WFI Assistant Secretary Vinod Tomar Suspend: ಕ್ರೀಡಾ ಸಂಸ್ಥೆಯ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಕ್ರೀಡಾ ಸಚಿವಾಲಯವು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ಶನಿವಾರ ಅಮಾನತುಗೊಳಿಸಿದೆ. ಜೊತೆಗೆ ಶರಣ್‌ ಅವರ ಯುಪಿ ಭದ್ರಕೋಟೆಯಾದ ಗೊಂಡಾದಲ್ಲಿ ಪ್ರಾರಂಭವಾಗಲಿದ್ದ ಓಪನ್ ಚಾಂಪಿಯನ್‌ಶಿಪ್ ಅನ್ನು ಸಚಿವಾಲಯವು ರದ್ದುಗೊಳಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Rohit Sharma: ಮೈದಾನದಲ್ಲಿ ರೋಹಿತ್ ಶರ್ಮಾ ಮಾಡಿದ ಈ ಕೆಲಸಕ್ಕೆ ಫಿದಾ ಆದ ಕೋಟ್ಯಂತರ ಕ್ರಿಕೆಟ್ ಫ್ಯಾನ್ಸ್..!


ಶೀಘ್ರದಲ್ಲೇ ರಚನೆಯಾಗಲಿರುವ ಸಚಿವಾಲಯದ ಮೇಲ್ವಿಚಾರಣಾ ಸಮಿತಿಯು ಭಾರತೀಯ ಕುಸ್ತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿರುತ್ತದೆ ಎಂದು ಮೂಲಗಳು ತಿಳಿಸಿವೆ.


ಇದನ್ನೂ ಓದಿ: Indian Cricketers Menu: ಕೊಹ್ಲಿ ಸೇರಿ ಟೀಂ ಇಂಡಿಯಾ ಆಟಗಾರರು ಸೇವಿಸುವ ಆಹಾರ ಏನು ಗೊತ್ತಾ? ವಿಡಿಯೋದಲ್ಲಿ ಬಹಿರಂಗ


ಶುಕ್ರವಾರ ತಡರಾತ್ರಿ ನಡೆದ ಮ್ಯಾರಥಾನ್ ಸಭೆಯ ಕೊನೆಯಲ್ಲಿ, ಕ್ರೀಡಾ ಸಚಿವ ಅನುರಾಗ್ ಠಾಕೂರ್, ವಿನೇಶ್ ಫೋಗಟ್, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ರವಿ ಸೇರಿದಂತೆ ದೇಶದ ಕೆಲವು ಪ್ರಮುಖ ಕುಸ್ತಿಪಟುಗಳು ಮಾಡಿರುವ ಆರೋಪಗಳ ಬಗ್ಗೆ ತನಿಖೆ ನಡೆಸಲು ಉಸ್ತುವಾರಿ ಸಮಿತಿಯನ್ನು ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.