WTC Final 2025: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ 2025ರ ಜೂನ್ 11 ರಿಂದ 15ರವರೆಗೆ ಲಾರ್ಡ್ಸ್‌ನ ಐತಿಹಾಸಿಕ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಫೈನಲ್‌ನಲ್ಲಿ ಯಾವ ಎರಡು ತಂಡಗಳು ಮುಖಾಮುಖಿಯಾಗಲಿವೆ ಎಂಬುದರ ಬಗ್ಗೆ ಸ್ಟಾರ್‌ ಕ್ರಿಕೆಟಿಗನೊಬ್ಬ ಭವಿಷ್ಯ ನುಡಿದಿದ್ದಾರೆ. ಭಾರತದ ಮಾಜಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರೇ ಈ ಭವಿಷ್ಯ ನುಡಿದಿದ್ದಾರೆ. ಈ ಐಸಿಸಿ ಟೂರ್ನಿಯ ಎರಡು ಸೀಸನ್‌ಗಳಲ್ಲಿ ಭಾರತ ತಂಡ ಫೈನಲ್ ತಲುಪಿತ್ತು. ಆದರೆ ಮೊದಲು ನ್ಯೂಜಿಲೆಂಡ್ ಮತ್ತು ನಂತರ ಆಸ್ಟ್ರೇಲಿಯಾ ವಿರುದ್ಧ ಸೋಲುವ ಮೂಲಕ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿತ್ತು. 


COMMERCIAL BREAK
SCROLL TO CONTINUE READING

ದಿನೇಶ್ ಕಾರ್ತಿಕ್ ಭವಿಷ್ಯ!


ಭಾರತದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ 2024-25ರ WTC ಋತುವಿನಲ್ಲಿ ಯಾವ ತಂಡವು ಫೈನಲ್ ತಲುಪಲಿದೆ ಎಂಬುದರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ವಾಸ್ತವವಾಗಿ ಅಭಿಮಾನಿಯ ಪ್ರಶ್ನೆಗೆ ಉತ್ತರಿಸುವಾಗ ಕಾರ್ತಿಕ್ ಈ ಭವಿಷ್ಯ ನುಡಿದಿದ್ದಾರೆ. ಫೈನಲ್‌ನಲ್ಲಿ ಭಾರತವನ್ನು ಯಾರು ಎದುರಿಸಲಿದ್ದಾರೆ ಅಂತಾ ಅಭಿಮಾನಿಯೊಬ್ಬರು ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ತಿಕ್, ʼಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ ಫೈನಲ್ ಆಡಲಿದೆ ಎಂದು ನಾನು ಭಾವಿಸುತ್ತೇನೆ' ಎಂದಿದ್ದಾರೆ. ಕಾರ್ತಿಕ್, ʼಕಳೆದ ವರ್ಷ WTC ಫೈನಲ್‌ನಲ್ಲಿ ಆಸ್ಟ್ರೇಲಿಯಾದಿಂದ ಹೀನಾಯವಾಗಿ ಸೋತ ನಂತರ, ಈ ಬಾರಿ ಸೇಡು ತೀರಿಸಿಕೊಳ್ಳಲು ಭಾರತಕ್ಕೆ ಉತ್ತಮ ಅವಕಾಶವಿದೆ' ಎಂದು ಹೇಳಿದ್ದಾರೆ.


ಇದನ್ನೂ ಓದಿ: ವಾಮಿಕಾ ಜನಿಸಿದ ಬಳಿಕ ನಮ್ಮ ಬದುಕಲ್ಲಿ ಹೀಗಾಯ್ತು... ಮಗಳ ಬಗ್ಗೆ ಅನುಷ್ಕಾ ಶರ್ಮಾ ಹೇಳಿಕೆ ವೈರಲ್


ಭಾರತ ಹೀನಾಯವಾಗಿ ಸೋಲು ಕಂಡಿತ್ತು!


ಇನ್ನು ದಿನೇಶ್ ಕಾರ್ತಿಕ್, '೨ ವರ್ಷಗಳ ಹಿಂದೆ ಓವಲ್‌ನಲ್ಲಿ ನಮ್ಮನ್ನು ಸೋಲಿಸಿದ್ದರು. ಇದೀಗ 2025ರಲ್ಲಿ ನಮಗೆ ಮತ್ತೆ ಅವಕಾಶ ಸಿಕ್ಕಿದ್ದು, ಭಾರತವು ಈ ಬಾರಿ ಅದ್ಭುತ ಮಾಡಲೇಬೇಕು ಅಂತಾ ನಾನು ಬಯಸುತ್ತೇನೆ. ಈ ಬಾರಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಬೇಕು. 2023ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಲಂಡನ್‌ನ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆದಿತ್ತು, ಇದರಲ್ಲಿ ಭಾರತ 209 ರನ್‌ಗಳಿಂದ ಸೋಲನ್ನು ಎದುರಿಸಬೇಕಾಯಿತು. ಸತತ ೨ನೇ ಬಾರಿಗೆ ಈ ಪ್ರಶಸ್ತಿಯನ್ನು ಗೆಲ್ಲುವ ಕನಸು ಭಗ್ನಗೊಂಡಿತ್ತು. 2021ರಲ್ಲಿ ಸೌತಾಂಪ್ಟನ್‌ನಲ್ಲಿ ನ್ಯೂಜಿಲೆಂಡ್ 8 ವಿಕೆಟ್‌ಗಳಿಂದ ಟೀಂ ಇಂಡಿಯಾವನ್ನು ಸೋಲಿಸಿತ್ತು.


ಟಾಪ್ ಸ್ಥಾನದಲ್ಲಿರುವ ಭಾರತ ತಂಡ 


ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಟ್ಟಿಯಲ್ಲಿ ಭಾರತ ತಂಡ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ೨ನೇ ಸ್ಥಾನದಲ್ಲಿ ಮುಂದುವರಿದಿದೆ. WTC ಫೈನಲ್‌ನ ಓಟದಲ್ಲಿ ತನ್ನ ಸ್ಥಾನವನ್ನು ಬಲಪಡಿಸುವ ಗುರಿಯೊಂದಿಗೆ ಭಾರತವು ಈ ವರ್ಷದ ನಂತರ ೫ ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯನ್ ತಂಡವನ್ನು ಎದುರಿಸಲಿದೆ. ಇದು ಬಹಳ ಮಹತ್ವದ್ದಾಗಿದೆ. WTC ಟೇಬಲ್ ಬಗ್ಗೆ ಹೇಳುವುದಾರೆ, ನ್ಯೂಜಿಲೆಂಡ್ (೩ನೇ), ಇಂಗ್ಲೆಂಡ್ (೪ನೇ), ದಕ್ಷಿಣ ಆಫ್ರಿಕಾ (೫ನೇ) ಮತ್ತು ಬಾಂಗ್ಲಾದೇಶ (೬ನೇ) ಮತ್ತು ಶ್ರೀಲಂಕಾ (೭ನೇ) ಫೈನಲ್‌ಗೆ ತಲುಪುವ ರೇಸ್‌ನಲ್ಲಿರುವ ತಂಡಗಳಾಗಿವೆ. 


ಇದನ್ನೂ ಓದಿ: ಇವರೇ ನೋಡಿ ವಿಶ್ವ ಕ್ರಿಕೆಟ್‌ʼನ 5 ಶ್ರೇಷ್ಠ ನಾಯಕರು: ಈ ಪಟ್ಟಿಯಲ್ಲಿದ್ದಾರೆ ಭಾರತದ ಒಬ್ಬನೇ ಒಬ್ಬ ಕ್ಯಾಪ್ಟನ್‌... ಆತ ಬೇರಾರು ಅಲ್ಲ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.