Indian Cricketers Menu: ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯ ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದೆ. ಅಮೋಘ ಪ್ರದರ್ಶನ ನೀಡಿದ ಭಾರತದ ಬೌಲರ್‌ಗಳು ನ್ಯೂಜಿಲೆಂಡ್ ತಂಡವನ್ನು 34.3 ಓವರ್‌ಗಳಲ್ಲಿ 108 ರನ್‌ಗಳಿಗೆ ಆಲೌಟ್ ಮಾಡಿದ್ದರು. ಈ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 20.1 ಓವರ್ ನಲ್ಲಿ 111 ರನ್ ಕಲೆ ಹಾಕಿ ಸರಣಿ ವಶಪಡಿಸಿಕೊಂಡಿದೆ.
ಮೊಹಮ್ಮದ್ ಶಮಿ 18 ರನ್‌ಗಳಿಗೆ 3 ಆಟಗಾರರನ್ನು ಔಟ್ ಮಾಡಿ, ನ್ಯೂಜಿಲೆಂಡ್ ಬ್ಯಾಟಿಂಗ್ ನ ಮುಖ್ಯ ಕೊಂಡಿಗಳನ್ನು ಹೊಡೆದುರುಳಿಸಿದರು. ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು. ಇನ್ನು ವಾಷಿಂಗ್ಟನ್ ಸುಂದರ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 2 ವಿಕೆಟ್ ಉರುಳಿಸಿದ್ದಾರೆ.
ಇದನ್ನೂ ಓದಿ: IND vs NZ: ಬೌಲಿಂಗ್-ಬ್ಯಾಟಿಂಗ್ ನಲ್ಲಿ ಮಿಂಚಿದ ಟೀಂ ಇಂಡಿಯಾ: ಕೀವೀಸ್ ವಿರುದ್ಧ ಗೆದ್ದು ಸರಣಿ ವಶಪಡಿಸಿಕೊಂಡ ರೋಹಿತ್ ಪಡೆ
ಆದರೆ ಟೀಂ ಇಂಡಿಯಾದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಪಂದ್ಯಕ್ಕೂ ಮುನ್ನ ಅಭಿಮಾನಿಗಳಿಗೆ ರಾಯ್‌ಪುರ ಕ್ರೀಡಾಂಗಣವನ್ನು ವಿಡಿಯೋ ಮೂಲಕ ತೋರಿಸಿದರು. ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ನೀಡಿದ ಅವರು ಟೀಂ ಇಂಡಿಯಾದ ಆಟಗಾರರು ರಾತ್ರಿ ಊಟಕ್ಕೆ ಏನು ತಿನ್ನುತ್ತಾರೆ ಎಂಬುದನ್ನು ತೋರಿಸಿದರು. ಈ ವೀಡಿಯೊದಲ್ಲಿ, ಯುಜ್ವೇಂದ್ರ ಚಹಾಲ್ ಮೊದಲಿಗೆ ಆಟಗಾರರನ್ನು ತೋರಿಸಿದರೆ, ಬಳಿಕ ಅವರ ಕಿಟ್ ಬ್ಯಾಗ್‌ಗಳು, ಡ್ರೆಸ್ಸಿಂಗ್ ಕೋಣೆಯನ್ನು ವಿಡಿಯೋದಲ್ಲಿ ತೋರಿಸುತ್ತಾರೆ. ಇದಾದ ನಂತರ ಫುಟ್ ಸೆಕ್ಷನ್ ಗೆ ತೆರಳಿ ಭಾರತ ತಂಡದ ಆಟಗಾರರಿಗೆ ಏನೆಲ್ಲಾ ಮೆನು ಇದೆ ಎಂಬುದನ್ನು ತೋರಿಸುತ್ತಾರೆ.
Inside #TeamIndia's dressing room in Raipur! 👌 👌
𝘼 𝘾𝙝𝙖𝙝𝙖𝙡 𝙏𝙑 📺 𝙎𝙥𝙚𝙘𝙞𝙖𝙡 👍 👍 #INDvNZ | @yuzi_chahal pic.twitter.com/S1wGBGtikF
— BCCI (@BCCI) January 20, 2023
“ನಾವು ನಿಮ್ಮನ್ನು ಫುಡ್ ಸೆಕ್ಷನ್ ಗೆ ಕರೆದೊಯ್ಯುತ್ತೇವೆ. ನಾವು ಏನು ತಿನ್ನುತ್ತೇವೆ ಎಂದು ನೀವು ಆಶ್ಚರ್ಯ ಪಡುತ್ತಿರಬೇಕು. ನಾನ್, ಸ್ಟೀಮ್ ರೈಸ್, ಜೀರಾ ರೈಸ್, ದಾಲ್ ಟೊಮ್ಯಾಟೊ, ಆಲೂಗಡ್ಡೆ ಜೀರಾ, ಪನೀರ್ ಟೊಮೆಟೊ, ಗ್ರೀನ್ ವೆಜಿಟೇಬಲ್ಸ್, ಪಾಸ್ಟಾ ಆಂಡ್ ಮಿಕ್ಸ್ ಸಾಸ್, ಹಕ್ಕಾ ನೂಡಲ್ಸ್ ಇದೆ” ಎಂದು ವಿಡಿಯೋದಲ್ಲಿ ತೋರಿಸಿದ್ದಾರೆ.
ಈ ವೇಳೆ ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾ ಯುಜುವೇಂದ್ರ ಚಹಾಲ್ ಜೊತೆ ತಮಾಷೆ ಮಾಡಿದ್ದಾರೆ. ರೋಹಿತ್ ಶರ್ಮಾ, ಚಾಹಲ್‌ನ ಹತ್ತಿರ ಹಾದುಹೋಗುತ್ತಾ, “ನಿಮಗೆ ಉತ್ತಮ ಭವಿಷ್ಯವಿದೆ” ಎಂದು ಗೇಲಿ ಮಾಡಿದರು. ರೋಹಿತ್ ಅವರ ಈ ಮಾತಿಗೆ ಚಹಾಲ್ ನಕ್ಕರು. ವಿಡಿಯೋದಲ್ಲಿ ದ್ವಿಶತಕ ಸಿಡಿಸಿದ ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಜೊತೆಯೂ ಚಾಹಲ್ ಮಾತನಾಡಿದ್ದಾರೆ. ನೀವು 200 ರನ್ ಗಳಿಸಿದಾಗ ಅದರಲ್ಲಿ ನನ್ನ ಕೊಡುಗೆ ಏನು ಎಂದು ಚಹಾಲ್ ಇಶಾನ್ ಅವರನ್ನು ಕೇಳಿದ್ದಾರೆ.
ಇದನ್ನೂ ಓದಿ: ICC Men’s ODI Ranking: ಐತಿಹಾಸಿಕ ಸಾಧನೆಗೆ ಒಂದೇ ಮೆಟ್ಟಿಲು: ಮೂರು ಸ್ವರೂಪದಲ್ಲೂ ಅಗ್ರಸ್ಥಾನ ಪಡೆಯುತ್ತಾ ಟೀಂ ಇಂಡಿಯಾ?
ಯುಜ್ವೇಂದ್ರ ಚಹಾಲ್ ಪ್ಲೇಯಿಂಗ್ 11ನಲ್ಲಿ ಅವಕಾಶವನ್ನು ಪಡೆದಿಲ್ಲ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯವನ್ನು ಚಹಾಲ್ ಆಡಿದ್ದರು. ಆದರೆ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದರು. ಎರಡನೇ ಏಕದಿನ ಪಂದ್ಯದಲ್ಲಿ ಕುಲದೀಪ್ ಯಾದವ್‌ಗೆ ಅವಕಾಶ ನೀಡಿ ಮೂರು ವಿಕೆಟ್ ಪಡೆದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.