ಮೇ 28 ರಂದು, ಹೊಸ ಸಂಸತ್ ಭವನದ ಕಡೆಗೆ ಮೆರವಣಿಗೆ ನಡೆಸುತ್ತಿದ್ದಾಗ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಧರಣಿ ನಡೆಸುತ್ತಿದ್ದ ಕುಸ್ತಿಪಟುಗಳನ್ನು ದಾರಿಯಲ್ಲಿ ಪೊಲೀಸರು ತಡೆಹಿಡಿಡಿಡ್ದರು ಮತ್ತು ಈ ಸಂದರ್ಭದಲ್ಲಿ ಹಲವು ಕುಸ್ತಿಪಟುಗಳನ್ನು ಬಂಧಿಸಲಾಗಿತ್ತು. ಇದಾದ ಬಳಿಕ, ಪ್ರತಿಭಟನೆ ನಡೆಸುತ್ತಿರುವ ಅಗ್ರ ಕುಸ್ತಿಪಟುಗಳು ಹರಿದ್ವಾರದ ಗಂಗಾ ನದಿಯಲ್ಲಿ ತಮ್ಮ ಪದಕಗಳನ್ನು ಎಸೆಯಲು ನಿರ್ಧರಿಸಿದ್ದಾರೆ. ಕುಸ್ತಿಪಟುಗಳ ಈ ಘೋಷಣೆಯ ಬಳಿಕ, ಕ್ರೀಡಾ ಸಚಿವಾಲಯವು ಹೇಳಿಕೆಯನ್ನು ಬಿಡುಗಡೆ ಮಾಡಿತ್ತು, ಪದಕಗಳನ್ನು ಕೇವಲ ಆಟಗಾರರಿಗೆ ಮಾತ್ರ ನೀಡಲಾಗುವುದಿಲ್ಲ, ಅವುಗಳು ಇಡೀ ದೇಶಕ್ಕೆ ಸೇರಿದ್ದು ಮತ್ತು ಕುಸ್ತಿಪಟುಗಳ ನೀಡಿದ ದೂರಿನ ಕುರಿತು, ತನಿಖೆ ನಡೆಯುತ್ತಿದೆ ಎಂದು ಸಚಿವಾಲಯ ಹೇಳಿದೆ. ಆದರೆ, ನರೇಶ್ ಟಿಕಾಯಿತ್ ಸ್ವತಃ ಹರಿದ್ವಾರಕ್ಕೆ ಆಗಮಿಸಿ ಕುಸ್ತಿಪಟುಗಳಿಗೆ ಈ ಸಂಗತಿಯನ್ನು ವಿವರಿಸಿದ್ದಾರೆ. ನರೇಶ್ ಟಿಕಾಯಿತ್ ಅವರು ಕುಸ್ತಿಪಟುಗಳಿಂದ 5 ದಿನಗಳ ಕಾಲಾವಕಾಶವನ್ನು ಕೋರಿದ್ದಾರೆ ಮತ್ತು ಅವರ ಪದಕಗಳನ್ನು ಅವರಿಂದ ವಾಪಸ್ ಪಡೆದಿದ್ದಾರೆ.
ಹರಿದ್ವಾರಕ್ಕೆ ತಲುಪಿದ ಕುಸ್ತಿಪಟುಗಳು
ಮಹಿಳಾ ಕುಸ್ತಿಪಟುಗಳ ಮೇಲಿನ ಲೈಂಗಿಕ ಕಿರುಕುಳದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ದೇಶದ ಖ್ಯಾತ ಕುಸ್ತಿಪಟುಗಳು ಇಂದು ಗಂಗಾನದಿಯಲ್ಲಿ ತಮ್ಮ ಪದಕಗಳನ್ನು ಅರ್ಪಿಸಲು ನಿರ್ಧರಿಸಿದ್ದರು. ಈ ಬಗ್ಗೆ ಕುಸ್ತಿಪಟುಗಳೂ ಟ್ವೀಟ್ ಕೂಡ ಮಾಡಿದ್ದರು. ಈ ಪದಕ ದೇಶಕ್ಕೆ ಪವಿತ್ರವಾಗಿದ್ದು, ಇದನ್ನು ಪವಿತ್ರ ಗಂಗೆಯಲ್ಲಿ ಮಾತ್ರ ಅರ್ಪಿಸುತ್ತೇವೆ ಎಂದು ಹೇಳಿದ್ದರು. ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರು ಗಂಗಾನದಿಯಲ್ಲಿ ಪದಕ ಹರಿಬಿಡಲು ಹರಿದ್ವಾರಕ್ಕೆ ತಲುಪಿದ್ದರು. ಆದರೆ, ನರೇಶ್ ಟಿಕಾಯಿತ್ ಅವರನ್ನು ಹಾಗೆ ಮಾಡದಂತೆ ತಡೆದಿದ್ದಾರೆ. ಇದಾದ ಬಳಿಕ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಕುಸ್ತಿಪಟುಗಳು ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಆದರೆ, ಮಾಧ್ಯಮ ವರದಿಗಳ ಪ್ರಕಾರ, ಇಂಡಿಯಾ ಗೇಟ್ ಎದುರು ಉಪವಾಸಕ್ಕೆ ದೆಹಲಿ ಪೊಲೀಸರು ಇನ್ನೂ ಅವರಿಗೆ ಅನುಮತಿ ನೀಡಿಲ್ಲ ಎನ್ನಲಾಗಿದೆ.
'ಗುಂಡಿನೇಟು ತಿನ್ನಲು ಎಲ್ಲಿಗೆ ಬರಬೇಕು ಹೇಳಿ, ಪ್ರಮಾಣ ಮಾಡುತ್ತೇವೆ ಬೆನ್ನು ತೋರಿಸಲ್ಲ'
ಕ್ರೀಡಾ ಸಚಿವಾಲಯದ ಹೇಳಿಕೆ
ಗಂಗಾನದಿಯಲ್ಲಿ ಕುಸ್ತಿಪಟುಗಳು ಪದಕಗಳನ್ನು ಹರಿಬಿಡುವ ಕುರಿತು ಸಚಿವಾಲಯವು ಪ್ರತಿಕ್ರಿಯೆ ನೀಡಿದೆ. ಇದು ದೇಶದ ಪರಂಪರೆ, ಕುಸ್ತಿಪಟುಗಳಿಗೆ ಮಾತ್ರ ಇದರ ಮೇಲೆ ಹಕ್ಕಿಲ್ಲ ಎಂದು ಸಚಿವಾಲಯ ಹೇಳಿದೆ. ಸಂಜೆ 6:00 ಗಂಟೆಗೆ, ಕುಸ್ತಿಪಟುಗಳು ಗಂಗಾ ನದಿಯಲ್ಲಿ ಪದಕವನ್ನು ಹರಿಬಿಡುವುದಾಗಿ ಘೋಷಿಸಿದ್ದರು. ಇದಾದ ಬಳಿಕ ದೆಹಲಿಯ ಇಂಡಿಯಾ ಗೇಟ್‌ನಲ್ಲಿ ಅನಿರ್ಧಿಷ್ಟಾವಧಿ ಉಪವಾಸ ನಡೆಸುವ ಕುರಿತು ಹೇಳಿಕೊಂಡಿದ್ದರು. ಕುಸ್ತಿಪಟುಗಳ ಬೆಂಬಲಕ್ಕೆ ಕಾಂಗ್ರೆಸ್ ನಾಯಕರು ಮತ್ತು ಅವರ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಒಂದುಗೂಡಿದ್ದಾರೆ. ಮೇ 23 ರಿಂದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೇಶದ ಅಗ್ರ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಇದಲ್ಲದೇ ಸಂಸದನ ಬಂಧನಕ್ಕೆ ಅವರು ಒತ್ತಾಯಿಸಿದ್ದಾರೆ. ಬ್ರಿಜ್ಭೂಷಣ್ ಶರಣ್ ಸಿಂಗ್ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಕುಸ್ತಿಪಟುಗಳು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.